181 ಭಟ್ಕಳಿಗರನ್ನು ಹೊತ್ತ ಎರಡನೇ ಚಾರ್ಟೆಡ್ ವಿಮಾನ ಇಂದು ಮಂಗಳೂರಿಗೆ

Source: sonews | By Staff Correspondent | Published on 7th July 2020, 6:37 PM | Coastal News | Gulf News | Don't Miss |

ಭಟ್ಕಳ: ಕರೋನಾ ಸಾಂಕ್ರಾಮಿಕ ಮತ್ತು ಅದರ ಪರಿಣಾಮದಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿದ್ದ 181 ಜನರನ್ನು ಹೊತ್ತ ಎರಡನೇ ಚಾರ್ಟೆಡ್ ವಿಮಾನ ಮಂಗಳವಾರ  ದುಬೈನಿಂದ ಮಂಗಳೂರಿಗೆ ತಲುಪಲಿದೆ ಎಂದು  ಭಟ್ಕಳ ಪ್ರಸಿದ್ಧ ಉದ್ಯಮಿ ಮತ್ತು ಮಜ್ಲಿಸ್-ಎ-ಇಸ್ಲಾಹ್-ಒ-ತಂಜೀಮ್‌ನ ಉಪಾಧ್ಯಕ್ಷ  ಅತೀಕ್-ಉರ್-ರೆಹಮಾನ್ ಮುನಿರಿ ತಿಳಿಸಿದ್ದಾರೆ.

ಸಂಜೆ 7 ಗಂಟೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಸ್ಪೈಸ್‌ಜೆಟ್ ಮಂಗಳೂರಿಗೆ ಹಾರಲಿದೆ ಎಂದು ಅವರು ಹೇಳಿದರು. ಬೆಳಿಗ್ಗೆ 1 ಗಂಟೆ ಸುಮಾರಿಗೆ ಈ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ದುಬೈನಿಂದ ಪ್ರಯಾಣಿಕರಿಗೆ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣ ತಲುಪಲು ವಿಶೇಷ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.

ಮಂಗಳೂರಿನಲ್ಲಿ, ಎಂದಿನಂತೆ, ಎಲ್ಲಾ ಪ್ರಯಾಣಿಕರನ್ನು ಭಟ್ಕಲ್ ಜಮಾಅತುಲ್ ಮುಸ್ಲೀಮೀನ್ ಮಂಗಳೂರು ಇದರ ಪದಾಧಿಕಾರಿಗಳು ಸ್ವಾಗತಿಸಿ ಅವರಿಗೆ ಊಟ ತಿಂಡಿಯ ವ್ಯವಸ್ಥೆಯನ್ನೂ ಮಾಡಿ ನಂತರ ೫ ವಿಶೇಷ ಬಸ್ಸುಗಳ ಮೂಲಕ ಭಟ್ಕಳಕ್ಕೆ ತಲುಪಿಸುವ ವ್ಯವಸ್ಥೆಯನ್ನ್‌ಉ ಮಾಡುತ್ತಿರುವುದಾಗಿ ಅವರು ಮಾಹಿತಿ ನೀಡಿದರು.

ವಿಮಾನವು 175 ಆಸನಗಳನ್ನು ಹೊಂದಿದ್ದರೆ, 6 ಸಣ್ಣ ಮಕ್ಕಳು ಸಹ ಪ್ರಯಾಣಿಕರೊಂದಿಗೆ ಇರಲಿದ್ದಾರೆ, ಹೀಗಾಗಿ ಒಟ್ಟು 181 ಪ್ರಯಾಣಿಕರು ಭಟ್ಕಳ ತೆರಳಲಿದ್ದಾರೆ. ಭಟ್ಕಳಕ್ಕೆ ಬರುವ ಹೆಚ್ಚಿನ ಪ್ರಯಾಣಿಕರಲ್ಲಿ ಗರ್ಭಿಣಿಯರು ಮತ್ತು ವೃದ್ಧರು ಸೇರಿದ್ದು ದುಬೈಯಲ್ಲಿ ಲಾಕ್ಡೌನ್ ನಲ್ಲಿ ಕಷ್ಟದಲ್ಲಿದ್ದವರು ಎಂದು ತಿಳಿದುಬಂದಿದೆ.  

