ನರ್ಮ್ ಅಭಿಯಾನದ ಸಂಜೀವಿನಿ ಕಾರ್ಯಕ್ರಮವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂಜೀವಿನಿಯಾಗಿದೆ -ಜಿ.ಪಂ. ಸಿಇಓ ಡಾ.ಬಿ. ಸುಶೀಲಾ

Source: SO News | By Laxmi Tanaya | Published on 3rd August 2021, 10:56 PM | State News | Don't Miss |

ಧಾರವಾಡ : ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ (ನರ್ಮ್) ಅಭಿಯಾನದಡಿ ಆರಂಭಿಸಿರುವ ಸಂಜೀವಿನಿ ಕಾರ್ಯಕ್ರಮವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂಜೀವಿನಿಯಾಗಿದ್ದು, ಒಕ್ಕೂಟದ ಮಹಿಳಾ ಸದಸ್ಯರು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಭಿಯಾಗಿ ಅಭಿವೃದ್ಧಿ ಸಾಧಿಸಿಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ. ಸುಶೀಲಾ ಹೇಳಿದರು.

 ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಗಳಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ (ನರ್ಮ್) ಅಭಿಯಾನದಡಿ ಸಮುದಾಯ ಬಂಡವಾಳ ನಿಧಿಯ ಚೆಕ್‍ಗಳನ್ನು ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಅಭಿವೃದ್ಧಿಯಲ್ಲಿ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣವು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳಲ್ಲಿ ಅವಕಾಶ ಕಲ್ಪಿಸಿದೆ. ಆದ್ದರಿಂದ ಮಹಿಳೆಯರು ತಮ್ಮ ಒಕ್ಕೂಟದ ಮೂಲಕ ಸಮುದಾಯ ಬಂಡವಾಳ ನಿಧಿಯನ್ನು ಅರ್ಹ ಮತ್ತು ಅವಶ್ಯವಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲವನ್ನು ವಿತರಿಸುವ ಮೂಲಕ ಒಂದು ಬ್ಯಾಂಕ್ ರೀತಿಯಲ್ಲಿ ಶಿಸ್ತುಬದ್ಧವಾಗಿ ವ್ಯವಹರಿಸಬೇಕು. ಮತ್ತು ಈ ಮೂಲಕ ಮಹಿಳೆಯರು ವಿವಿಧ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು. 

 ಜಿಲ್ಲೆಯ 144 ಗ್ರಾಮಪಂಚಾಯತ್‍ಗಳ ಪೈಕಿ 130 ಗ್ರಾಮಪಂಚಾಯತ್‍ಗಳಲ್ಲಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಗಳು ರಚನೆಯಾಗಿವೆ. ಇವುಗಳ ಪೈಕಿ 79 ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಗಳಿಗೆ ಸಮುದಾಯ ಬಂಡವಾಳ ನಿಧಿ ಅನುದಾನ 1021.75 ಲಕ್ಷ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ 79 ಗ್ರಾಮಪಂಚಾಯತಿ ಮಟ್ಟದ ಒಕ್ಕೂಟಗಳ ಪೈಕಿ ಹತ್ತು ಗ್ರಾಮಪಂಚಾಯತ್ ಒಕ್ಕೂಟಗಳಿಗೆ ಮಾತ್ರ ಶೇ.25 ರಷ್ಟು ಹಾಗೂ ಉಳಿದ ಒಕ್ಕೂಟಗಳಿಗೆ ಶೇ.50 ರಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ. ಇವುಗಳಲ್ಲಿನ 33 ಗ್ರಾಮಪಂಚಾಯತ್ ಒಕ್ಕೂಟಗಳಿಗೆ ಶೇ.25 ರಷ್ಟು 2ನೇ ಕಂತಿನ ಅನುದಾನ 256 ಲಕ್ಷ ರೂ.ಗಳ ಡಿ.ಡಿ.ಯನ್ನು ಇಂದು ವಿತರಿಸಲಾಗುತ್ತಿದೆ. ಇದರ ಸದುಪಯೋಗ ಮಾಡಿಕೊಂಡು ಒಕ್ಕೂಟಗಳು ತಾವೇ ಬ್ಯಾಂಕುಗಳಾಗಿ ತಮ್ಮ ಮಹಿಳಾ ಸ್ವಸಹಾಯ ಸಂಘಗಳಿಗೆ ಕನಿಷ್ಠ ದರದ ಬಡ್ಡಿಯಲ್ಲಿ ಸಾಲದ ನೆರವು ನೀಡಬೇಕೆಂದು ಡಾ.ಬಿ. ಸುಶೀಲಾ ತಿಳಿಸಿದರು. 

