ಅದಾನಿ ಸಮೂಹದಲ್ಲಿ ಎಸ್‌ಬಿಐ, ಎಲ್‌ಐಸಿ ಸೀಮಿತ ಹೂಡಿಕೆ; ಮೌನ ಮುರಿದ ವಿತ್ತ ಸಚಿವೆ

Source: Vb | By I.G. Bhatkali | Published on 5th February 2023, 12:45 AM | National News |

ಹೊಸದಿಲ್ಲಿ: ಅದಾನಿ ಗುಂಪಿನ ಕಂಪೆನಿಗಳ ವಿರುದ್ದದ ವಂಚನೆ ಆರೋಪಗಳು ಹೂಡಿಕೆದಾರರ ನಂಬಿಕೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ಭಾವಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು ಸದೃಢವಾಗಿದೆ ಮತ್ತು ಹಣಕಾಸು ಮಾರುಕಟ್ಟೆಗಳನ್ನು “ಉತ್ತಮವಾಗಿ ನಿಯಂತ್ರಿಸಲಾಗುತ್ತಿದೆ'' ಎಂದು ಅವರು ಹೇಳಿದರು.

ತಾವು ಅದಾನಿ ಗುಂಪಿನ ಶೇರುಗಳಲ್ಲಿ ಅಧಿಕ ಹೂಡಿಕೆ ಮಾಡಿಲ್ಲ ಎಂಬುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮತ್ತು ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಈಗಾಗಲೇ ವಿವರಣೆ ನೀಡಿವೆ ಎಂದು ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸಚಿವೆ ಹೇಳಿದರು.

ಅದಾನಿ ಗುಂಪಿನ ಶೇರುಗಳಲ್ಲಿ ತಾವು ಮಾಡಿರುವ ಹೂಡಿಕೆಗಳು ಅಂಗೀಕೃತ ಮಿತಿಗಿಂತ ತುಂಬಾ ಒಳಗೆ ಇದೆ ಹಾಗೂ ತಾವು ಈಗಲೂ ಲಾಭದಲ್ಲಿದ್ದೇವೆ ಎಂದು ಎಸ್‌ಬಿಐ ಮತ್ತು ಎಲ್‌ಐಸಿ ಸ್ಪಷ್ಟವಾಗಿ ಹೇಳಿವೆ. ಅವರು ಹೇಳಿದ ಮೇಲೆ ಅದೇ ಅಂತಿಮ” ಎಂದು ಅವರು ಅಭಿಪ್ರಾಯಪಟ್ಟರು.

“ಭಾರತ ಉತ್ತಮ ಆಡಳಿತಕ್ಕೆ ಒಳಪಟ್ಟ ದೇಶವಾಗಿದೆ ಹಾಗೂ ದೇಶದ ಆರ್ಥಿಕ ಮಾರುಕಟ್ಟೆಗಳನ್ನು ಚೆನ್ನಾಗಿ ನಿಯಂತ್ರಿಸಲಾಗುತ್ತಿದೆ ಎಂದು ಅವರು ಹೇಳಿದರು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...