ಭಟ್ಕಳ: ಹೈಕೋರ್ಟ ನ್ಯಾಯಮೂರ್ತಿ ಹುದ್ದೆಗೆ 2ನೇ ಬಾರಿ ಭಟ್ಕಳದ ನಾಗೇಂದ್ರ ನಾಯ್ಕ ಹೆಸರು ಶಿಫಾರಸ್ಸು

Source: S O news service | By I.G. Bhatkali | Published on 6th March 2021, 10:36 AM | Coastal News | State News |

ಭಟ್ಕಳ: ಹೈಕೋರ್ಟ ನ್ಯಾಯಮೂರ್ತಿ ಹುದ್ದೆಗೆ ಭಟ್ಕಳ ಮೂಲದ ಹೈಕೋರ್ಟ ನ್ಯಾಯವಾದಿ ನಾಗೇಂದ್ರ ರಾಮಚಂದ್ರ ನಾಯ್ಕ ಇವರ ಹೆಸರನ್ನು ಪರಿಗಣಿಸುವಂತೆ ಸುಪ್ರೀಮ್ ಕೋರ್ಟಿನ ಕೊಲಿಜಿಯಂ ಸಮಿತಿ 2ನೇ ಬಾರಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ಕಳೆದ 2019, ಅಕ್ಟೋಬರ್‍ನಲ್ಲಿಯೇ ಕೋಲಿಜಿಯಂ, ನಾಗೇಂದ್ರ ನಾಯ್ಕ ಸೇರಿದಂತೆ 8 ನ್ಯಾಯವಾದಿಗಳ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಸಿಫಾರಸ್ಸು ಮಾಡಿತ್ತಾದರೂ, ಕೇಂದ್ರ ಸರಕಾರ ಪಟ್ಟಿಯಲ್ಲಿದ್ದ ನಾಗೇಂದ್ರ ನಾಯ್ಕ ಹೆಸರನ್ನು ಮಾತ್ರ ಪರಿಗಣಿಸಿರಲಿಲ್ಲ. ಇದೀಗ 2ನೇ ಬಾರಿ ನಾಗೇಂದ್ರ ನಾಯ್ಕ ಹೆಸರನ್ನು ಕೊಲಿಜಿಯಂ ಶಿಫಾರಸ್ಸು ಮಾಡಿರುವುದರಿಂದ ಕೇಂದ್ರ ಸರಕಾರ ಅನಿವಾರ್ಯವಾಗಿ ಮಾನ್ಯ ಮಾಡುವ ಸಾಧ್ಯತೆ ಹೆಚ್ಚಿದೆ. ಕೋಲಿಜಿಯಂ ಶಿಫಾರಸ್ಸನ್ನು ಸರಕಾರ ಅಂಗೀಕರಿಸಿದ್ದಲ್ಲಿ, ನಾಗೇಂದ್ರ ನಾಯ್ಕ ಹೈಕೋರ್ಟ ನ್ಯಾಯಾಧೀಶ ಹುದ್ದೆಗೇರುವ ಭಟ್ಕಳದ ಪ್ರಪ್ರಥಮ ವ್ಯಕ್ತಿಯಾಗಲಿದ್ದಾರೆ. ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಪನಕಟ್ಟೆ ನಿವಾಸಿ, ಜ್ಯಾತ್ಯಾತೀತ ವ್ಯಕ್ತಿತ್ವ ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ನಾಗೇಂದ್ರ ನಾಯ್ಕ ಕಳೆದ 28 ವರ್ಷಗಳಿಂದ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಭಟ್ಕಳ ಅಂಜುಮನ್ ಕಾಲೇಜಿನಲ್ಲಿ ಪದವಿ ಹಾಗೂ ಬೆಂಗಳೂರಿನಲ್ಲಿ ಎಲ್‍ಎಲ್‍ಬಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ವಿಶೇಷ ಎಂದರೆ ತೋಟಗಾರಿಕೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಅಲಂಕಾರಿಕಾ ಪುಷ್ಪವನ್ನು ಬೆಳೆದು ಪ್ರಗತಿಪರ ಕೃಷಿಕನಾಗಿ ಪ್ರಶಸ್ತಿ ಸನ್ಮಾನವನ್ನು ಪಡೆದಿದ್ದಾರೆ. ನಾಗೇಂದ್ರ ನಾಯ್ಕ ಹೆಸರನ್ನು ಕೊಲಿಜಿಯಂ 2ನೇ ಬಾರಿ ಶಿಫಾರಸ್ಸು ಮಾಡುತ್ತಿದ್ದಂತೆಯೇ ಭಟ್ಕಳ ಮಾತ್ರವಲ್ಲ, ಉತ್ತರಕನ್ನಡ ಜಿಲ್ಲೆಯಲ್ಲಿರುವ ಅವರ ಆತ್ಮೀಯರು, ಒಡನಾಡಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. 
 

