ಮೊದಲ ಯಶಸ್ವಿ ಚಾರ್ಟೆಡ್ ವಿಮಾನ ಹಾರಾಟದ ನಂತರ ಜೂ.23ಕ್ಕೆ  ದುಬೈಯಿಂದ ಮಂಗಳೂರಿಗೆ ಮೊತ್ತೊಂದು ವಿಮಾನ ಹಾರಾಟಕ್ಕೆ ಸಿದ್ಧ

Source: sonews | By Staff Correspondent | Published on 15th June 2020, 6:17 PM | Coastal News | Special Report | Don't Miss |

ಭಟ್ಕಳ: ಭಟ್ಕಳದ ಉದ್ಯಮಿ ಹಾಗೂ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನಿರಿಯವರು ದುಬೈಯಲ್ಲಿ ಸಿಲುಕಿಕೊಂಡಿದ್ದ 184 ಮಂದಿಯನ್ನು ಚಾರ್ಟೆಡ್ ವಿಮಾನದ ಮೂಲಕ ಸುರಕ್ಷಿತವಾಗಿ ಭಟ್ಕಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಜೂನ್23 ರಂದು ರಾಸ್-ಅಲ್-ಖೈಮಾ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹಾರಾಲು ಮತ್ತೊಂದು ಚಾರ್ಟೆಡೆ ವಿಮಾನ ಸಿದ್ಧಗೊಂಡಿದೆ. 

ಕೊರೋನಾ ಲಾಕ್ಡೌನ್ ಕಾರಣ ಭಟ್ಕಳ ಮತ್ತು ಸುತ್ತಮುತ್ತಲಿನ 600ಕ್ಕೆ ಹೆಚ್ಚು ಮಂದಿ ದುಬೈಯಲ್ಲಿ ಸಂಕಷ್ಟದೊಂದಿಗೆ ಬದುಕುತ್ತಿದ್ದಾರೆ. ಲಾಕ್ಡೌನ್ ನಿಂದಾಗಿ ಹತಾಶರಾಗಿರುವ ಅವರು ತಮ್ಮ ತಾಯ್ನಾಡಿಗೆ ಮರಳು ಬಯಸಿದ್ದಾರೆ. ಇವರನ್ನು ಭಾರತಕ್ಕೆ ಕಳುಹಿಸಲು ಸರ್ಕಾರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಮ್ಮ ಮೊದಲ ಚಾರ್ಟೆಡ್ ವಿಮಾನ 184 ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸಿದ ನಂತರ ನಮ್ಮಲ್ಲಿ ಭರವಸೆಯೊಂದು ಮೂಡಿದ್ದು ಇನ್ನುಳಿದ ಜನರನ್ನೂ ಭಟ್ಕಳಕ್ಕೆ ಕಳುಹಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಜೂನ್23ರಂದು 210 ಪ್ರಯಾಣಿಕರನ್ನು ಬಾಡಿಗೆ ವಿಮಾನದ ಮೂಲಕ ಭಟ್ಕಳ ತಲುಪಿಸಲಾಗುವುದು ಎಂದು ದುಬೈಯ ನೂಹಾ ಜನರಲ್ ಟ್ರೆಡಿಂಗ್ಸ್ ನ ಮಾಲಕ ಉದ್ಯಮಿ ಅತಿಕುರ್ರಹ್ಮಾನ್ ಸಾಹಿಲ್‍ಆನ್‍ಲೈನ್ ಗೆ ಮಾಹಿತಿ ನೀಡಿದ್ದಾರೆ. 

ಜೂನ್ 23ಕ್ಕೆ ವಿಮಾನ ಹಾರಾಟ
ಯುಎಇಯ ವಿವಿಧ ನಗರಗಳಲ್ಲಿ ಸಿಲುಕಿರುವ ತಮ್ಮ ತಾಯ್ನಾಡಿಗೆ ಮರಳಲು ಇಚ್ಚಿರುವವರು [email protected]    ಈ ಮೇಲ್ ವಿಳಾಸಕ್ಕೆ ತಮ್ಮ ಸಂಪೂರ್ಣ ಮಾಹಿತಿ ( ಪಾಸ್ಪೋರ್ಟ್ ಕಾಪಿಯ ಮೊದಲ ಮತ್ತು ಕೊನೆಯ ಪುಟದ ನಕಲು ಪ್ರತಿ, ದುಬೈಯ ಮುಬೈಲ್ ಸಂಖ್ಯೆ, ಭಾರತದ ಮುಬೈಲ್ ಸಂಖ್ಯ, ವಿಸಾ ವಿವರ, ಹಾಗೂ ಪ್ರಯಾಣಕ್ಕೆ ಕಾರಣ) ರವಾನಿಸಬೇಕೆಂದು ಕೋರಲಾಗಿದೆ.

