ಮುಂಬೈ: ಕೊರೋನ 2ನೇ ಅಲೆ 1 ಕೋಟಿ ಮಂದಿಗೆ ಉದ್ಯೋಗ ನಷ್ಟ: ಸಿಎಂಐಇ

Source: VB | By S O News | Published on 2nd June 2021, 1:49 PM | National News |

ಮುಂಬೈ: ಕೊರೋನ ಸೋಂಕಿನ 2ನೇ ಅಲೆಯಿಂದ ದೇಶದಲ್ಲಿ 1 ಕೋಟಿಗೂ ಹೆಚ್ಚಿನವರು ಉದ್ಯೋಗ ಕಳೆದುಕೊಂಡಿದ್ದು ಸುಮಾರು 97 ಶೇ. ಕುಟುಂಬದ ಆದಾಯ ಕಡಿಮೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ(ಸಿಎಂಐಇ)ಯ ಸಿಇಒ ಮಹೇಶ್ ವ್ಯಾಸ್ ಹೇಳಿದ್ದಾರೆ.

ನಿರುದ್ಯೋಗದ ಪ್ರಮಾಣ ಎಪ್ರಿಲ್ ಅಂತ್ಯಕ್ಕೆ8 ಶೇ. ಇದ್ದರೆ, ಮೇ ಅಂತ್ಯದ ವೇಳೆಗೆ 12 ಶೇ.ಕ್ಕೆ ತಲುಪಿದೆ. ಇದಕ್ಕೆ ಕೊರೋನ ಸೋಂಕಿನ 2ನೇ ಅಲೆಯೇ ಪ್ರಮುಖ ಕಾರಣ. ಲಾಕ್‌ಡೌನ್, ನಿರ್ಬಂಧ ಅಂತ್ಯವಾಗಿ ಆರ್ಥಿಕ ಚಟುವಟಿಕೆಗೆ ಚಾಲನೆ ದೊರಕಿದರೂ ಸಮಸ್ಯೆ ಸಂಪೂರ್ಣ ಪರಿಹಾರವಾಗದು ಎಂದವರು ಹೇಳಿದ್ದಾರೆ.

ಕೆಲಸ ಕಳೆದುಕೊಂಡವರಿಗೆ ಮತ್ತೆ ಕೆಲಸ ಸಿಗುವುದು ಸುಲಭವಲ್ಲ. ಅಸಾಂಪ್ರದಾಯಿಕ ವಲಯದ ಕಾರ್ಮಿಕರಿಗೆ ತಕ್ಷಣ ಕೆಲಸಕ್ಕೆ ಮರಳಲು ಅವಕಾಶವಿದೆ. ಆದರೆ ಸಾಂಪ್ರದಾಯಿಕ ವಲಯ ಹಾಗೂ ಉತ್ತಮ ಉದ್ಯೋಗಾವಕಾಶ ನಿಧಾನವಾಗಿ ತೆರೆದುಕೊಳ್ಳಬಹುದು. ಮೇ 2020ರಲ್ಲಿ ರಾಷ್ಟ್ರವ್ಯಾಪಿ ಲಾಕ್ ಡೌನ್‌ನಿಂದಾಗಿ ನಿರುದ್ಯೋಗದ ಪ್ರಮಾಣ 23.5 ಶೇ. ದಾಖಲೆ ಮಟ್ಟಕ್ಕೆ ತಲುಪಿತ್ತು. ಭಾರತೀಯ ಆರ್ಥಿಕತೆಗೆ ಸಂಬಂಧಿಸಿ, 3ರಿಂದ 4 ಶೇ. ಪ್ರಮಾಣದ ನಿರುದ್ಯೋಗ ಸಹಜವಾಗಿದೆ ಎಂದು ವ್ಯಾಸ್ ಹೇಳಿದ್ದಾರೆ. ಎಪ್ರಿಲ್‌ನಲ್ಲಿ 1.75 ಲಕ್ಷ ಕುಟುಂಬದವರನ್ನು ಸಮೀಕ್ಷೆಗೆ ಒಳಪಡಿಸಿ ಈ ಮಾಹಿತಿ ತಯಾರಿಸಲಾಗಿದೆ. ಸಮೀಕ್ಷೆಗೆ ಒಳಪಟ್ಟವರಲ್ಲಿ ಕೇವಲ 3 ಶೇ. ಮಾತ್ರ ತಮ್ಮ ಆದಾಯ ಹೆಚ್ಚಳವಾಗಿದೆ ಎಂದಿದ್ದಾರೆ. 55 ಶೇ. ಜನ ಆದಾಯ ಇಳಿಕೆಯಾಗಿದೆ ಎಂದಿದ್ದಾರೆ. ತಮ್ಮ ಆದಾಯದಲ್ಲಿ ವ್ಯತ್ಯಾಸವಾಗಿಲ್ಲ, ಒಂದು ವರ್ಷದ ಹಿಂದಿನಷ್ಟೇ ಇದೆ ಎಂದು 42 ಶೇ. ಮಂದಿ ಉತ್ತರಿಸಿದ್ದಾರೆ.

 

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪತಂಜಲಿಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ; ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಪತಂಜಲಿಗೆ ಸುಪ್ರೀಂ ಕೋರ್ಟ್ ಚಾಟಿ

ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸುವ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ...