ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದ ಮುನಿರತ್ನ; ರಕ್ಷಣೆ ನೀಡಿದರೆ 'ಸಿಟ್' ಮುಂದೆ ದಾಖಲೆ ಬಿಡುಗಡೆ: ಸಂತ್ರಸ್ತೆ
ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿಸಿ, ಅವರನ್ನು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಸಚಿವ ಸ್ಥಾನ ಪಡೆದುಕೊಂಡಿದ್ದರು' ಎಂದು ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕರಣದ ಸಂತ್ರಸ್ತೆ, ಶಾಸಕ ಮುನಿರತ್ನ 'ನಿನ್ನ ಮಕ್ಕಳನ್ನು ಸಾಯಿಸುತ್ತೇನೆ' ಎಂದು ಬೆದರಿಸಿ ಹನಿಟ್ರ್ಯಾಪ್ ಮಾಡಿಸಿಕೊಂಡಿದ್ದಾರೆ. ಸರಕಾರ ಸೂಕ್ತ ರಕ್ಷಣೆ ನೀಡಿದರೆ ವಿಶೇಷ ತನಿಖಾ ತಂಡ(ಸಿಟ್) ಮುಂದೆ ಈ ಕುರಿತ ದಾಖಲೆಗಳನ್ನು ಬಹಿರಂಗ ಪಡಿಸುತ್ತೇನೆ' ಎಂದು ತಿಳಿಸಿದರು.
“ಮುನಿರತ್ನ ನನ್ನೊಂದಿಗೆ ಸಲುಗೆಯಿಂದ ಮಾತನಾಡಿ, ಯಾಮಾರಿಸಿ, ಬೆದರಿಸಿ, ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ. ನನಗೆ ಹಲವು ಬಾರಿ ವೀಡಿಯೊ ಕರೆ ಮಾಡಿದ್ದಾರೆ. ಅಲ್ಲದೆ, ಅವರದ್ದೇ ಮೊಬೈಲ್‌ನಲ್ಲಿ ಮಾಜಿ ಸಿಎಂ ಒಬ್ಬರ ಅಶ್ಲೀಲ ವೀಡಿಯೊ ಮತ್ತು ಅವರ ಮುಖ ಎಡಿಟ್ ಆಗಿರುವ ಅತ್ಯಾಚಾರದ ವೀಡಿಯೊ ತೋರಿಸಿದ್ದರು' ಎಂದು ಸಂತ್ರಸ್ತೆ ದೂರಿದರು.
'ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು, ಮಾಜಿ ಸಚಿವರು ಮತ್ತು ಶಾಸಕರನ್ನು ಹನಿಟ್ರ್ಯಾಪ್ ಮಾಡಲು ನನ್ನನ್ನೂ ಸೇರಿದಂತೆ ಬಹಳಷ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಏಳೆಂಟು ಮಂದಿ ಸಂತ್ರಸ್ತೆಯರಿದ್ದು, ಇದರಲ್ಲಿ ನಾಲ್ವರು ಎಚ್‌ಐವಿ ಸೋಂಕಿತೆಯರು. ಇವರಲ್ಲಿ ಒಬ್ಬ ಮಹಿಳೆಯನ್ನು ಬಳಸಿಕೊಂಡು ಬಿಬಿಎಂಪಿ ಮಾಜಿ ಸದಸ್ಯೆಯೊಬ್ಬರ ಪತಿಯನ್ನು ಹನಿಟ್ರ್ಯಾಪ್ ಮಾಡಲು ಮುನಿರತ್ನ ಬಳಸಿಕೊಂಡಿದ್ದರು' ಎಂದು ಹೇಳಿದರು.
ಮುನಿರತ್ನ ಜೈಲಿನಲ್ಲಿದ್ದುಕೊಂಡೇ “ನಿನ್ನನ್ನು ಕೊಲೆ ಮಾಡಿಸುತ್ತಾನೆ' ಎನ್ನುವ ಬೆದರಿಕೆಯೊಡ್ಡಿದ ಕಾರಣಕ್ಕೆ ದಾಖಲೆಗಳನ್ನು ಬಿಡುಗ ಗಳನ್ನು ಬಿಡುಗಡೆ ಮಾಡುತ್ತಿಲ್ಲ. ಸರಕಾರ, ನ್ಯಾಯಾಲಯ ನನಗೆ ಸೂಕ್ತ ರಕ್ಷಣೆ ನೀಡಿದರೆ ಸಿಟ್, ನ್ಯಾಯಾಲಯದ ಮುಂದೆ ಇದಕ್ಕೆ ಸಂಬಂಧಪಟ್ಟ ವೀಡಿಯೊಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಸಂತ್ರಸ್ತೆ ಸ್ಪಷ್ಟನೆ ನೀಡಿದರು.