ಸಮುದಾಯದ ಹಿರಿಯ ಮುಖಂಡ ಎಸ್.ಎಂ.ಸೈಯ್ಯದ್ ಖಲೀಲುರ್ರಹ್ಮಾನ್ ಸಾಹೇಬರ ಮಾರ್ಗದರ್ಶನದಲ್ಲಿ ದುಬೈಯಲ್ಲಿರುವ ಅವರ ತಂಡದ ಸದಸ್ಯರಾದ ಜೈಲಾನಿ ಮೊಹತೇಶಮ್, ಶಹರಿಯಾರ್ ಖತೀಬ್, ಆಫಾಖ್ ನಾಯ್ತೆ, ರಹ್ಮತುಲ್ಲಾ ರಾಹಿ, ಯಾಸಿರ್ ಕಾಸಿಂಜಿ, ತಾಹಾ ಮುಅಲ್ಲಿಂ, ಮಾಝ್ ಶಾಬಂದ್ರಿ, ಸೈಫಾನ್ ಎಸ್.ಎಂ, ಫಹೀಮ್ ರಝಾ, ಅಬ್ದುಲ್ ಮುಖ್ಸಿತ್ ಎಂ.ಜೆ, ನೂರ್ ಇಕ್ಕೇರಿ, ಎಜಾಝ್ ಜುಕಾಕೋ ಮುಂತಾದವರು  ಉದ್ಯಮಿ ಅತಿಕುರ್ರಹ್ಮಾನ್ ಮುನಿರಿಯವರಿಗೆ ಸಾತ್ ನೀಡುತ್ತಿದ್ದು ಎಲ್ಲರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ  ಜೂನ್.12 ರಂದು ದುಬೈ ಹಾಗೂ ಯುಎಇ ಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಟ್ಕಳ, ಹೊನ್ನಾವರ, ಕುಮಟಾ, ಶೀರೂರು, ಮಂಕಿಯ 184ಜನರನ್ನು ಬಾಡಿಗೆ ವಿಮಾನದ ಮೂಲಕ ಯಶಸ್ವಿಯಾಗಿ ತಾಯ್ನಾಡಿಗೆ ತಲುಪಿಸಿದ್ದಾರೆ.

ಮಂಗಳೂರು ಹಾಗೂ ಭಟ್ಕಳದಲ್ಲಿ ಅವರಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದು ಮೊದಲ ವಿಮಾನ ಮಂಗಳೂರು ತಲುಪುತ್ತಿದ್ದಂತೆ ಭಟ್ಕಳ ಮುಸ್ಲಿಮ್ ಜಮಾಅತ್ ಮಂಗಳುರಿನ ಸದಸ್ಯರು ಪ್ರಯಾಣಿಕರನ್ನು ಉತ್ತಮ ರೀತಿಯಲ್ಲಿ ಸ್ವಾಗತಿಸಿದ್ದು ಅವರಿಗೆ ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದಲ್ಲದೆ ಮಂಗಳೂರಿನಿಂದ ಭಟ್ಕಳಕ್ಕೆ ಹೋಗಲು ಖಾಸಗೀ ಬಸ್ ವ್ಯವಸ್ಥೆಯನ್ನು ಮಾಡಿದ್ದರು. ಭಟ್ಕಳದಲ್ಲಿಯೂ ಮಜ್ಲಿಸೆ ಇಸ್ಲಾಹ್ ತಂಝೀಮ್ ಸದಸ್ಯರು ಪ್ರಯಾಣಿಕರನ್ನು ಉತ್ತಮ ರೀತಿಯಲ್ಲಿ ಬರಮಾಡಿಕೊಂಡು ಅವರಿಗೆ ಯಾವುದೇ ತೊಂದರೆಯಾಗದಂತೆ ಅಂಜುಮನ್ ವಸತಿ ನಿಲಯ ಹಾಗೂ ಹೋಟೆಲ್ ಗಳಲ್ಲಿ ಕ್ವಾರೆಂಟೈನ್ ಮಾಡುವಲ್ಲಿ ಸಹಕರಿಸಿದ್ದಾರೆ. 

ಮೊದಲ ವಿಮಾನ ಹಾರಾಟದ ಯಶಸ್ವಿ ಅನುಭವದ ನಂತರ ಈಗ ಉತ್ತರಕನ್ನಡ ಜಿಲ್ಲಾಧಿಕರಿಗಳು ಹಾಗೂ ತಂಝೀಮ್ ಸಂಸ್ಥೆಯ ಹಸಿರು ನಿಶಾನೆಯನ್ನು ತೋರಿಸಿದ್ದು  ಜೂನ್ 23ರಂದು ಎರಡನೇ ಚಾರ್ಟೆಡ್ ವಿಮಾನ ಹಾರಾಟಕ್ಕೆ ಸಿದ್ಧತೆ ನಡಸಿರುವ ಉದ್ಯಮಿ ಅತಿಕುರ್ರಹ್ಮಾನ್ ಮುನೀರಿ ತಮ್ಮ ತಂದೆಯಂತೆ ರಾಷ್ಟ್ರ ಮತ್ತು ಸಮುದಾಯದ ಸೇವೆಯನ್ನು ಮಾಡುವ ಉತ್ಸಾಹ ಹೊಂದಿದ್ದಾರೆ. 

