ರಾಜ್ಯ ಮತ್ತು ಜಿಲ್ಲಾ ಕ್ರೀಡಾಶಾಲೆ/ಕ್ರೀಡಾನಿಲಯಗಳಿಗೆ ಆಯ್ಕೆ ಸ್ಪರ್ಧೆ

Source: SO News | By Laxmi Tanaya | Published on 23rd December 2020, 10:15 PM | State News | Don't Miss |

ಶಿವಮೊಗ್ಗ :  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2021-22ನೇ ಸಾಲಿನಲ್ಲಿ 5ನೇ, 8ನೇ ಮತ್ತು ಪ್ರಥಮ ಪಿಯುಸಿಗೆ  ಕ್ರೀಡಾಶಾಲೆ ಹಾಗೂ ಕ್ರೀಡಾನಿಲಯಗಳ ಪ್ರವೇಶಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಾಲೂಕು ಮಟ್ಟದ ಆಯ್ಕೆಯನ್ನು ಏರ್ಪಡಿಸಿದ್ದು, ಆಯಾ ತಾಲೂಕಿನ ಕಿರಿಯರ ವಿಭಾಗದಲ್ಲಿ 11 ವರ್ಷದೊಳಗಿನ 5ನೇ ತರಗತಿಗೆ ಸೇರಲು ಅರ್ಹತೆ ಹೊಂದಿರುವ ಮತ್ತು 14 ವರ್ಷ ವಯೋಮಿತಿಯ 8ನೇ ತರಗತಿಗೆ ಸೇರಲು ಅರ್ಹತೆ ಹೊಂದಿರುವ ಹಾಗೂ ಹಿರಿಯರ ವಿಭಾಗದಲ್ಲಿ 18 ವರ್ಷ ವಯೋಮಿತಿಯ ಪ್ರಥಮ ಪಿಯುಸಿಗೆ ಸೇರಲು ಅರ್ಹತೆ ಹೊಂದಿರುವ ಬಾಲಕ/ಬಾಲಕಿಯರಿಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. 

 ತಾಲೂಕು ಮಟ್ಟದ ಸ್ಪರ್ಧೆಗಳನ್ನು ಆಯ್ಕೆ ನಡೆಸುವ ಸ್ಥಳ ಮತ್ತು ದಿನಾಂಕವು ತೀರ್ಥಹಳ್ಳಿ ತಾ. ಸ.ಪ.ಪೂ.ಕಾಲೇಜ್, ತೀರ್ಥಹಳ್ಳಿಯಲ್ಲಿ ಜ.02 ರಂದು, ಸಾಗರ ತಾ. ಸಾಗರ ಕ್ರೀಡಾಂಗಣದಲ್ಲಿ ಜ.04 ರಂದು, ಹೊಸನಗರ ತಾ. ಹೊಸನಗರ ಕ್ರೀಡಾಂಗಣದಲ್ಲಿ ಜ. 06 ರಂದು, ಸೊರಬ ತಾ. ಸ.ಪ.ಪೂ.ಕಾಲೇಜ್ ಆನವಟ್ಟಿಯಲ್ಲಿ ಜ.08, ಶಿಕಾರಿಪುರ ತಾ. ಕ್ರೀಡಾಂಗಣದಲ್ಲಿ ಜ.11 ರಂದು, ಭದ್ರಾವತಿ ತಾ. ಕನಕ ಮಂಟಪ ಮೈದಾನದಲ್ಲಿ ಜ.12 ರಂದು ಹಾಗೂ ಶಿವಮೊಗ್ಗ ತಾ. ನಗರದ ನೆಹರೂ ಕ್ರೀಡಾಂಗಣದಲ್ಲಿ ಜ.13 ರಂದು ನಡೆಸಲಾಗುವುದು.
 ಅಥ್ಲೆಟಿಕ್ಸ್, ಫುಟ್‍ಬಾಲ್, ಲಾಂಗ್‍ಜಂಪ್, ಗುಂಡು ಎಸೆತ, ಕುಸ್ತಿ, ಹಾಕಿ, ಜಿಮ್ನಾಸ್ಟಿಕ್, ವಾಲಿಬಾಲ್, ಸೈಕ್ಲಿಂಗ್, ಜುಡೋ, ಬ್ಯಾಸ್ಕೇಟ್‍ಬಾಲ್, ಅರ್ಚರಿ, ಫೆನ್ಸಿಂಗ್, ಈಜು, ಖೋಖೋ, ಹಾಗೂ ಹಿರಿಯರ ವಿಭಾಗದಲ್ಲಿ ಮುಂತಾದ ಕ್ರೀಡೆಗಳನ್ನು ಏರ್ಪಡಿಸಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರಗಳನ್ನು ಧರಿಸುವುದು. 
 
 ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ದೂ.ಸಂ.: 9964599936/ 9880653266/08182-223328 ಗಳನ್ನು ಸಂಪರ್ಕಿಸುವುದು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...