ಮಂಗಳೂರಿನಲ್ಲಿ ಪ್ರತ್ಯೇಕ ಅಗ್ನಿ ಅವಘಡ. ಬೈಕ್ ಗಳು ಬೆಂಕಿಗಾಹುತಿ. ಬ್ಯಾಂಕಿಗೆ ಬೆಂಕಿ.

Source: SO News | By Laxmi Tanaya | Published on 30th September 2020, 3:43 PM | Coastal News | Don't Miss |

 ಮಂಗಳೂರು  : ನಗರದ ವಿವಿದೆಡೆ  ಪ್ರತ್ಯೇಕ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

ಒಂದು ಕಡೆ ಐದು ಬೈಕುಗಳು ಬೆಂಕಿಗಾಹುತಿಯಾದರೆ ಇನ್ನೊಂದು ಕಡೆ ಬ್ಯಾಂಕ್ ಕಚೇರಿ ಒಳಗೆ ಬೆಂಕಿ ಅವಘಡ ಸಂಭವಿಸಿದೆ.

ನಗರದ ಸಿ.ವಿ.ನಾಯಕ್ ಹಾಲ್ ಬಳಿಯ ಭುವನೇಂದ್ರ ಅಪಾರ್ಟ್ಮೆಂಟ್ ನಲ್ಲಿ ಬುಧವಾರ ಮುಂಜಾನೆ ಪಾರ್ಕ್ ಮಾಡಲಾಗಿದ್ದ 5 ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿದೆ.  ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಲು ಸಹಕರಿಸಿದ್ದಾರೆ, ಆದರೆ ಬೈಕ್ ಪಾರ್ಕಿಂಗ್ ಏರಿಯಾದಲ್ಲಿ ಅಗ್ನಿ ಅವಘಡ ಹೇಗೆ ಸಂಭವಿಸಿತ್ತು ಎಂದು ತಿಳಿದುಬಂದಿಲ್ಲ, ಈ ಘಟನೆಯಲ್ಲಿ ಒಟ್ಟು ಐದು ಬೈಕ್ ಗಳು ಬೆಂಕಿಗಾಹುತಿಯಾಗಿವೆ.

 ಬ್ಯಾಂಕ್ ಒಫ್ ಬರೋಡಾ ಹಂಪನಕಟ್ಟ ಶಾಖೆಯಲ್ಲಿ ಬುಧವಾರ ಮುಂಜಾನೆ ಸುಮಾರು ಐದು ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅವಘಡಗಳು ಸಂಭವಿಸಿಲ್ಲ ಎನ್ನಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

 

Read These Next

ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಣೆ : ಆನಂದ ಅಸ್ನೋಟಿಕರ್.

ಕಾರವಾರ : ನವೆಂಬರ್ ಒಂದರಂದು ಕಾರವಾರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜೆ.ಡಿ.ಎಸ್.ನ ನಾಲ್ಕು ಮತ್ತು ...

ಪಾಕ್ ಸಂಸತ್ತಿನಲ್ಲಿ 'ಮೋದಿ ಮೋದಿ' ಘೋಷಣೆ ಎಂದು ಸುಳ್ಳು ಹೇಳಿ ನಗೆಪಾಟಲಿಗೀಡಾದ 'ಇಂಡಿಯಾ ಟಿವಿ', 'ಟೈಮ್ಸ್ ನೌ'

ಹೊಸದಿಲ್ಲಿ: ಪ್ರವಾದಿ ವ್ಯಂಗ್ಯಚಿತ್ರಗಳನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸಿದ ಶಿಕ್ಷಕನ ಶಿರಚ್ಛೇದನ ಪ್ರಕರಣ ಸಂಬಂಧ ...

ಎನ್ ಡಿಆರ್ ಎಫ್ ತಂಡದಿಂದ ಅಣಕು ಪ್ರದರ್ಶನ. ಸಾರ್ವಜನಿಕರಲ್ಲಿ ರಕ್ಷಣಾ ಕಾರ್ಯದ ರೀತಿ ಮತ್ತು ಮಹತ್ವದ ಅರಿವು ಮೂಡಬೇಕು: ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ : ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಲ್ಲಿ ನೆರೆಹೊರೆಯವರು ಸೇರಿದಂತೆ ಸಾರ್ವಜನಿಕರು ತತಕ್ಷಣ ಸ್ಪಂಧಿಸುವುದರಿಂದ ಮತ್ತು ...