ಉಪ್ಪೋಣಿಯ ಶಾರದಾಂಬ ಪಿಯು ಕಾಲೇಜ್; ವಾಣಿಜ್ಯ ವಿಭಾಗದಲ್ಲಿ ಹೊನ್ನಾವರ ತಾಲೂಕಿಗೆ ಪ್ರಥಮ, ಉಮ್ಮೆ ರಿಹಾ ಟಾಪರ್

Source: sonews | By Staff Correspondent | Published on 16th July 2020, 2:47 PM | Coastal News |

ಭಟ್ಕಳ: ಹೊನ್ನಾವರ ತಾಲೂಕಿನ  ಉಪ್ಪೋಣಿಯ ಶ್ರೀ ಶಾರದಾಂಬ ಪದವಿ ಪೂರ್ವ ಕಾಲೇಜ್ ವಾಣಿಜ್ಯ ವಿಭಾಗವು ಶೇ.100 ಫಲಿತಾಂಶ ದಾಖಲಿಸುವುದರ ಮೂಲಕ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಸುರೇಶ್ ಜಿ. ವೈದ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಸ್ಥೆಯ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸುವುದರ ಮೂಲಕ ಸಂಸ್ಥೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿರುವ ಅವರು ಉಮ್ಮೇ ರಿಹಾ ಶೇ.94%, ಆಯಿಶಾ ಹಿಬಾ ಶೇ.91%, ಸಮ್ರೀನ್ ಬಾನು ಶೇ.89.83%, ಹಾಗೂ ಶಿಫಾನಾ 89.38% ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಟಾಪರ್ ಆಗಿದ್ದಾರೆ. 

ಒಟ್ಟು22 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಮ್ಯಾನೇಜಿಂಗ್ ಕಮಿಟಿಯ ಅಧ್ಯಕ್ಷ ಆರ್.ರಾಯ್ಕರ್, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ರಹ್ಮಾನ್, ಉಪಾಧ್ಯಕ್ಷ ಜಿಫ್ರಿ ದಾವೂದ್ ಆಹ್ಮದ್ ಮುಕ್ತೆಸರ್, ಕಾರ್ಯದರ್ಶಿ ಬಾಷ ಅಲಿ ಖಾನ್, ಖಜಾಂಚಿ ಜಾಫರ್ ಗೈಮಾ ಹಾಗೂ ಉಪನ್ಯಾಸಕ ವರ್ಗ ಅಭಿನಂದಿಸಿದ್ದಾರೆ. 
 

Read These Next

ಭಟ್ಕಳ: ಸದಸ್ಯರ ವಿರೋಧದ ನಡುವೆಯೂ ಜಾಲಿ ಪ.ಪಂ ಕಟ್ಟಡ ಕಾಮಗಾರಿ ಆರಂಭ; ಸದಸ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ; ಸ.ನಂ.242 ರಲ್ಲಿ ಜಾಲಿ ಪಟ್ಟಣ ಪಂಚಯತ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದಸ್ಯರ ತೀವ್ರ ವಿರೋಧದ ನಡುವೆಯೂ ...

ಮತದಾರರ ಪಟ್ಟಿ ಪ್ರಕಟ ; ಆಕ್ಷೇಪಣೆಗೆ ಅವಕಾಶ                                                                     

ಕಾರವಾರ:ಗ್ರಾಮ ಪಂಚಾಯತಗಳ 2020 ರ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲೆಯ 12 ತಾಲೂಕಿನ 231 ಗ್ರಾಮ ಪಂಚಾಯತಗಳ ಮತದಾರರ ಪಟ್ಟಿಯನ್ನು ...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು   ಅರ್ಜಿ ಆಹ್ವಾನ      

ಕಾರವಾರ: ಡಾ: ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ...