ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಭಟ್ಕಳಕ್ಕೆ ಮತ್ತೇ 7 ಕೊರೋನಾ ಕೊಡುಗೆ

Source: sonews | By Staff Correspondent | Published on 9th May 2020, 3:18 PM | Coastal News | Don't Miss |

ಒಟ್ಟು 31 ಸೋಂಕಿತ ಪ್ರಕರಣಗಳಲ್ಲಿ 11 ಗುಣಮುಖ  20 ಸಕ್ರೀಯ 
 

ಭಟ್ಕಳ: ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ ಹೊತ್ತಿಸಿದ ಕೊರೋನಾ ಕಿಡಿ ಉತ್ತರಕನ್ನಡ ಜಿಲ್ಲೆಯ ಭಟ್ಕಳದವರೆಗೂ ಹಬ್ಬಿಕೊಂಡಿದ್ದು ಶುಕ್ರವಾರ 12 ಪ್ರಕರಣಗಳ ಪತ್ತೆಯಾದ ಬೆನ್ನಿಗೆ ಶನಿವಾರ ಮತ್ತೇ 7 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.  

ನಿನ್ನೆ ಒಂದೇ ಕುಟುಂಬದ 10ಮಂದಿ ಸೇರಿದಂತೆ ಒಟ್ಟು 12 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕ ದಲ್ಲಿದ್ದ ಸುಮಾರು 60 ಜನರ ಗಂಟಲು ದ್ರವದ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಂತೆ, ನಿನ್ನೆ ದೃಢಪಟ್ಟಿದ್ದ 18 ವರ್ಷದ ಯುವತಿಯ ಕುಟುಂಬದ ಆರು ಹಾಗೂ ಆಕೆಯ ಸ್ನೇಹಿತರೊಬ್ಬರನ್ನು ಸೇರಿ ಒಟ್ಟು ಏಳು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಒಂದೂವರೆ ವರ್ಷದ  ಬಾಲಕ, ಎರಡು ವರ್ಷದ ಆರು ತಿಂಗಳ ಬಾಲಕಿ, 17, 23 ರ್ಷದ ಯುವತಿ, 65, 68 ವರ್ಷದ ವೃದ್ಧ ಹಾಗೂ 50 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಇಂದು ದೃಢಪಟ್ಟವರು ನಗರದ ಹೃದಯ ಭಾಗದ ಸುಲ್ತಾನ್ ಸ್ಟ್ರೀಟ್ ನವರಾಗಿದ್ದು ಈಗ ಸಂಪೂರ್ಣ ಭಟ್ಕಳ ನಗರವೇ ಸೀಲ್ಡೌನ್ ಆಗಲಿದ್ದು ಜನರು ಮತ್ತಷ್ಟು ಆತಂಕಿತಗೊಂಡಿದ್ದಾರೆ

ಈ ಏಳು ಮಂದಿಯಲ್ಲಿ ಸೋಂಕಿನ ಪ್ರಕರಣ ದೃಢಪಡುವ ಮೂಲಕ ಸದ್ಯ ಪಟ್ಟಣವೊಂದರಲ್ಲೇ ಒಟ್ಟು 31 ಪ್ರಕರಣಗಳು ಪತ್ತೆಯಾದಂತಾಗಿದೆ. 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಸದ್ಯ 20 ಸಕ್ರಿಯ ಪ್ರಕರಣಗಳು ಇವೆ.

ಶಾಸಕ ಸುನಿಲ್ ನಾಯ್ಕ ಸಿಟಿ ರೌಂಡ್ಸ್: ಶನಿವಾರ ಮತ್ತೇ 7 ಹೊಸ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಯಲ್ಲಿ ನಗರದಲ್ಲಿ ಸೀಲ್ಡೌನ್ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಇಲ್ಲವೆ ಎಂಬುದುನ್ನು ಅರಿತುಕೊಳ್ಳಲು ಸ್ವತಃ ಶಾಸಕ ಸುನಿಲ್ ನಾಯ್ಕ ಮಧ್ಯಾಹ್ನದ ಸುಡುಬಿಸಿಲಿನಲ್ಲಿ ನಗರವನ್ನು ಸುತ್ತು ಹೊಡೆದು ಪರಿಶೀಲಿಸಿದರು. 

ಸುಲ್ತಾನ್ ಸ್ಟ್ರೀಟ್ ಸಂಪರ್ಕಿಸುವ ಹಳೆ ಬಸ್ ನಿಲ್ದಾಣ ಬಳಿ ಬ್ಯಾರಿಕೇಡ್ ಸರಿಯಾಗಿ ಹಾಕದಿರುವುದನ್ನು ಕಂಡು ಗರಂ ಆದ ಸುನಿಲ್ ನಾಯ್ಕ ಯಾರನ್ನೂ ಯಾವುದೇ ಕಾರಣಕ್ಕೂ ತಿರುಗಾಡಲು ಬಿಡಬೇಡಿ. ಎಲ್ಲರೀತಿಯ ಪಾಸ್ ಗಳನ್ನು ಹಿಂಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಸಂರ್ಪೂಣ ಸೀಲ್‍ಡೌನ್: ಭಟ್ಕಳ ನಗರದ್ಯಂತ ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗಿದ್ದು ರಾ.ಹೆ.66 ಮಾತ್ರ ಕಾರ್ಯಾಚರಿಸುತ್ತಿದೆ. ನಗರದಿಂದ ಬಂದರ್, ತೆಂಗಿನಗುಂಡಿ, ಜಾಲಿ ಮತ್ತಿತರರ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದು ಜನರನ್ನು ಅನಗತ್ಯವಾಗಿ ಹೊರಗಡೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಅಗ್ಯತ ವಸ್ತುಗಳನ್ನು ಪುರೈಸುವವರು, ಸರ್ವೇ ಮಾಡುವವರು, ಪತ್ರಕರ್ತರು ಸೇರಿದಂತೆ ಕೆಲವೆ ಕೆಲವರು ಮಾತ್ರ ಅಗತ್ಯ ಕೆಲಸಕ್ಕಾಗಿ ಹೊರಗಡೆ ಬರಬಹುದಾಗಿದ್ದು ಉಳಿದಂತೆ ಸಾರ್ವಜನಿಕರಾರು ಹೊರಗಡೆ ಸುತ್ತುತ್ತಿಲ್ಲ. ನಿನ್ನೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಪ್ರಕಾಶ್ ದೇವರಾಜ್ ಭಟ್ಕಳದಲ್ಲಿಯೆ ಮೊಕ್ಕಾಂ ಹೋಡಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...