ಭ್ರೂಣ ಲಿಂಗ ಪತ್ತೆಯಾದಲ್ಲಿ ಕಠಿಣ ಕಾನೂನು ಕ್ರಮ- ಡಾ.ರಾಮ್ರಾವ್ 

Source: S.O. News Service | Published on 27th June 2019, 8:53 PM | Coastal News | Don't Miss |

ಉಡುಪಿ:ಎನ್ ಟಿ ಪಿ ಮತ್ತು ಟಿ ಓ ಪಿ ಗರ್ಭಪಾತಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಕಡತ ನಿರ್ವಹಣೆ ಮಾಡಿ, ಭ್ರೂಣಲಿಂಗ ಪತ್ತೆ ಮಾಡುವುದು ಸುಳಿವು ಸಿಕ್ಕಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು, ಇದರ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದಾಗಿ ತಿಳಿಸಿ ಭ್ರೂಣಲಿಂಗ ಪತ್ತೆಕಾಯ್ದೆ ಬಗ್ಗೆ ಪ್ರಚಾರ ಪಡಿಸುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮ್ರಾವ್ ತಿಳಿಸಿದರು.
ಅವರು ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯಿದೆ ಬಗ್ಗೆ ಸಲಹಾ ಸಮಿತಿಯಲ್ಲಿ ಮಾತನಾಡಿ, ಭ್ರೂಣ ಲಿಂಗ ಪತ್ತೆ ನಿಷೇಧಿಸಲಾಗಿದೆ ಮತ್ತು ಭ್ರೂಣ ಲಿಂಗ ಪತ್ತೆ ಮಾಡುವುದಿಲ್ಲ ಎಂದು ದೊಡ್ಡದಾಗಿ ಸ್ಕಾನಿಂಗ್ ಸೆಂಟರ್ನ ರೋಗಿಗಳು ಕುಳಿತು ಕೊಳ್ಳುವ ಸ್ಥಳದ ಸಮೀಪ ಫಲಕವನ್ನು ಅಳವಡಿಸಬೇಕೆಂದು ಹೇಳಿದರು. ಗರ್ಭಿಣಿಯರನ್ನು ದಾಖಲಾತಿ ಮಾಡುವಾಗ ಹಳೆಯ ಪದ್ದತಿಯಂತೆ ಅನಿವಾರ್ಯ ಹೊರತು ಪಡಿಸಿ ಬಾಲಿಕಾ ಸಾಫ್ಟ್ವೇರ್ನಲ್ಲಿ ಏ ಫಾರಂ ಮೂಲಕ ಕಡ್ಡಾಯವಾಗಿ ಭರ್ತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. 
ಸೀಲ್ ಮಾಡಲಾದ ಸ್ಕಾನಿಂಗ್ ಯಂತ್ರವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಇವರಿಂದ ನೋಂದಾಯಿತವಾದ ಸಂಸ್ಥೆಗೆ ತಕ್ಷಣ ವಿಲೆವಾರಿ ಮಾಡಬೇಕು. ಎನ್ನುವ ಮಾಹಿತಿಯನ್ನು ಎಲ್ಲಾ ಸ್ಕ್ಯಾನಿಂಗ್ ಸಂಸ್ಥೆಗೆ ತಿಳಿಸಿದ್ದು, ಇದುವರೆಗೂ ಕೆಲವೊಂದು ಸ್ಕಾನಿಂಗ್ ಸಂಸ್ಥೆಗಳು ವಿಲೇ ಮಾಡಿರುವುದಿಲ್ಲ. ಆದುದರಿಂದ ಎಲ್ಲಾ ಸ್ಕಾನಿಂಗ್ ಸಂಸ್ಥೆಗೆ ಸೀಲ್ ಮಾಡಲಾದ ಸ್ಕಾನಿಂಗ್ ಯಂತ್ರವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಇವರಿಂದ ನೊಂದಾಯಿತ ಸಂಸ್ಥೆಗೆ ತಕ್ಷಣ ವಿಲೇ ಮಾಡುವ ಬಗ್ಗೆ ಪತ್ರ ಬರೆಯುವ ಬಗ್ಗೆ ಸಭೆಯಲ್ಲಿ ಸೂಚಿಸಲಾಯಿತು. ಎಲ್ಲಾ 14 ಸೀಲ್ ಮಾಡಲಾದ ಸಂಸ್ಥೆಗಳಿಗೆ ಪ್ರತ್ಯೇಕ ಸೂಚನೆ ನೀಡಲು ತೀರ್ಮಾನಿಸಲಾಯಿತು.
