'ಧರ್ಮ ಸಂಸದ್'ನಲ್ಲಿ ದ್ವೇಷ ಭಾಷಣ; ಪಿಐಎಲ್ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ

Source: S O news | By I.G. Bhatkali | Published on 11th January 2022, 9:51 AM | National News |

ಹೊಸದಿಲ್ಲಿ: ಹರಿದ್ವಾರದಲ್ಲಿ ಮೂರು ದಿನಗಳ ಕಾಲ ನಡೆದ 'ಧರ್ಮ ಸಂಸದ್'ನಲ್ಲಿ ಮುಸ್ಲಿಮರನ್ನು ಗುರಿಯಾಗಿರಿಸಿ, ಅವರ ನರಮೇಧಕ್ಕೆ ಹಾಗೂ ಹಿಂಸಾಚಾರಕ್ಕೆ ಕರೆ ನೀಡಿದ್ದ ದ್ವೇಷ ಭಾಷಣದ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.

ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ಮುಂದೆ ಉಲ್ಲೇಖಿಸಿದರು. ಅಲ್ಲದೆ ದೇಶದಲ್ಲಿ ಸತ್ಯಮೇವ ಜಯತೆ ಘೋಷಣೆ ಶಸ್ತ್ರಮೇವ ಜಯತೆ ಎಂದು ಬದಲಾದ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದರು.

“ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಯಾರೊಬ್ಬರನ್ನೂ ಬಂಧಿ 66 ಸಿಲ್ಲ. ನೀವು ಈ ಪ್ರಕರಣದ ಮಧ್ಯೆ ಪ್ರವೇಶಿಸಿದೇ ಇದ್ದರೆ, ಯಾವುದೇ ಕ್ರಮ ತೆಗೆದುಕೊಳ್ಳಲಾರರು” ಎಂದು ಕಪಿಲ್ ಸಿಬಲ್ ಗಮನ ಸೆಳೆದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ಒಪ್ಪಿ ಕೊಂಡರು.

ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿ ಸುವಂತೆ, ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ಸ್ವತಂತ್ರ್ಯ ಹಾಗೂ ಪಕ್ಷಪಾತರಹಿತ ತನಿಖೆ ನಡೆಸುವಂತೆ ಕೋರಿ ಪತ್ರಕರ್ತ ಖುರ್ಬಾನ್ ಅಲಿ, ಪಾಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಅವರು ಮನವಿ ಸಲ್ಲಿಸಿದ್ದರು.

ಮೂರು ದಿನಗಳ 'ಧರ್ಮ ಸಂಸದ್ ಗೆ ಸಂಬಂಧಿಸಿ ಉತ್ತ ರಾಖಂಡದ ಪೊಲೀಸರು ಯತಿ ನರಸಿಂಹಾನಂದ ಹಾಗೂ ಸಾಗರ ಸಿಂಧುರಾಜ ಮಹಾರಾಜ ಅವರ ಹೆಸರನ್ನು ಜನವ 1ರಂದು ಎಫ್‌ಐಆರ್‌ನಲ್ಲಿ ಸೇರಿಸಿತ್ತು. ಇದರೊಂದಿಗೆ ಒಟ್ಟು ಆರೋಪಿಗಳ ಸಂಖ್ಯೆ ಐದು ಆಗಿತ್ತು. ಒಂದು ದಿನದ ಬಳಿಕ ಅನಾಮಿಕ ಇತರರೊಂದಿಗೆ ಜಿತೇಂದ್ರ ನಾರಾಯಣ ತ್ಯಾಗಿ ಅವರ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಲಾಗಿತ್ತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...