ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ಸಂಸ್ಕಾರ ಸುಧಾ ಕಾರ್ಯಕ್ರಮ

Source: sonews | By Staff Correspondent | Published on 24th August 2019, 6:20 PM | Coastal News |

ಭಟ್ಕಳ: ಮನವೆಲ್ಲಿ ಕೇಂದ್ರಕೃತವಾಗಿರುವುದೋ ಅಲ್ಲಿ ಜ್ಞಾನ ದೊರೆತು ಗೌರವ ಸಿಗುತ್ತದೆ ಎಂದು ವಿದ್ವಾನ ನೀಲಕಂಠ ಯಾಜಿ ಹೇಳಿದರು. 

ಅವರು ಇಲ್ಲಿನ ಸಾಗರ ರಸ್ತೆಯಲ್ಲಿನ ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ  ಶನಿವಾರ ಆಯೋಜಿಸಿದ್ದ ಸಂಸ್ಕಾರ ಸುಧಾ ಎನ್ನುವ ನೈತಿಕ ಮೌಲ್ಯಗಳ ಶಿಕ್ಷಣ ಮಾಲಿಕೆಯ ಪ್ರಥಮ ಸಂಚಿಕೆಯಾದ “ಮನವೆಲ್ಲೋ, ನಮನವಲ್ಲಿಗೆ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡಿದರು.  

ವಿದ್ಯಾರ್ಥಿಗಳು ವಿನಯವನ್ನು ಬೆಳೆಸಿಕೊಂಡು ವಿದ್ಯಾರ್ಜನೆ ಮಾಡಬೇಕಾಗಿದೆ ಮತ್ತು ವಿದ್ಯಾರ್ಥಿ ತನ್ನ ವಿದ್ಯಾರ್ಜನೆ ಕಾಲದಲ್ಲಿ ಆತ್ಮ ಸ್ಥೈರ್ಯ, ಆತ್ಮ ಸಂಯಮ ಮತ್ತು ಗೌರವ ಬೆಳೆಸಿ ಸಂಸ್ಕಾರವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.

ಪ್ರಾಂಶುಪಾಲ ವಿರೇಂದ್ರ ವಿ. ಶ್ಯಾನಭಾಗ, ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್‍ನ  ಪ್ರಾಂಶುಪಾಲರಾದ ಮಮತಾ ಕೆ. ಎಸ್. ಉಪಸ್ಥಿತರಿದ್ದರು. ಉಪನ್ಯಾಸಕ ಶಿವಾನಂದ ಭಟ್ ನಿರೂಪಿಸಿದರು. 

Read These Next

ಆರ್ಯ ವೈಶ್ಯ ಜನಾಂಗದವರಿಗೆ “ನಮೂನೆ-ಜಿ” ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಭ್ಯ

ಕಾರವಾರ: ಕರ್ನಾಟಕ ರಾಜ್ಯ ಸರಕಾರವು ಡಿಸೆಂಬರ್ 16 ರಂದು, ಇನ್ನು ಮುಂದೆ ಆರ್ಯ ವೈಶ್ಯ ಜನಾಂಗದವರಿಗೆ ಶಾಲಾ ಪ್ರವೇಶಕ್ಕೆ ಮಾತ್ರವಲ್ಲದೆ ...