ಗಂಡು ಹೆಣ್ಣಿನ ಅನುಪಾತ ಕಡಿಮೆ ಇರುವ ಗ್ರಾಮಗಳಲ್ಲಿ ಶಿಶು ಮರಣ ಮತ್ತು ನಿರ್ಜಿವ ಜನನದ ಕುರಿತು ವೈದ್ಯಕೀಯ ಹಾಗೂ ಸಾಮಾಜಿಕ ಕಾರಣ ಹಾಗೂ ಲಿಂಗಾನುಪಾತದ ತಾರತಮ್ಯದ ಬಗ್ಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲದ ಕಮ್ಯುನಿಟಿ ಮೆಡಿಸಿನ್ ವಿಭಾಗದವರಿಂದ ಆಯಾ ಕ್ಷೇತ್ರದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸ್ವ ಸಹಾಯ ಸಂಘದ ಸದಸ್ಯರ ಹಾಗೂ ಆಶಾ ಕಾರ್ಯಕರ್ತರ ಸಹಕಾರ ಪಡೆದು ಸರ್ವೇ ನಡೆಸಲು ಕೋರಿದ್ದು, ಅದರಂತೆ ಸರ್ವೇ ನಡೆಸಿ ಪ್ರಾಥಮಿಕ ವರದಿಯನ್ನು ನೀಡಿರುತ್ತಾರೆ ಆದರೆ ಸದ್ರಿ ವರದಿಯಲ್ಲಿ 53% ಗರ್ಭಪಾತ ಪ್ರಕರಣಗಳಿಗೆ ಕಾರಣ ಏನು ಎನ್ನುವ ಬಗ್ಗೆ ತಿಳಿಸಿರುವುದಿಲ್ಲ ಆದ್ದರಿಂದ ಅದರ ಬಗ್ಗೆ ಮರು ಸರ್ವೇ ಮಾಡಲು ಸಭೆಯಲ್ಲಿ ಸೂಚಿಸಿದ್ದು, ಸರ್ವೇ ನಡೆಸುವಾಗ ಯಾವೆಲ್ಲ ಮಾಹಿತಿಯನ್ನು ಕೇಳಿ ಪಡೆಯಬೇಕೆಂಬುದರ ಕುರಿತು ಚರ್ಚಿಸಲಾಯಿತು. 
ಜಿಲ್ಲೆಯ ಎಲ್ಲಾ ಸ್ಕಾನಿಂಗ್ ಸಂಸ್ಥೆಗಳಿಗೆ ಅಗತ್ಯವಿರುವ ಉಪಕರಣಗಳನ್ನು ಒದಗಿಸಲು ಮಂಜೂರಾತಿಗಾಗಿ ಕೋರಲಾಗಿದ್ದು, ಅನುಮೋದನೆ ನೀಡಲು ಸಭೆಯಲ್ಲಿ ಚರ್ಚಿಸಲಾಯಿತು.
ಜಿಲ್ಲಾ ಪಿಸಿ & ಪಿಎನ್ಡಿಟಿ ಸಲಹಾ ಸಮಿತಿ ಅಧ್ಯಕ್ಷ ಡಾ.ಪ್ರತಾಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಜಿಲ್ಲಾಪಿಸಿ & ಪಿಎನ್ಡಿಟಿ ಸಲಹಾ ಸಮಿತಿ ಸದಸ್ಯೆ ಡಾ.ಪಾರ್ವತಿ ಭಟ್, ಸಮಾಜ ಸೇವಕಿ ಗೀತಾ ವಾಗ್ಳೆ, ಜಿಲ್ಲಾ ಆಸ್ಪತ್ರೆಯ ರೇಡಿಯೋಲಜಿಸ್ಟ್ ಡಾ.ಆಮ್ನಾ ಹೆಗ್ಡೆ ಉಪಸ್ಥಿತರಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...