ಜ.30ರಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆ: ಮಾಜಿ ಶಾಸಕ ಸತೀಶ್ ಸೈಲ್ ಮಾಹಿತಿ; ಫೆ.6ರಿಂದ ಕಾರವಾರದಲ್ಲಿ ಕರುನಾಡ ಕರಾವಳಿ ಉತ್ಸವ

Source: S O News Service | By Office Staff | Published on 28th January 2020, 8:24 PM | Coastal News |

ಕಾರವಾರ: ‘ಫೆಬ್ರುವರಿ 6, 7, 8 ಹಾಗೂ 9ರಂದು ಕರುನಾಡ ಕರಾವಳಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಕರುನಾಡ ಕರಾವಳಿ ಉತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ಸತೀಶ್ ಸೈಲ್ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜನವರಿ 30ರಂದು ಸಂಜೆ 5.30ಕ್ಕೆ ಓಂ ಸಾಯಿ ಫ್ರೆಂಡ್ಸ್ ಅಮ್ಯೂಸ್‍ಮೆಂಟ್ ಪಾರ್ಕ್, ವಸ್ತು ಮಳಿಗೆ ಹಾಗೂ ಆಹಾರ ಮಳಿಗೆಗಳ ಉದ್ಘಾಟನೆ ನೆರವೇರಲಿದೆ. ಅದೇ ದಿನ ಸಂಜೆ 6 ಗಂಟೆಯಿಂದ ಕಿರಿಯರ ವಿಭಾಗ ಹಾಗೂ ಹಿರಿಯರ ವಿಭಾಗದವರಿಗಾಗಿ ಸೋಲೊ ನೃತ್ಯ ಸ್ಪರ್ಧೆ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರಾಜನ್ ಬಾನಾವಳಿಕರ್ (ಮೊ.ಸಂ: 94836 13834), ವಿಜೇಂದ್ರ ಕುಮಾರೇಶ (ಮೊ.ಸಂ: 99026 83003) ಅಥವಾ ಸೂರ್ಯಪ್ರಕಾಶ (ಮೊ.ಸಂ: 83108 15761) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ತಿಳಿಸಿದರು. 
‘ಜನವರಿ 31ರಂದು ಮಧ್ಯಾಹ್ನ 2.30ಕ್ಕೆ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸಲು ಆಸ್ತಕರಿರುವ ತಂಡಗಳು ಮೊ.ಸಂ: 99457 41575ಗೆ ಕರೆಮಾಡಿ ನೋಂದಾಯಿಸಿಕೊಳ್ಳಬಹುದು. ಫೆಬ್ರುವರಿ 1ರಂದು ಸಂಜೆ 3 ಗಂಟೆಗೆ ಟೀಮ್ ಮಂಗಳೂರಿನ ದಿನೇಶ ಹೊಳ್ಳ ಉಪಸ್ಥಿತಿಯಲ್ಲಿ ಗಾಳಿಪಟ ಉತ್ಸವ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ಎನ್.ದತ್ತಾ (ಮೊ.ಸಂ: 98451 15211) ಹಾಗೂ ಅರವಿಂದ ಗುನಗಿ (ಮೊ.ಸಂ: 90352 60118) ಅವರನ್ನು ಸಂಪರ್ಕಿಸಬಹುದು. ಫೆಬ್ರುವರಿ 2ರಂದು ಬೆಳಿಗ್ಗೆ 9ಗಂಟೆಗೆ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದ್ದು ಈ ಬಗೆಗಿನ ಮಾಹಿತಿಗಾಗಿ ಗಣೇಶ್ (ಮೊ.ಸಂ: 87479 73720) ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು. ಅದೇ ದಿನ ಸಂಜೆ 3 ಗಂಟೆಗೆ ಅಜ್ವಿ ಓಶಿಯನ್ ಸಭಾಂಗಣದಲ್ಲಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಹಾಗೂ ಪಾರಿತೋಷಕವನ್ನು ಫೆಬ್ರುವರಿ 6ರಂದು ಮಯೂರವರ್ಮ ವೇದಿಕೆಯಲ್ಲಿ ನಡೆಯುವ ಕರುನಾಡ ಕರಾವಳಿ ಉತ್ಸವದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುತ್ತದೆ. ಇದರೊಂದಿಗೆ ಕಾರ್ಯಕ್ರಮದಲ್ಲಿ ವೀರ ಯೋಧರಿಗೆ ಸನ್ಮಾನ, ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಲಾವಿದರಿಂದ ಸಂಗೀತ, ನೃತ್ಯ, ಯಕ್ಷಗಾನ ರೂಪಕ, ಹಾಸ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಎನ್.ದತ್ತಾ, ಗಣೇಶ್ ಮೊದಲಿಯಾರ್, ಸಂತೋಷ್ ನಾಯ್ಕ ಪೂನಮ್ ಪ್ರಸಾದ್, ಆನಂದ ಮಡಿವಾಳ, ದೀಪಕ್ ಕುಡಾಳಕರ್, ಅರವಿಂದ ಗುನಗಿ, ಸೂರ್ಯಪ್ರಕಾಶ್ ಬಶೆಟ್ಟಿ, ಮದನ ಗುನಗಿ, ಮನೋಜ್ ಗುನಗಿ, ಸಮೀರ ನಾಯ್ಕ ಇದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...