ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ:ಆರೋಪಿ ಪೋಲೀಸರ ವಶಕ್ಕೆ

Source: so news | By Manju Naik | Published on 14th April 2019, 1:46 AM | Coastal News | Don't Miss |


ಭಟ್ಕಳ:ಶಾಲೆಯಿಂದ ಮನೆಗೆ ಮರಳಿದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೊರ್ವನನ್ನು ಗ್ರಾಮೀಣ ಠಾಣಾ ಪೊಲೀಸರು ಶುಕ್ರವಾರದಂದು ಬಂಧಿಸಿ ಕಾರವಾರದ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆರೋಪಿ ತಾಲೂಕಿನ ಗುಳ್ಮಿಯ ನಿವಾಸಿ ರಫಿಕ್ ಚೆಮನ್ ಸಾಬ್ ಶೆಫಖಂಡಿ(31) ಎಂದು ತಿಳಿದು ಬಂದಿದೆ. 
ರಫಿಕ್ ಮಂಗಳವಾರದಂದು ಶಾಲೆಯಿಂದ ಮನೆಗೆ ಮರಳಿದ 13ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಮನೆಯಲ್ಲಿ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಎಂದಿನಂತಿರದ ಮಗಳ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದ್ದು ತಕ್ಷಣ ತಾಯಿ ಅವಳನ್ನು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ರಫಿಕ್ ಚೆಮನ್ ಸಾಬ್ ಶೆಫಖಂಡಿನ್ನು ಪೊಲೀಸರು ವಶಕ್ಕೆ ಪಡೆದು ಕಾರವಾರದ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. 
ಗ್ರಾಮೀಣ ಪಿಎಸ್‍ಐ ರವಿ ಜಿ.ಎ, ಸಿಬ್ಬಂದಿಗಳಾದ ದೀಪಕ ನಾಯ್ಕ, ಮಹಿಳಾ ಸಿಬ್ಬಂದಿ ರಾಜೇಶ್ವರಿ ಸೇರಿದಂತೆ ಇತರರು ಆರೋಪಿಯನ್ನು ವಶಕ್ಕೆ ಪಡೆಯಲು ಕಾರ್ಯತಂತ್ರ ರೂಪಿಸಿದ್ದರು.

 

Read These Next

ದಕ್ಷಿಣಕನ್ನಡ: ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು. ಹೋಂ ಕ್ವಾರೆಂಟೈನಲ್ಲಿರುವಂತೆ ಸೂಚನೆ.

ಮಂಗಳೂರು : ಕಾಲೇಜುಗಳು ಆರಂಭವಾಗಿ ವಾರವಾಗಿದ್ದು, ದ.ಕ.ದಲ್ಲಿ 29 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್‌ ಪತ್ತೆಯಾಗಿದೆ. ಇದರಲ್ಲಿ ...

ಬೇಂಗ್ರೆ ಪಂಚಾಯತ್ ವ್ಯಾಪ್ತಿಯ 15ಅಂಗನವಾಡಿಗಳಿಗೆ ಕಸ ಸಂಗ್ರಹ ಪೆಟ್ಟಿಗೆ ವಿತರಣೆ

ಭಟ್ಕಳ: 15ನೇ ಹಣಕಾಸು ಯೋಜನೆಯಡಿ ಘನತ್ಯಾಜ್ಯ ನಿರ್ವಾಹಣೆಗಾಗಿ ತಾಲೂಕಿನ ಬೇಂಗ್ರೆ ಗ್ರಾ.ಪಂ ವ್ಯಾಪ್ತಿಯ 15 ಅಂಗನವಾಡಿ ಕೇಂದ್ರಗಳಿಗೆ ಕಸ ...

ದಕ್ಷಿಣಕನ್ನಡ: ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು. ಹೋಂ ಕ್ವಾರೆಂಟೈನಲ್ಲಿರುವಂತೆ ಸೂಚನೆ.

ಮಂಗಳೂರು : ಕಾಲೇಜುಗಳು ಆರಂಭವಾಗಿ ವಾರವಾಗಿದ್ದು, ದ.ಕ.ದಲ್ಲಿ 29 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್‌ ಪತ್ತೆಯಾಗಿದೆ. ಇದರಲ್ಲಿ ...