ಶಿಡ್ಲಘಟ್ಟ:ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ-ಕಾರ್ತಿಕ್‍ರೆಡ್ಡಿ

Source: tamim | By Arshad Koppa | Published on 1st August 2017, 7:55 AM | Coastal News | Guest Editorial |

ಶಿಡ್ಲಘಟ್ಟ,ಜುಲೈ31: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧಮುಕ್ತ ಸಮಾಜ ನಿರ್ಮಿಸಲು ನಾಗರಿಕರ ಸಹಕಾರ ಅತ್ಯಗತ್ಯವೆಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ ಕರೆ ನೀಡಿದರು.


    ತಾಲೂಕಿನ ವರದನಾಯಕನಹಳ್ಳಿಯ ಬಾಲಾಜಿ ಕಲ್ಯಾಣಮಂಟಪದಲ್ಲಿ ಜಿಲ್ಲಾ ಪೋಲಿಸ್ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ಶಿಡ್ಲಘಟ್ಟ ವೃತ್ತದ ಬೀಟ್ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬ್ರಿಟೀಷರ ಕಾಲಾವಧಿಯಿಂದಲೂ ಬೀಟ್ ಪೋಲಿಸ್ ವ್ಯವಸ್ಥೆ ಜಾರಿಯಲ್ಲಿದೆ ಪೋಲಿಸ್ ಇಲಾಖೆಯನ್ನು ಜನಸ್ನೇಹಿಯಾಗಿ ಪರಿವರ್ತಿಸಲು ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ ಬೀಟ್ ವ್ಯವಸ್ಥೆಯನ್ನು ಬಲಪಡಿಸಲು ಯೋಜನೆಯನ್ನು ಜಾರಿಗೊಳಿಸಲಾಗಿದ್ದು ನಾಗರಿಕರು ಸಹಕಾರ ಅತ್ಯಗತ್ಯವೆಂದರು.
    ಜಿಲ್ಲೆಯಲ್ಲಿ ಪೋಲಿಸ್ ವ್ಯವಸ್ಥೆಯನ್ನು ಬಲಪಡಿಸಲು ಈಗಾಗಲೇ ಅನೇಕ ಬದಲಾವಣೆಗಳನ್ನು ತರಲಾಗಿದೆ ಗ್ರಾಮ ಮಟ್ಟದಲ್ಲಿ ತಲಾ 50 ಸದಸ್ಯರನ್ನು ಒಳಗೊಂಡಂತೆ ಬೀಟ್ ಸಮಿತಿಗಳನ್ನು ರಚಿಸಿ 2500 ಮಂದಿ ಸದಸ್ಯರ ಸಹಕಾರದಿಂದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಅಕ್ರಮವಾಗಿ ಮದ್ಯ ಮಾರಾಟ ಪ್ರಕರಣಗಳ ಕುರಿತು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕಡಿವಾಣ ಹಾಕಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದೆಂದರು.
    ಜಿಲ್ಲೆಯ ಪೋಲಿಸ್ ಇಲಾಖೆಯಲ್ಲಿ ಸುಮಾರು 200 ಮಂದಿ ಹುದ್ದೆಗಳು ಖಾಲಿಯಾಗಿದೆ ಈಗಾಗಲೇ 100 ಮಂದಿಯನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಖಾಲಿಯಾಗಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ ಪೋಲಿಸ್ ಇಲಾಖೆಯ ವಸತಿಗೃಹಗಳನ್ನು ನಿರ್ಮಿಸಿ ಅಭಿವೃಧ್ಧಿಗೊಳಿಸಲು ಈಗಾಗಲೇ ಕ್ರಮವಹಿಸಲಾಗಿದೆ ಎಂದರು.
