ಪಿಎಫ್‌ಐ, ಎಸ್‌ಡಿಪಿಐ ಬಿಜೆಪಿಯ 'ಬಿ' ಟೀಂ: ಸಿದ್ದರಾಮಯ್ಯ

Source: S O News | By S O News | Published on 23rd February 2021, 8:37 PM | Coastal News | State News |

ಮಂಗಳೂರು: ಪಿಎಫ್ಐ, ಎಸ್‌ಡಿಪಿಐ-ಬಿಜೆಪಿಯ 'ಬಿ' ಟೀಂ. ಅವರನ್ನು ಬೆಳೆಸುತ್ತಿರುವುದೇ ಬಿಜೆಪಿ.: ಈ ಸಂಘಟನೆಗಳ ನಿಷೇಧಕ್ಕೆ ಸಾಕಷ್ಟು ಸಾಕ್ಷ್ಯ ಇದೆ ಎಂದು ಸ್ವತಃ ಮುಖ್ಯಮಂತ್ರಿ, ಗೃಹ ಸಚಿವರೇ ಹೇಳಿದ್ದಾರೆ. ಹಾಗಿದ್ದರೆ ಮೊದಲು ಈ ಸಂಘಟನೆಗೆ ಳನ್ನು ನಿಷೇಧ ಮಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಘಟಕದಿಂದ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ 'ಭಾವೈಕ್ಯತಾ ಸಮಾವೇಶ'ದಲ್ಲಿ ಹಾಗೂ ಸುದ್ದಿಗಾರರ ಜತೆಗೆ ಮಾತನಾಡಿ ಸಿದ್ದರಾಮಯ್ಯ ಈ ಆಗ್ರಹ ಮಾಡಿದರು.

ಸಂವಿಧಾನಾತ್ಮಕವಾಗಿದೆ ಮೀಸಲು ಕೇಳುವುದು ತಪ್ಪಲ್ಲ: ಸಿದ್ದು

ಯಾವುದೇ ಸಮುದಾಯದವರು ಮಿಸ ಲಾತಿ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ ಸಂವಿಧಾನಾತ್ಮ ಕವಾಗಿ ಅರ್ಹತೆ ಇರುವ ವರಿಗೆ ಮಾತ್ರ ಮೀಸಲಾತಿ ಕೊಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇಲ್ಲಿ ಸುದ್ದಿಗಾರರ ಜತೆ ಮಾತనాడి, ಮೀಸಲಾತಿ ಬಗೆ  ಹಿಂದುಳಿದ ವರ್ಗಗಳ ಆಯೋಗ ಪರಿಶೀಲಿಸಿ ಶಿಫಾ ರಸು ಮಾಡಬೇಕು, ಹೊಸ ಸೇರ್ಪಡೆ ಮತ್ತು ಜಾತಿಗೆಳನ್ನು ಕೈಬಿಡುವ ಬಗ್ಗೆ ಆಯೋಗ ಶಿಫಾರಸು ಮಾಡ ಬೇಕು, ನಂತರ ಸರ್ಕಾರ ತೀರ್ಮಾನಿಸಲಿ ಎಂದರು.

ಎಸ್‌ಡಿಪಿಐ, ಪಿಎಫ್ಐನವರು ಬಿಜೆಪಿಗೆ ಹಿಂಬಾಗಿಲಿಂದ ಸಹಾಯ ಮಾಡುವವರು, ಬೆಂಗಳೂರಿನ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಯಲ್ಲಿ ಈ ಸಂಘಟನೆಗಳ ಕೈವಾಡ ಇದೆ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವರೇ ಬಹಿರಂಗ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ಇತ್ತೀಚೆಗೆ ಪಿಎಫ್‌ಐಗೆ ರೇಲಿ  ಮಾಡಲು ಬಿಜೆಪಿಯವರೇ ಅನುಮತಿ ನೀಡಿದ್ದಾರೆ. ಎಲ್ಲ ಕಡೆಯಲ್ಲೂ ಬಿಜೆಪಿಯವರೇ ಇರುವಾಗ, ನಿಷೇಧಕ್ಕೆ ಸಾಕಷ್ಟು ಸಾಕ್ಷ್ಯವೂ ಇರುವಾಗ ಬ್ಯಾನ್ ಮಾಡಲು ಏನು ತೊಂದರೆ ಎಂದರು.

