ಕಿತ್ರೆ ಕ್ರಾಸ್ ಹತ್ತಿರ ಗಾಂಜಾ ಮಾರಾಟ. ಭಟ್ಕಳ ಪೊಲೀಸರಿಂದ ಮೂವರ ಬಂಧನ.

Source: SO News | By Laxmi Tanaya | Published on 17th September 2020, 10:50 PM | Coastal News | Don't Miss |

ಭಟ್ಕಳ : ಪಟ್ಟಣದ ಸಾಗರ ರಸ್ತೆಯ ಕಿತ್ರೆ ಕ್ರಾಸ್ ಹತ್ತಿರ ಗಾಂಜಾ  ಮಾರಾಟ ಮಾಡುತ್ತಿದ್ದ ಭಟ್ಕಳದ ಮೂವರನ್ನ ಪೊಲೀಸರ ಬಂಧಿಸಿದ್ದಾರೆ. ಬಂಧಿತರಿಂದ  ಸುಮಾರು 750 ಗ್ರಾಂ ತೂಕದ ಗಾಂಜಾ ಹಾಗೂ 1 ಸ್ಕೂಟಿ, 3 ಮೊಬೈಲ್,   2700 ರೂ ನಗದು ಹಣ ವಶಪಡಿಸಿಕೊಳ್ಳಲಾಗಿದೆ.

ಮಂಕಿಯ  ಗಣಪತಿ ಮಂಜಪ್ಪ ನಾಯ್ಕ,  ಮುರ್ಡೇಶ್ವರದ ಜನಾರ್ಧನ ಅಣ್ಣಪ್ಪ ಹರಿಕಂತ್ರ,  ಕರಿಕಲ್ ನ ಆನಂದ ಮಾದೇವ ಮೊಗೇರ ಬಂಧಿತರಾಗಿದ್ದಾರೆ.

ಕಾರ್ಯಾಚರಣೆಯನ್ನು  ಶಿವಪ್ರಕಾಶ ದೇವರಾಜ ಹಾಗೂ  ಎಸ್ ಬದ್ರೀನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ಮಾರ್ಗದರ್ಶನದಲ್ಲಿ  ನಿಖಿಲ್ ಬಿ. ಸಹಾಯಕ ಪೊಲೀಸ್ ಅಧೀಕ್ಷಕರು ಭಟ್ಕಳ ಉಪವಿಭಾಗ ರವರ ನೇತೃತ್ವದಲ್ಲಿ  ದಿವಾಕರ್ ಪಿ.ಎಮ್ ಸಿ.ಪಿ.ಐ ಭಟ್ಕಳ ಮುಂದಾಳತ್ವದಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪಿಎಸ್ಐ  ಓಂಕಾರಪ್ಪ, ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸ್ಐ  ಭರತಕುಮಾರ ವಿ.  ಹೆಚ್ ಬಿ ಕುಡಗುಂಟಿ ಮಾಡಿದ್ದರು.

ಎಎಸ್ಐ ರಾಮಚಂದ್ರ ನಾಯಕ, ಸಿಬ್ಬಂದಿಗಳಾದ  ದಿನೇಶ ನಾಯಕ, ಲೊಕೇಶ ಕತ್ತಿ, ಈರಣ್ಣ ಪೂಜೇರಿ, ರಾಜು ಗೌಡಾ, ದೀಪಕ ಎಸ್ ನಾಯ್ಕ, ನಾಗರಾಜ ಮೂಗೇರ, ವಿನಾಯಕ ಪಾಟೀಲ್, ಗಣೇಶ ಗಾಂವಕರ, ಮಕ್ತುಮ್ ಪತ್ತೇಖಾನ್, ಗೌತಮ್ ರೊಡ್ಡನವರ, ಮಲ್ಲಿಕಾರ್ಜುನ ಉಟಗಿ, ಸಚೀನ್ ಪವಾರ, ಮಲ್ಲಿಕಾರ್ಜುನ ನಾಯ್ಕ, ಅಶೋಕ ನಾಯ್ಕ, ದೇವು ಆರ್ ನಾಯ್ಕ, ರಾಮಚಂದ್ರ ಕಜ್ಜಿದೊಣ್ಣಿ, ವಿಶೇಷ ತಂಡದ ಸಿಬ್ಬಂದಿಯವರಾದ ಸಂತೋಷ ಹೊನ್ನಾಳ, ಮೋಹನ ಪೂಜಾರಿ, ಚಾಲಕರಾದ ದೇವರಾಜ ಮೂಗೇರ, ಕುಬೇರ ಹೊಸುರ ಇವರು ಹಾಜರಿದ್ದರು.

Read These Next

ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಣೆ : ಆನಂದ ಅಸ್ನೋಟಿಕರ್.

ಕಾರವಾರ : ನವೆಂಬರ್ ಒಂದರಂದು ಕಾರವಾರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜೆ.ಡಿ.ಎಸ್.ನ ನಾಲ್ಕು ಮತ್ತು ...

ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಣೆ : ಆನಂದ ಅಸ್ನೋಟಿಕರ್.

ಕಾರವಾರ : ನವೆಂಬರ್ ಒಂದರಂದು ಕಾರವಾರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜೆ.ಡಿ.ಎಸ್.ನ ನಾಲ್ಕು ಮತ್ತು ...

ಮತ ಚಲಾಯಿಸಿದ ಕೋವಿಡ್ ಸೋಂಕಿತರು

ಧಾರವಾಡ : ಬುಧವಾರ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ...