ದ.ಕ.ಜಿಲ್ಲಾ ಎನ್ ಎಸ್ ಯುಐ ಅಧ್ಯಕ್ಷರಾಗಿ ಎರಡನೇ ಬಾರಿಗೆ ಸವಾದ್ ಸುಳ್ಯ ನೇಮಕ

Source: SO News | By Laxmi Tanaya | Published on 27th January 2022, 9:51 PM | Coastal News | Don't Miss |

ಮಂಗಳೂರು: ಎನ್ ಎಸ್ ಯುಐ ದ.ಕ. ಜಿಲ್ಲಾ ನೂತನ ಅಧ್ಯಕ್ಷರಾಗಿ ಸವಾದ್ ಸುಳ್ಯ ಅವರನ್ನು ನೇಮಕಗೊಳಿಸಿ ಕೂಡಲೇ ಜಾರಿಗೆ ಬರುವಂತೆ ರಾಷ್ಟ್ರೀಯ ಎನ್ ಎಸ್ ಯುಐ ಕಾರ್ಯದರ್ಶಿ ಎರಿಕ್ ಸ್ಟೀಫನ್ ಮತ್ತು ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್
ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ಸುಳ್ಯದ ಉದ್ಯಮಿ ನಾವೂರು ಅಬೂಬಕ್ಕರ್ ಮತ್ತು ಮೈಮೂನ ದಂಪತಿಯ ಪುತ್ರರಾಗಿರುವ ಮಹಮ್ಮದ್ ಸವಾದ್ ಅವರು ವಿಧ್ಯಾರ್ಥಿ ದೆಸೆಯಿಂದಲೇ ಸಂಘಟನೆ ಮತ್ತು ವಿದ್ಯಾರ್ಥಿಗಳ ಪರ ಹೋರಾಟದ ಮುಂಚೂಣಿಯಲ್ಲಿದ್ದುಕೊಂಡು ಬಂದವರು. ಪ್ರೌಢ ಶಾಲೆಯಲ್ಲಿರುವಾಗಲೇ ಎನ್ ಎಸ್ ಯುಐ ವಿದ್ಯಾರ್ಥಿ ನಾಯಕನಾಗಿ, ಕಾಲೇಜು ಘಟಕದ ಅಧ್ಯಕ್ಷನಾಗಿ, ಸುಳ್ಯ ನಗರ ಅಧ್ಯಕ್ಷನಾಗಿ, ಜಿಲ್ಲಾ ಸಂಯೋಜಕನಾಗಿ, ರಾಜ್ಯ ಚುನಾಯಿತ ಕಾರ್ಯದರ್ಶಿಯಾಗಿ, ಪ್ರಸ್ತುತ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ವಿದ್ಯಾರ್ಥಿಗಳ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅವರು ಸಾಮಾಜಿಕ ಸಂಘಟನೆಯಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ. ಕೋರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿರುವ ಅವರು, ಡ್ರಗ್ಸ್ ವಿರುದ್ಧ ಜಿಲ್ಲಾದ್ಯಂತ ಅಭಿಯಾನವನ್ನು ಕೂಡ ಮಾಡಿದ್ದಾರೆ. ಅಲ್ಲದೆ, ಎನ್ ಎಸ್ ಯುಐ ಆಯೋಜಿಸಿದ ರಾಷ್ಟ್ರೀಯ ಮತ್ತು ರಾಜ್ಯ ಶಿಬಿರಗಳಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

ಇವರು ಪ್ರಾರಂಬಿಸಿದ ಹಲವಾರು ವಿದ್ಯಾರ್ಥಿ ಪರ ಕಾರ್ಯಕ್ರಮಗಳು ರಾಜ್ಯ ಮತ್ತು ದೇಶಿಯ ಸಮಿತಿಗಳು ಮಾದರಿಯಾಗಿ ಜಾರಿ ಮಾಡಿದ್ದವು ಹಾಗೇಯೆ ಬಸ್ ಪಾಸ್ ಇಶ್ಯುವಾದಾಗ, ವಿದ್ಯಾರ್ಥಿ ವೇತನ ಮತ್ತು ಲ್ಯಾಪ್ ಟಾಪ್ ನೀಡಲು ವಿಳಂಬವಾದಾಗ ಅಂದಿನ ಮುಖ್ಯಮಂತ್ರಿ ಮತ್ತು ಸಚಿವರನ್ನು ಭೇಟಿ ಮಾಡಿ ಪರಿಹರಿಸುವಲ್ಲಿ ಗಮನ ಸೆಳೆದಿದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...