 ಜಿಲ್ಲೆಯ ಜನಸಂಖ್ಯೆಯನ್ನು ಗಮನಿಸಿದಾಗ ಶೇ.50ಕ್ಕಿಂತಲೂ ಹೆಚ್ಚು ಮಹಿಳೆಯರಿದ್ದಾರೆ. ಆದರೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇದೆ. ಜಿಲ್ಲಾ ಪಂಚಾಯತಿಯಿಂದ ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ಸ್ಥಾಪಿಸಿರುವ ಮಹಿಳಾ ಸ್ವಸಹಾಯ ಸಂಘ ಮತ್ತು ಒಕ್ಕೂಟಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಾಗೂ ಇತರ ಇಲಾಖೆ ಯೋಜನೆಗಳ ಮಾಹಿತಿಯನ್ನು ಪ್ರತಿ ಮನೆಮನೆಗೆ ತಲುಪಿಸುವ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕೆಂದು ಡಾ.ಬಿ. ಸುಶೀಲಾ ತಿಳಿಸಿದರು.

 ನರೇಗಾ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಗ್ರಾಮಮಟ್ಟದಲ್ಲಿಯೇ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಾಗಿದೆ. ಪ್ರತಿದಿನ ನರೇಗಾದಡಿ ಕೂಲಿ ಮಾಡುವ ಮಹಿಳೆಯರಿಗೆ ಸುಮಾರು 300/- ರೂ. ಗಳ ವೇತನವನ್ನು ನೀಡಲಾಗುತ್ತದೆ. ನವಲಗುಂದ ತಾಲೂಕಿನಲ್ಲಿ ಶೇ.50 ರಷ್ಟು ಮಹಿಳೆಯರಿದ್ದರು, ಶೇ.39 ರಷ್ಟು ಮಹಿಳೆಯರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಮಾನ ವೇತನ ನೀಡುತ್ತಿದ್ದರೂ ಮಹಿಳೆಯರಿಗೆ ಮಾಹಿತಿ ಕೊರತೆಯಿಂದಾಗಿ ತೊಡಗಿಸಿಕೊಳ್ಳುತ್ತಿಲ್ಲ. ಮಹಿಳಾ ಒಕ್ಕೂಟಗಳು ಗ್ರಾಮಪಂಚಾಯತ್ ಸಹಯೋಗದಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಶಕ್ತಿ ತುಂಬಬೇಕೆಂದು ಅವರು ಹೇಳಿದರು. 

 ಸ್ವಚ್ಛತೆ ಭಾರತೀಯ ಸಂಸ್ಕೃತಿಯ ಭಾಗ. ಮಹಿಳೆಯರು ಮನೆ ಹಾಗೂ ಮನೆಯ ಸುತ್ತಲಿನ ಪರಿಸರ ಸ್ವಚ್ಛತೆಗೆ ಆಧ್ಯತೆ ನೀಡುತ್ತಾರೆ. ಸ್ವಚ್ಛತೆ ಮತ್ತು ಸುಂದರ ಪರಿಸರ ಮಹಿಳೆಯರಿಂದ ಮಾತ್ರ ಸಾಧ್ಯವಾಗುತ್ತದೆ. ಸಂಜೀವಿನಿ ಯೋಜನೆಯಡಿ ಆಸಕ್ತ ಮಹಿಳಾ ಸದಸ್ಯರಿಗೆ ಉಚಿತವಾಗಿ ಚಾಲನಾ ತರಬೇತಿ ಮತ್ತು ಲೈಸೆನ್ಸ್ ನೀಡುವ ಕಾರ್ಯಕ್ರಮವಿದೆ. ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಗ್ರಾಮಗಳಲ್ಲಿ ಘನ ತ್ಯಾಜ್ಯ ಸಂಗ್ರಹಕ್ಕೆ ಅವಕಾಶವಿದೆ. ಆಸಕ್ತ ಮಹಿಳಾ ಸದಸ್ಯರಿಗೆ ಅಗತ್ಯವಿರುವ ಕೌಶಲ್ಯ ಹಾಗೂ ಇತರ ತರಬೇತಿಗಳನ್ನು ರುಡ್‍ಸೆಟ್ ಆಶ್ರಯದಲ್ಲಿ ಉಚಿತವಾಗಿ ನೀಡಲಾಗುತ್ತದೆ. ಗ್ರಾಮಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟಗಳು ಕ್ರಿಯಾಶೀಲವಾಗಿದ್ದರೆ ಮಾತ್ರ ಮಹಿಳೆಯರಿಗೆ ಅಗತ್ಯವಿರುವ ಸೌಲಭ್ಯಗಳನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. 

  ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮದ ಘನ ತ್ಯಾಜ್ಯ ಸಂಗ್ರಹವನ್ನು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರೇ ಮಾಡುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸದಸ್ಯರು ಭೇಟಿ ನೀಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂಚಟಗೇರಿ ಗ್ರಾಮದಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕವು ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.   

 ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಿಗೆ ಸಭೆಗಳನ್ನು ನಡೆಸಲು ಕಟ್ಟಡಗಳ ಅವಶ್ಯಕವಿದ್ದಲ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವಂತಹ ಸಮುದಾಯ ಭವನ ಬಳಸಿಕೊಳ್ಳಬಹುದು ಅದು ಇಲ್ಲದಿದ್ದರೆ ಗ್ರಾಮದಲ್ಲಿ ಒಂದು ಸಣ್ಣ ಕೊಠಡಿಯನ್ನು ಬಾಡಿಗೆ ಪಡೆದು ಸಭೆಯನ್ನು ನಡೆಸಬಹುದು. ಒದಗಿಸಿದ ಸಮುದಾಯ ಬಂಡವಾಳವನ್ನು ಸಮಪರ್ಕವಾಗಿ ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಬೆಳೆಯಬೇಕು ಎಂದರು.

  ಗ್ರಾಮ ಪಂಚಾಯತ ಒಕ್ಕೂಟಗಳು ತಮ್ಮಲ್ಲಿಯೆ ಪುಸ್ತಕ ಬರವಣಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದಲ್ಲಿ ಅವರಿಗೆ 2 ವರ್ಷದ ವರೆಗೆ ಜಿಲ್ಲಾ ಪಂಚಾಯತ ವತಿಯಿಂದ ವೇತನ ನೀಡಲಾಗುವುದು. ಒಕ್ಕೂಟಗಳು ಶೇ.12 ಕ್ಕಿಂತ ಹೆಚ್ಚು ಬಡ್ಡಿ ದರದಲ್ಲಿ ಸಾಲವನ್ನು ನೀಡಬಾರದು. ಸಾಲದ  ಹಣ ಮರು ಪಾವತಿಗೆ 12 ರಿಂದ 36 ತಿಂಗಳು ಅವಕಾಶವನ್ನು ನೀಡಬಹುದು. 
 ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಮಹಿಳೆಯರಿಗೆ ಸೂಕ್ತ ತರಬೇತಿಯನ್ನು ನೀಡಲಾಗುವುದು. ತ್ಯಾಜ್ಯ ವಿಲೇವಾರಿ ವಾಹನ ಚಾಲನೆಗೆ ಆಸಕ್ತ 18 ರಿಂದ 40 ವರ್ಷದೊಳಗಿನ ಮಹಿಳೆಯರಿಗೆ ತರಬೇತಿಯನ್ನು ನೀಡಿ ಪರವಾಣಿಗೆ ನೀಡಲಾಗುವುದು. ಕೊಟ್ಟಿರುವ ಅನುದಾನ ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು.

  ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ರೇಖಾ ಡೊಳ್ಳಿನ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳ ಇದ್ದರು. ಕುಂದಗೋಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಕುರಿಯವರ, ಅಳ್ನಾವರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷಕುಮಾರ ತಳಕಲ್ ಸೇರಿದಂತೆ ವಿವಿಧ ಗ್ರಾಮ ಪಂಚಾಯತ ಮಟ್ಟದ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

 ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ ಕಂಠಿ ಕಾರ್ಯಕ್ರಮ ನಿರೂಪಿಸಿದರು. ಗಳಗಿ-ಹುಲಕೊಪ್ಪದ ನೀಲಾಂಬಿಕಾ ಹಿರೇಮಠ ಪ್ರಾರ್ಥಿಸಿದರು. ಕುಮಾರಿ ಹಂಸಾವತಿ ವಂದಿಸಿದರು.

Read These Next

ಉಡುಪಿ: ಮಣೆಗಾರ್ ಮೀರಾನ್ ಸಾಹೇಬರಿಗೆ ರಾಜ್ಯೋತ್ಸವ ಪ್ರಶಸ್ತಿ ವಿತರಣೆ. ಸಿಎಂ ಬೊಮ್ಮಾಯಿ ಅವರಿಂದ ಗೌರವ.

