ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಕೋರ್ಟ್ ಆದೇಶ ಕೇಳಿ ಕಣ್ಣೀರಿಟ್ಟ ನಟಿ ರಾಗಿಣಿ, ಸಂಜನಾ!

Source: ANI | Published on 12th September 2020, 12:38 AM | State News | Don't Miss |

 

 

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಆರೋಪಕ್ಕೆ ಸಂಬಂಧಿಸಿ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರನ್ನು ನ್ಯಾಯಾಲಯದ ಮತ್ತೆ 3 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಿಸಿಬಿ ವಶದಲ್ಲಿದ್ದ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ 6 ಮಂದಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
45 ನಿಮಿಷಗಳ ಕಾಲ ಆರೋಪಿಗಳ ಪರ ವಾದ-ವಿವಾದ ಆಲಿಸಿದ ನ್ಯಾಯಾಲಯ ಬಳಿಕ ತನ್ನ ಆದೇಶವನ್ನು ನೀಡಿತ್ತು. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಧೀಶರ ಎದುರು ಸಿಸಿಬಿ ಪೋಲಿಸರು ರಾಗಿಣಿ-ಸಂಜನಾ ಸೇರಿದಂತೆ ಆರು ಆರೋಪಿಗಳನ್ನು ಹಾಜರು ಪಡಿಸಲಾಗಿತ್ತು. 
ತೀರ್ಪಿಗೂ ಮುನ್ನ ವಿಡಿಯೋ ಕಾನ್ಫರೆನ್ಸ್ ಕಟ್ ಆಗಿದ್ದರಿಂದ ಇನ್ಸ್ ಪೆಕ್ಟರ್ ಅಂಜುಮಾಲ ಅವರು ಆದೇಶದ ಬಗ್ಗೆ ಮಾಹಿತಿ ನೀಡಿದ್ದು ಇದನ್ನು ಕೇಳಿ ರಾಗಿಣಿ ಮತ್ತು ಸಂಜನಾ ಕಣ್ಣೀರು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸೆಪ್ಟೆಂಬರ್ 14ರವರೆಗೆ ಆರೋಪಿಗಳಿಗೆ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ.

​​​​​

Read These Next

ನಾಳೆ‌ ಸೋಮವಾರ ಸಾರಿಗೆ ಸಂಚಾರ ಎಂದಿನಂತೆ. ಬಸ್ ಮತ್ತು ಸರ್ಕಾರಿ ಆಸ್ತಿ‌ಪಾಸ್ತಿ ಹಾನಿ ಮಾಡಿದರೆ ಎಚ್ಚರಿಕೆ : ಲಕ್ಷ್ಮಣ ಸವದಿ

ಬೆಂಗಳೂರು:  ನಾಳೆ ಸೋಮವಾರದಂದು ರಾಜ್ಯದಲ್ಲಿ ಸಾರಿಗೆ ಸಂಚಾರ ಎಂದಿನಂತೆ ನಡೆಯಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಾಳೆ‌ ಸೋಮವಾರ ಸಾರಿಗೆ ಸಂಚಾರ ಎಂದಿನಂತೆ. ಬಸ್ ಮತ್ತು ಸರ್ಕಾರಿ ಆಸ್ತಿ‌ಪಾಸ್ತಿ ಹಾನಿ ಮಾಡಿದರೆ ಎಚ್ಚರಿಕೆ : ಲಕ್ಷ್ಮಣ ಸವದಿ

ಬೆಂಗಳೂರು:  ನಾಳೆ ಸೋಮವಾರದಂದು ರಾಜ್ಯದಲ್ಲಿ ಸಾರಿಗೆ ಸಂಚಾರ ಎಂದಿನಂತೆ ನಡೆಯಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಹುಬ್ಬಳ್ಳಿ; ಮಾಜಿ ಸಿಎಂ ಶೆಟ್ಟರ್ ಫೋಟೊ ರಸ್ತೆಗುಂಡಿಗೆ ಇಟ್ಟು ವಿನೋತನ ರೀತಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ: ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ನಗರದ ವಿದ್ಯಾವನ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಅವರ ಭಾವಚಿತ್ರವನ್ನು ...