ದ್ವಿತೀಯ ಪಿಯುಸಿ: ಕಡ್ಡಾಯವಾಗಿ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ಪದವಿಪೂರ್ವ ಕಾಲೇಜುಗಳಿಗೆ ಸೂಚನೆ

Source: SO News | By Laxmi Tanaya | Published on 25th December 2020, 9:40 AM | State News |

ಬಳ್ಳಾರಿ : 2020-21ನೇ ಸಾಲಿನ ಶೈಕ್ಷಣಿಕ ಅವಧಿಯು ಕೋವಿಡ್-19ರ ವಿಷಮ ಸ್ಥಿತಿಯಿಂದ ಇಲ್ಲಿಯವರೆಗೆ ಪ್ರಾರಂಭವಾಗಿರುವುದಿಲ್ಲ. ಈಗ ಪದವಿ ಪೂರ್ವ ಶಿಕ್ಷಣ ಹಂತದ ದ್ವಿತೀಯ ಪಿಯುಸಿ ತರಗತಿ ಪ್ರಾರಂಭಿಸಬೇಕಾಗಿದೆ. ಈ ಕೆಳಕಂಡ ನಿಯಂತ್ರಣ ಕ್ರಮಗಳನ್ನು ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಕಡ್ಡಾಯವಾಗಿ ಅನುಸರಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ ಅವರು ತಿಳಿಸಿದ್ದಾರೆ.

ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ತರಗತಿ ಕೊಠಡಿ/ ಪ್ರಾಂಶುಪಾಲರ/ ಉಪನ್ಯಾಸಕರ/ ಪ್ರಯೋಗಾಲಯ/ ಶೌಚಾಲಯ ಕೊಠಡಿಗಳನ್ನು ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣ/ ಬ್ಲೀಚಿಂಗ್ ಪೌಡರ್/ ಫಿನಾಯಿಲ್‌ದಿಂದ ಸ್ವಚ್ಛ / ಸ್ಯಾನಿಟೈಜರ್ ಮಾಡಿಸುವುದು.ಪೋಷಕರಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆಯುವುದು. ಅನಾರೋಗ್ಯಕ್ಕೆ ತುತ್ತಾಗಿರುವ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಬರುವುದನ್ನು ನಿರ್ಬಂಧಿಸುವುದು. ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ. ಆನ್ ಲೈನ್ ತರಗತಿಗಳು ಯಥಾರೀತಿ ಮುಂದುವರೆಯುತ್ತವೆ. ಪ್ರತಿದಿನವೂ 45 ನಿಮಿಷಗಳ 4 ತರಗತಿಗಳನ್ನು ಮಾತ್ರ ನಡೆಸುವುದು. ಮುಖಕವಚ/ ಮಾಸ್ಕ್ ಮತ್ತು ಕುಡಿಯುವ ನೀರಿನ ಬಾಟಲ್‌ಗಳನ್ನು ಕಡ್ಡಾಯವಾಗಿ ವಿದ್ಯಾರ್ಥಿಗಳೇ ತರಬೇಕು.ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ಪ್ರತಿ ದಿನ ಪರೀಕ್ಷೆ ಮಾಡುವುದು. ಪ್ರತಿ 10 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕರನ್ನು ಮಾರ್ಗದರ್ಶಕರಾಗಿ ನೇಮಕ ಮಾಡುವುದು. ಕನಿಷ್ಠ 06 ಅಡಿಗಳ ಅಂತರವನ್ನು ಕಾಪಾಡುವುದು (ತರಗತಿಯ ಒಳಗೆ ಹಾಗೂ ಹೊರಗೆ).ಎಲ್ಲೆಂದರಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸುವುದು.