ಬಿಜೆಪಿಗೆ ಮಾತ್ರ ಲಾಭ: ಕಳೆದ ಚುನಾವಣೆಯಲ್ಲಿ ಬಿಹಾರದಲ್ಲಿ ಎಂಐಎಂ ಪಕ್ಷದವರು ಸ್ಪರ್ಧಿಸಿ ಮುಸ್ಲಿಮರ ಓಟು ಪಡೆದರು. ಆದರೆ, ಇದರಿಂದ ಲಾಭವಾಗಿದ್ದು ಮಾತ್ರ ಬಿಜೆಪಿಗೆ, ಕರ್ನಾಟಕದಲ್ಲೂ ಪಿಎಫ್‌ಐ, ಎಸ್‌ಡಿಪಿಐ ಮೂಲಕ ಬಿಜೆಪಿ ಓಟು ಪಡೆಯುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ಎಸ್‌ಡಿಪಿಐ, ಪಿಎಫ್‌ಐ, ಎಂಐಎಂ ಮಾತು ಕೇಳಬೇಡಿ ಎಂದರು.

ಆರೆಸ್ಸೆಸ್ ಜಾತಿ ಸಂಘಟನೆ: ಆರೆಸ್ಸೆಸ್ ಎನ್ನುವುದು ಜಾತಿ `ಸಂಘಟನೆ. ಅವರು ತಾವು ದೇಶ ಪ್ರೇಮಿಗಳು ಅಂತಾರೆ. ಹಾಗಿದ್ದರೆ ಸ್ವಾತಂತ್ರ ಹೋರಾಟಕ್ಕೆ ಅವರ ಕೊಡುಗೆ ಏನು? ಆರೆಸ್ಸೆಸ್‌ನಿಂದ ಯಾರೂ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ನಮ್ಮ ಊರಿನ ರಾಮ ಮಂದಿರಕ್ಕೆ ಹಣಕೊಟೆ ಆಗಲ್ವಾ?: ಸಿದ್ದು

ನಾನು ಅಯೋಧ್ಯೆ ರಾಮಮಂದಿರಕ್ಕೆ ಹಣ ಕೊಡಲ್ಲ, ನಮ್ಮೂರ ರಾಮನೂದಶರಥನಮಗನೇ, ನಮ್ಮೂರರಾಮನಿಗೆ ಹಣ ಕೊಟ್ರೆ ಆಗಲ್ವಾ ಎಂದು ಪ್ರತಿಪಕ್ಷನಾಯಕ ಸಿದ್ದ ರಾಮಯ್ಯ ಪ್ರಶ್ನಿಸಿದರು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಜಿಲ್ಲಾ ಕಾಂಗ್ರೆಸ್‌ನಿಂದ ಉಡುಪಿ ಜಿಲ್ಲೆಯ ದಕ್ಷಿಣದ ಹೆಜಮಾಡಿ ಗಡಿಯಿಂದ ಉತ್ತರದ ಬೈಂದೂರು ಗಡಿವರೆಗೆ 6 ದಿನಗಳ 108 ಕಿ.ಮೀ. ಪಾದಯಾತ್ರೆ -ಜನಧ್ವನಿಯಂಗವಾಗಿ ಪಡುಬಿದ್ರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಹಾಗೂ ಇದಕ್ಕೂ ಮೊದಲು ಸುದ್ದಿಗಾರರ ಜತೆಗೆ ಮಾತನಾಡಿದ ಅವರು ರಾಮಮಂದಿರ ದೇಣಿಗೆ ವಿಚಾರವಾಗಿ ತಮ್ಮ ವಿರುದ್ಧ ಕೇಳಿಬಂದ ಆರೋಪ ಗಳ ಕುರಿತು ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತಂದಿದ್ದರಿಂದ ರೈತರಿಗೆ ಹೊಡೆತ ಬಿದ್ದಿದೆ. ಬೀಫ್ ಆಹಾರ ಸಂಸ್ಕೃತಿ. ಅದನ್ನು ತಡೆಯಲು ನೀವ್ಯಾರು? ನಾನು ಈವರೆಗೂ ಬೀಫ್ ತಿಂದಿಲ್ಲ ತಿನ್ನಬೇಕಾದರೆ ತಿಂತೀನಿ. ನೀವ್ಯಾರು ಕೇಳುವುದಕ್ಕೆ ಎಂದು ಪುನರುಚ್ಚರಿಸಿದ ಅವರು, ಗೋಹತ್ಯಾ ನಿಷೇಧ ಕಾನೂನನ್ನು ಅನಗತ್ಯವಾಗಿ, ಅದೂ ಕೂಡ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯದಲ್ಲೇನು ತುರ್ತು ಪರಿಸ್ಥಿತಿ ಇದೆಯೇ ಎಂದು ಪ್ರಶ್ನಿಸಿದರು.

 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...