ದುಬೈ ಮತ್ತು ಯುಎಇಯ ಕರೋನಾ ಲಾಕ್‌ಡೌನ್‌ನಲ್ಲಿ ಸಿಕ್ಕಿಬಿದ್ದ ಭಟ್ಕಳ ಮತ್ತು ಅದರ ಸುತ್ತಲಿನ ಜನರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಟ್ಕಳ ಮೂಲದ  ದುಬೈನ ಪ್ರಸಿದ್ಧ ಉದ್ಯಮಿ ಅತೀಕ್-ಉರ್-ರೆಹಮಾನ್ ಮುನಿರಿ ಚಾರ್ಟರ್ಡ್ ವಿಮಾನದಲ್ಲಿ ಭಟ್ಕಳಕ್ಕೆ ಮರಳಿ ಕಳುಹಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.  ಜೂನ್ 12 ರಂದು ಮೊದಲ ಚಾರ್ಟೆಡ್ ವಿಮಾನವು ದುಬೈಯಿಂದ ಮಂಗಳುರಿಗೆ ಬಂದಿತ್ತು. ಇದಾದ ನಂತರ ಮತ್ತಷ್ಟು ಜನರು ತಮ್ಮ ತಾಯ್ನಾಡಿಗೆ ತೆರೆಳಲು ಬೇಡಿಕೆಯಿಟ್ಟ ಪರಿಣಾಮ ಮುನಿರಿಯವರು ಎರಡನೇ ಚಾರ್ಟೆಡ್ ವಿಮಾನ ಹಾರಾಟಕ್ಕೆ ಸಿದ್ದತೆಯನ್ನು ನಡೆಸಿದ್ದರು. ಎಲ್ಲವೂ ಸರಿ ಹೋಗಿದ್ದರೆ ಜು.೨೩ರಂದೇ ಎರಡನೇ ವಿಮಾನದ ಮೂಲಕ ಜನರು ಭಟ್ಕಳವನ್ನು ಸೇರಿಕೊಳ್ಳುತ್ತಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇಂದು ಅಂತಿಮಾವಾಗಿ ಭಟ್ಕಳಿಗರನ್ನು ಹೊತ್ತ ಎರಡನೇ ಚಾರ್ಟೆಡ್ ವಿಮಾನವು ದುಬೈಯ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದ ಮೂಲಕ ಮಂಗಳೂರು ತಲುಪಲಿದೆ.

ಈ ವಿಮಾನದಲ್ಲಿ ಉತ್ತರಕನ್ನಡ ಜಿಲ್ಲೆಯ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಮುರುಢೇಶ್ವರ, ಮಂಕಿ, ಹೊನ್ನಾವರ್, ಸರಡಗಿ ಮತ್ತು ಶಿರಸಿ ಸೇರಿದಂತೆ ಭಟ್ಕಳದ ಪ್ರಯಾಣಿಕರು ಒಳಗೊಂಡಿದ್ದಾರೆ ಎಂದು ಅತೀಕ್-ಉರ್-ರೆಹಮಾನ್ ಮುನಿರಿ ಹೇಳಿದರು. ಭಾರತ ಸರ್ಕಾರವು ದಿನಾಂಕವನ್ನು ಪದೇ ಪದೇ ರದ್ದುಗೊಳಿಸಿದ್ದರಿಂದ ಈ ಬಾರಿ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಇಂತಹ ಸಂದರ್ಭದಲ್ಲಿ ಭಟ್ಕಳದ ದುಬೈವಾಸಿಗರು ಈ ಬಾರಿ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದು ವಿಶೇಷವಾಗಿ ಸಾಮುದಾಯಿಕ ನಾಯಕ ಎಸ್.ಎಂ. ಸೈಯದ್ ಖಲೀಲ್-ಉರ್-ರೆಹಮಾನ್. ಸಾಹಿಬ್ ನೀಡಿದ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಮುನಿರಿಯವರು ಧನ್ಯವಾದಗಳನ್ನು ಸಲ್ಲಿಸಿದರು, ಜೊತೆಗೆ ಮಂಕಿ ಜಮಾಅತ್ ದುಬೈ ಅಧ್ಯಕ್ಷ ಅಬು ಮುಹಮ್ಮದ್ ಮುಖ್ತಾಸರ್, ಭಟ್ಕಲ್ ಮುಸ್ಲಿಂ ಜಮಾಅತ್ ದುಬೈನ ಮಾಜಿ ಪ್ರಧಾನ ಕಾರ್ಯದರ್ಶಿ ರೆಹಮತುಲ್ಲಾ ರಾಹಿ, ಇತರ ಸಕ್ರಿಯ ಸದಸ್ಯರಾದ ಶೆಹ್ರಿಯಾರ್ ಖತೀಬ್, ಯಾಸಿರ್ ಕಾಸಿಮ್ಜಿ, ಜಿಲಾನಿ ಮೊಹ್ತಾಶಮ್ ತಾಹಾ, ಫಾಹಿಮ್ ಸುಫ್ಯಾನ್ ಎಸ್.ಎಂ, ಮಾಝ್ ಷಾಬಾಂದ್ರಿ ಮತ್ತು ಇತರ ಅನೇಕರಿಗೆ ಅವರು ಧನ್ಯವಾದ ಅರ್ಪಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...