ಯುಎಇಯ ವಿವಿಧ ನಗರಗಳಲ್ಲಿ ಸಿಲುಕಿರುವ ತಮ್ಮ ತಾಯ್ನಾಡಿಗೆ ಮರಳಲು ಇಚ್ಚಿರುವವರು [email protected]    ಈ ಮೇಲ್ ವಿಳಾಸಕ್ಕೆ ತಮ್ಮ ಸಂಪೂರ್ಣ ಮಾಹಿತಿ ( ಪಾಸ್ಪೋರ್ಟ್ ಕಾಪಿಯ ಮೊದಲ ಮತ್ತು ಕೊನೆಯ ಪುಟದ ನಕಲು ಪ್ರತಿ, ದುಬೈಯ ಮುಬೈಲ್ ಸಂಖ್ಯೆ, ಭಾರತದ ಮುಬೈಲ್ ಸಂಖ್ಯ, ವಿಸಾ ವಿವರ, ಹಾಗೂ ಪ್ರಯಾಣಕ್ಕೆ ಕಾರಣ) ರವಾನಿಸಬೇಕೆಂದು ಕೋರಲಾಗಿದೆ.

Read These Next

ಭಟ್ಕಳ: ಸದಸ್ಯರ ವಿರೋಧದ ನಡುವೆಯೂ ಜಾಲಿ ಪ.ಪಂ ಕಟ್ಟಡ ಕಾಮಗಾರಿ ಆರಂಭ; ಸದಸ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ; ಸ.ನಂ.242 ರಲ್ಲಿ ಜಾಲಿ ಪಟ್ಟಣ ಪಂಚಯತ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದಸ್ಯರ ತೀವ್ರ ವಿರೋಧದ ನಡುವೆಯೂ ...

ಮತದಾರರ ಪಟ್ಟಿ ಪ್ರಕಟ ; ಆಕ್ಷೇಪಣೆಗೆ ಅವಕಾಶ                                                                     

ಕಾರವಾರ:ಗ್ರಾಮ ಪಂಚಾಯತಗಳ 2020 ರ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲೆಯ 12 ತಾಲೂಕಿನ 231 ಗ್ರಾಮ ಪಂಚಾಯತಗಳ ಮತದಾರರ ಪಟ್ಟಿಯನ್ನು ...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು   ಅರ್ಜಿ ಆಹ್ವಾನ      

ಕಾರವಾರ: ಡಾ: ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ...

ಭಟ್ಕಳದ ವೆಲ್ಫೇರ್ ಆಸ್ಪತ್ರೆಯಲ್ಲಿ ಉಚಿತ ತಾಪಮಾನ ತಪಾಸಣೆ ಮತ್ತು  ಆಮ್ಲಜನಕ ಸ್ಯಾಚುರೇಶನ್ ಕ್ಯಾಂಪ್

ಭಟ್ಕಳ: ವೆಲ್ಫೇರ್ ಆಸ್ಪತ್ರೆಯು  ಇಂಡಿಯನ್ ನವಾತ್ ಫೋರಂ ನ ಸಹಯೋಗದೊಂದಿಗೆ ವೆಲ್ಫೇರ್ ಆಸ್ಪತ್ರೆಯಲ್ಲಿ ಉಚಿತ ತಾಪಮಾನ ತಪಾಸಣೆ ಮತ್ತು ...

ಭಟ್ಕಳ: ವುಮೆನ್ಸ್ ಸೆಂಟರ್ ನಲ್ಲಿ ಕೋವಿಡ್ ಸೋಂಕಿತ ಆರೈಕೆ; ೬೪ ಮಂದಿ ಸೋಂಕಿತರ ಸ್ಥಳಾಂತರ

ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಕೊರೋನಾ ಸೋಂಕಿತರ ಆರೈಕೆಯಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು ಹೆಬಳೆ ...

ಭಟ್ಕಳ: ಸದಸ್ಯರ ವಿರೋಧದ ನಡುವೆಯೂ ಜಾಲಿ ಪ.ಪಂ ಕಟ್ಟಡ ಕಾಮಗಾರಿ ಆರಂಭ; ಸದಸ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ; ಸ.ನಂ.242 ರಲ್ಲಿ ಜಾಲಿ ಪಟ್ಟಣ ಪಂಚಯತ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದಸ್ಯರ ತೀವ್ರ ವಿರೋಧದ ನಡುವೆಯೂ ...

ಹೊರರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಮೀನುಗಾರ ಕಾರ್ಮಿಕರಿಗೆ ದೋಣಿಗಳಲ್ಲಿ ಕ್ವಾರಂಟೈನ್ : ಕೋಟಾ ಶ್ರೀನಿವಾಸ ಪೂಜಾರಿ

ಹೊರರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಮೀನುಗಾರ ಕಾರ್ಮಿಕರಿಗೆ ದೋಣಿಗಳಲ್ಲಿ ಕ್ವಾರಂಟೈನ್ : ಕೋಟಾ ಶ್ರೀನಿವಾಸ ಪೂಜಾರಿ