Read These Next

ಕೋವಿಡ್ ಸೋಂಕಿತರು ಮೃತಪಟ್ಟರೇ ಮನಾಪಾಲಿಕೆಯಿಂದ ಅಂತ್ಯಸಂಸ್ಕಾರದ ವೆಚ್ಚ: ಶಾಸಕ ವೇದವ್ಯಾಸ ಕಾಮತ್.

ಮಂಗಳೂರು : ಮಹಾನಗರ ಪಾಲಿಕೆ ವ್ಯಾಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದ ವೆಚ್ಚವನ್ನು ಮಂಗಳೂರು ...

ಮದುವೆಗೆ 50 ಜ‌ನರಿಗಷ್ಟೆ ಅನುಮತಿ. ನಿಯಮ ಮೀರಿದರೇ ಕ್ರಮ. ಮಂಗಳೂರು ಡಿಸಿ ಮತ್ತು ಪೊಲೀಸ್ ಕಮಿಷನರ್ ಮಾಹಿತಿ.

ಮಂಗಳೂರು : ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಗೈಡ್ ಲೈನ್ಸ್ ಪ್ರಕಟಗೊಳಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ...

ಕಾರವಾರ : ವ್ಯಕ್ತಿ ನಾಪತ್ತೆ

ಬಡಕಲು ದೇಹ, ಗೋದಿ ಮೈ ಬಣ್ಣ, 5.4 ಎತ್ತರÀ, ಇಂಗ್ಲೀಷ ಮತ್ತು ಕನ್ನಡ ಮಾತನಾಡುವ 59 ವರ್ಷ ಪ್ರಾಯದ ಕುಮಟಾದ ಸಾಣಕಲ ಕೇರಿ ನಿವಾಸಿ ಮಹಾಬಲೇಶ್ವರ ...

ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿರ್ಬಂಧಗಳ ಹೊಸ ಮಾರ್ಗಸೂಚಿ ಜಿಲ್ಲೆಯಲ್ಲಿ ಯಥಾವತ್ ಅನುಷ್ಠಾನ- ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ದೇಶದಲ್ಲಿ ಕೋವಿಡ್ 2ನೇ ಅಲೆ ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ...

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದ ಭಕ್ತರಿಗೆ ನಿರಾಶೆ. ಬುಧವಾರದಿಂದ ಮುಚ್ಚಿದ ದೇವಾಲಯ. ಸೇವೆಗಳು ಬಂದ್.

ಮಂಗಳೂರು : ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಸರ್ಕಾರದ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಸರ್ಪ ಸಂಸ್ಕಾರ ಸೇವೆಗೆ ...

1ರಿಂದ 9ನೇ ತರಗತಿಗಳಿಗೆ ಪೈನಲ್ ಪರೀಕ್ಷೆಯಿಲ್ಲ. ವಿದ್ಯಾಗಮ, ಆನ್‌ಲೈನ್ ಚಟುವಟಿಕೆ ಆಧರಿಸಿ ಮೌಲ್ಯಾಂಕನ ವಿಶ್ಲೇಷಣೆ ಫಲಿತಾಂಶ

ಬೆಂಗಳೂರು: ಕೊರೋನಾ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದರಿಂದ ಒಂಭತ್ತನೇ ತರಗತಿಗಳಿಗೆ ವಿದ್ಯಾಗಮ, ...