ಕೆಮ್ಮುವಾಗ ಮತ್ತು ಸೀನುವಾಗ ಮುಖಕ್ಕೆ ಕರವಸ್ತ್ರ/ ಟಿಶ್ಯು ಪೇಪರ್/ ಮೊಣಕೈಯನ್ನು ಅಡ್ಡ ಹಿಡಿಯಲು ತಿಳಿಸುವುದು.
ಆರೋಗ್ಯ ಸೇತು ಆ್ಯಪ್ ಗಳನ್ನು ಅಳವಡಿಸಿಕೊಂಡು ಬಳಸುವುದನ್ನು ತಿಳಿಸುವುದು. ಪ್ರತಿ ಕಾಲೇಜಿನಲ್ಲಿ ಪತ್ಯೇಕವಾಗಿ ಒಂದು ಐಸೋಲೇಶನ್ ಕೊಠಡಿಯನ್ನು ಕಾಯ್ದಿರಿಸುವುದು ಮತ್ತು ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಯನ್ನು ಈ ಕೊಠಡಿಯಲ್ಲಿ ನಿಗಾವಣೆಗೆ ಇರಿಸಿ, ಸದರಿ ಮಾಹಿತಿಯನ್ನು ಪೋಷಕರಿಗೆ ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತಿಳಿಸುವುದು. 
ಒಂದು ತರಗತಿಯಲ್ಲಿ ಕೇವಲ 15 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡುವುದು. ಕೊಠಡಿಯ ವಿಸ್ತೀರ್ಣಕ್ಕೆ ಹಾಗೂ ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿಪಡಿಸಿಕೊಳ್ಳುವುದು. ಶೌಚಾಲಯವನ್ನು ಕಡ್ಡಾಯವಾಗಿ ಶುಚಿಗೊಳಿಸುತ್ತಿರುವುದು ಮತ್ತು ಸಾಕಷ್ಟು ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು. ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳು ಇದ್ದಲ್ಲಿ, ಬೆಳಗಿನ ಮತ್ತು ಮಧ್ಯಾಹ್ನದ ಅವಧಿಗಳನ್ನು ತೆಗೆದುಕೊಳ್ಳಲು ವೇಳಾ ಪಟ್ಟಿಯನ್ನು ರೂಪಿಸಿಕೊಳ್ಳುವುದು. ಉದಾ: ಬೆಳಿಗ್ಗೆ ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ಹಾಗೂ ಮಧ್ಯಾಹ್ನದ ಅವಧಿಯಲ್ಲಿ ವಿಜ್ಞಾನ ವಿಭಾಗ ಅಥವಾ ಬೆಳಿಗ್ಗೆ ವಿಜ್ಞಾನ ವಿಭಾಗ ಹಾಗು ಮಧ್ಯಾಹ್ನದ ಅವಧಿಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ನಡೆಸುವುದು. 

ಖಾಸಗಿ ಪದವಿ ಪೂರ್ವ ಕಾಲೇಜುಗಳ ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಕರೆತರುವಾಗ ಹಾಗು ತೆರಳುವಾಗ ಸಾಮಾಜಿಕ ಅಂತರವನ್ನು ಕಾಪಾಡುವುದು.ಪ್ರಾರ್ಥನೆ/ ಸಾಂಸ್ಕೃತಿಕ ಚಟುವಟಿಕೆ/ ಕ್ರೀಡಾ ಚಟುವಟಿಕೆಗಳನ್ನು ಸಾಮೂಹಿಕವಾಗಿ ಕೈಗೊಳ್ಳುವಂತಿಲ್ಲ. 51 ವರ್ಷ ಮೇಲ್ಪಟ್ಟ ವಯಸ್ಸಿನ ಉಪನ್ಯಾಸಕರು ಫೇಸ್ ಮಾಸ್ಕ್/ ಫೇಸ್ ಗಾರ್ಡ/ ಗ್ಲೌಸ್‌ಗಳನ್ನು ಕಡ್ಡಾಯವಾಗಿ ಬಳಸಬೇಕು. ಹತ್ತಿರದ ಆರೋಗ್ಯ ಕೇಂದ್ರಗಳ ದೂರವಾಣಿ ಸಂಖ್ಯೆ/ ಮೊಬೈಲ್ ಸಂಖ್ಯೆಗಳನ್ನು ಕಾಲೇಜಿನ ನೋಟೀಸ್ ಬೋರ್ಡ್ ಗೆ ಪ್ರಕಟಿಸುವುದು ಎಂದು ಅವರು ತಿಳಿಸಿದ್ದಾರೆ.
‘ಬನ್ನಿ ಮಹಾಮಾರಿ ಕೊರೋನಾ ಓಡಿಸೋಣ, ವಿದ್ಯಾರ್ಥಿಗಳನ್ನು ಓದಿಸೋಣ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...