ನೃತ್ಯವಿದೂಷಿ ನಯನಾ ಪ್ರಸನ್ನ ಗೆ ಸಾಧಕ ಶ್ರೀ ಪ್ರಶಸ್ತಿ

Source: sonews | By Staff Correspondent | Published on 20th November 2019, 8:39 PM | Coastal News | Don't Miss |

ಭಟ್ಕಳ: ಇಲ್ಲಿನ ಝೇಂಕಾರ ಮೆಲೋಡೀಸ್ ಸಂಸ್ಥೆಯ ನೃತ್ಯ ಶಿಕ್ಷಕಿ ನೃತ್ಯವಿದೂಷಿ ನಯನಾ ಪ್ರಸನ್ನರಿಗೆ ಜೆಸಿಐ ವತಿಯಿಂದ ‘ಸಾಧಕ ಶ್ರೀ2019 ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಜೆಸಿಐ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಲಲಿತಾಕಲಾ ಕ್ಷೇತ್ರದಲ್ಲಿ ನಯನಾ ಪಸನ್ನ ಕಳೆದ 20 ವರ್ಷಗಳಿಂದ ನೃತ್ಯ, ಸಂಗೀತ ಹಾಗೂ ಚಿತ್ರಕಲಾ ಕ್ಷೇತ್ರವನ್ನು ಬೆಳೆಸಲು ಮಾಡಿದ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

ಕೂಚಿಪುಡಿ ನ್ರತ್ಯವನ್ನು ಕರಗತ ಮಾಡಿಕೊಂಡಿರುವ ನಯನಾ ಭರತನಾಟ್ಯದಲ್ಲಿ ವಿದ್ವತ್ ಪದವಿಯೊಂದಿಗೆ ಕಥಕ್ ನಲ್ಲಿ ಡಿಪೆÇ್ಲಮಾ ಪದವಿ ಪಡೆದಿರುತ್ತಾರೆ. ಹಿಂದುಸ್ತಾನಿ ಸಂಗೀತದಲ್ಲಿ  ಮೂರು ವರ್ಷಗಳ ಬಿ- ಮ್ಯೂಸಿಕ್  ಮಾಡಿ ಜೊತೆಗೆ  ಕರ್ನಾಟಕ ಸಂಗೀತವನ್ನೂ ಮೈಗೂಡಿಸಿಕೊಂಡು ಭರತನಾಟ್ಯಕ್ಕೆ ಸ್ವತಃ ನಟ್ವಾಂಗದೊಂದಿಗೆ ನುಡಿಸಿ ಅವರೇ ಹಾಡುತಿದ್ದಾರೆ. ಇವರ ಸಾಧನೆಗೆ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಪುರಸ್ಕರಿಸಿರುವದನ್ನು ಸ್ಮರಿಸಬಹುದು.

ಈ ಸಂದರ್ಭದಲ್ಲಿ ಜೆಸಿಐ ಅಬ್ದುಲ್ ಜಬ್ಬಾರ್, ಶ್ರೀನಾಥ್ ಪೈ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...