     ಹೋಬಳಿ ಕೇಂದ್ರದಲ್ಲಿ ಎಂ-ಸ್ಯಾಂಡ್: ಜಿಲ್ಲೆಯಲ್ಲಿ ಅಂರ್ತಜಲ ಮಟ್ಟವನ್ನು ಸಂರಕ್ಷಣೆ ಮಾಡುವ ಸಲುವಾಗಿ ಜಿಲ್ಲಾಡಳಿತ ಮರಳು ಸಾಗಾಣಿಕೆಯನ್ನು ನಿಷೇಧಿಸಿದೆ ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಕಟ್ಟಡಗಳ ನಿರ್ಮಾಣ ಮತ್ತು ಜನಸಾಮಾನ್ಯರು ಮನೆಗಳನ್ನು ನಿರ್ಮಿಸಲು ಮರಳಿನ ಅಭಾವದ ಕುರಿತು ತಮಗೆ ಅರಿವು ಇದೇ ಆದರೇ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 90 % ಅಕ್ರಮ ಮರಳು ಸಾಗಾಣಿಕೆಯನ್ನು ನಿಯಂತ್ರಣ ಮಾಡಲಾಗಿದೆ ಸರಕಾರಿ ಕಟ್ಟಡಗಳನ್ನು ಮತ್ತು ಮನೆಗಳನ್ನು ನಿರ್ಮಿಸಲು ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಎಂ-ಸ್ಯಾಂಡ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದೆಂದರು.
    ದೂರುಗಳ ಸುರಿಮಳೆ: ತಾಲೂಕಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮವಾಗಿ ಎಲ್ಲೆಡೆ ಮದ್ಯಮಾರಾಟವಾಗುತ್ತಿದೆ ಬಡ ಕುಟುಂಬಗಳು ಬೀದಿಪಾಲಾಗುತ್ತಿದೆ ಬಡ ಕುಟುಂಗಳನ್ನು ಬೀದಿಗೆ ತಳ್ಳಿ ಸರಕಾರದ ಭೊಕ್ಕಸ್ಸು ತುಂಬಿಸಿಕೊಳ್ಳುವುದು ಕ್ರಮ ಸರಿಯೇ? ಎಂದು ನಾಗರಿಕರು ಪ್ರಶ್ನಿಸಿದರು ರೇಷ್ಮೆ ನಗರವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸುಗುಮ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ ಪ್ರಾರ್ಥನಾ ಮಂದಿರ ಸಮೀಪದಲ್ಲಿ ಮದ್ಯಮಾರಾಟ ಕೇಂದ್ರವನ್ನು ಕೂಡಲೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
    ದಲಿತರು ಸ್ವಾಧೀನದಲ್ಲಿರುವ ಜಮೀನುಗಳನ್ನು ಬಲಾಢ್ಯರು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳಿಂದ ಬಂದ ಆದೇಶದನ್ವಯ ಕಾರ್ಯನಿರ್ವಹಿಸಲು ಅಧೀನ ಇಲಾಖಾಧಿಕಾರಿಗಳಿಗೆ ಸೂಚಿಸಬೇಕೆಂದು ಹಲವರು ಮನವಿ ಮಾಡಿದರು ಸುಪ್ರೀಂಕೋರ್ಟ್ ಆದೇಶದನ್ವಯ ಸಿವಿಲ್ ಪ್ರಕರಣಗಳಲ್ಲಿ ಪೋಲಿಸರು ಹಸ್ತಾಕ್ಷೇಪ ಮಾಡಲು ಸಾಧ್ಯವಿಲ್ಲ ಡಿಸಿ-ಎಸಿ ಆದೇಶಗಳನ್ನು ನಕಲುಗಳನ್ನು ತಹಶೀಲ್ದಾರ್‍ಗಳಿಗೆ ತೋರಿಸಿ ಅವರ ಮೂಲಕ ಬರುವ ಮಾಹಿತಿಯನ್ನು ಆಧರಿಸಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದೆಂದು ಎಸ್‍ಪಿ ಭರವಸೆ ನೀಡಿದರು.
    ಈ ಸಂದರ್ಭದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್,ನಗರ ಪೋಲಿಸ್‍ಠಾಣೆಯ ಪಿಎಸ್‍ಐ ನವೀನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಡ್ಲಘಟ್ಟ ತಾಲೂಕಿನ ವರದನಾಯಕನಹಳ್ಳಿ ಗ್ರಾಮದ ಬಾಲಾಜಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಬೀಟ್ ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ ಭಾಗವಹಿಸಿದರು.

 

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...