ಗಲ್ಫ್ ರಾಷ್ಟ್ರದಲ್ಲಿದ್ದರೂ ಕೂಡ ಹುಟ್ಟೂರಿನ ಅಭಿಮಾನಕ್ಕೆ ಅನೇಕ ಸಾಮಾಜಿಕ ಸೇವೆಯ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ...

ರಸ್ತೆ,ರೈಲು, ವಾಯು ಮಾರ್ಗ- ಸಮಗ್ರ ಅಭಿವೃದ್ದಿ. ಶಿಕ್ಷಣದಿಂದ ಬದಲಾವಣೆ - ಕೈಗಾರಿಕೆಯಿಂದ ಅಭಿವೃದ್ದಿ ಸಾಧನೆ ಆಗಬೇಕು : ಬಿ‌ ವೈ ರಾಘವೇಂದ್ರ.

ಶಿವಮೊಗ್ಗ : ಶಿಕ್ಷಣದಿಂದ ಬದಲಾವಣೆ ಮತ್ತು ಕೈಗಾರಿಕೆಯಿಂದ ಅಭಿವೃದ್ದಿಯನ್ನು ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಶಿಕ್ಷಣ ನೀತಿ ...

ನಾಗಿರೆಡ್ಡಿ ಗ್ರಾಮದ ಬಳಿ ತ್ವರಿತವಾಗಿ ಗೋಶಾಲೆ ಆರಂಭಿಸಿ: ಜಿಲ್ಲಾಧಿಕಾರಿ ಆರ್ ಲತಾ

ಚಿಕ್ಕಬಳ್ಳಾಪುರ : ಸರ್ಕಾರಿ ಗೋಶಾಲೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆಯಾಗಿರುವ ಜಿಲ್ಲೆಯ ನಾಗಿರೆಡ್ಡಿ ಗ್ರಾಮದ ಬಳಿ ಪ್ರಸ್ತುತ ...

ಈ ಬಾರಿ ಅರ್ಥಪೂರ್ಣ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಿರ್ಧಾರ: ಡಾ. ಕೆ.ಸಿ ನಾರಾಯಣಗೌಡ

ಮಂಡ್ಯ : ಅಕ್ಟೋಬರ್ 9, 10 ಮತ್ತು 11 ರಂದು ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ನಡೆಸಲು ನಿರ್ಧರಿಸಲಾಗಿದ್ದು, ಅರ್ಥಪೂರ್ಣ ದಸರಾ ಆಚರಣೆಗೆ ...

ಜಿಲ್ಲೆಯ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ : ಸಿಇಓ ಪ್ರಿಯಾಂಗ ಎಂ.

ಕಾರವಾರ : ಮುಂದಿನ ಎರಡು ವರ್ಷದೊಳಗಾಗಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ...

ರಸ್ತೆ,ರೈಲು, ವಾಯು ಮಾರ್ಗ- ಸಮಗ್ರ ಅಭಿವೃದ್ದಿ. ಶಿಕ್ಷಣದಿಂದ ಬದಲಾವಣೆ - ಕೈಗಾರಿಕೆಯಿಂದ ಅಭಿವೃದ್ದಿ ಸಾಧನೆ ಆಗಬೇಕು : ಬಿ‌ ವೈ ರಾಘವೇಂದ್ರ.

ಶಿವಮೊಗ್ಗ : ಶಿಕ್ಷಣದಿಂದ ಬದಲಾವಣೆ ಮತ್ತು ಕೈಗಾರಿಕೆಯಿಂದ ಅಭಿವೃದ್ದಿಯನ್ನು ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಶಿಕ್ಷಣ ನೀತಿ ...

ನಾಗಿರೆಡ್ಡಿ ಗ್ರಾಮದ ಬಳಿ ತ್ವರಿತವಾಗಿ ಗೋಶಾಲೆ ಆರಂಭಿಸಿ: ಜಿಲ್ಲಾಧಿಕಾರಿ ಆರ್ ಲತಾ

ಚಿಕ್ಕಬಳ್ಳಾಪುರ : ಸರ್ಕಾರಿ ಗೋಶಾಲೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆಯಾಗಿರುವ ಜಿಲ್ಲೆಯ ನಾಗಿರೆಡ್ಡಿ ಗ್ರಾಮದ ಬಳಿ ಪ್ರಸ್ತುತ ...

ಓವೈಸಿ ಮನೆ ಮೇಲೆ ದಾಳಿ: ಐವರ ಬಂಧನ

ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಅವರ ಇಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದ ಆರೋಪದ ಮೇರೆಗೆ ಹಿಂದೂ ಸೇನಾದ ಐವರನ್ನು ...