ಶ್ರೀ ಜಟ್ಗೇಶ್ವರ ಸ್ಪೋಟ್ರ್ಸ ಕ್ಲಬ್ ಸಬಾತಿ,ಹಾಗೂ ವಿವಿಧ ಸಂಘಟನೆ ಸಂಯುಕ್ತಾಶ್ರಯದಲ್ಲಿ ನಡೆದ ಸಭಾತಿ ಉತ್ಸವ

Source: S.O. News Service | By MV Bhatkal | Published on 18th April 2021, 6:51 PM | Coastal News | Don't Miss |

ಭಟ್ಕಳ: ಶ್ರೀ ಜಟ್ಗೇಶ್ವರ ಜೀರ್ಣೋದ್ಧಾರ ಸೇವಾ ಸಮಿತಿ ಹಾಗೂ ಶ್ರೀ ಜಟ್ಗೇಶ್ವರ ಸ್ಪೋಟ್ರ್ಸ ಕ್ಲಬ್ ಸಬಾತಿ-ತೆರ್ನಮಕ್ಕಿ ಇವುಗಳ ಸಂಯುಕ್ತಾಶ್ರಯದಲ್ಲಿ ಜಟ್ಗೇಶ್ವರ ಕ್ರೀಡಾಂಗಣ ಸಬಾತಿ-ತೆರ್ನಮಕ್ಕಿ ಇಲ್ಲಿ ಸಭಾತಿ ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ  ಧಾರ್ಮಿಕ ಕಾರ್ಯಕ್ರಮ, ಭಜನೆ ಹಾಗೂ ಕೋಲಾಟ ಕಾರ್ಯಕ್ರಮವು ಅತ್ಯಂತ ಯಶಸ್ವೀಯಾಗಿ ನಡೆಯಿತು. 

ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಧಾರ್ಮಿಕ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಗ್ರಾಮದ ಸ್ವಾಸ್ಥ್ಯ ಕಾಪಾಡುವಲ್ಲಿ ಸಹಕರಿಸಿದಂತಾಗುತ್ತದೆ. ಸಬಾತಿ-ತೆರ್ನಮಕ್ಕಿಯಲ್ಲಿ ಸದಾ ಕಾಲ ಯುವ ಸಮೂಹ ಚಟುವಟಿಕೆಯಿಂದ ಇರುತ್ತಿದ್ದು ಅವರ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಇದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮಾ ನಾಯ್ಕ ವಹಿಸಿದ್ದರು. 

ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ ನಾಯ್ಕ, ಗ್ರಾ.ಪಂ.ಸದಸ್ಯ ಭಾಸ್ಕರ ನಾಯ್ಕ, ಸುನಂದಾ ಶೆಟ್ಟಿ, ಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ನಾಯ್ಕ, ಜಟ್ಗೇಶ್ವರ ಸ್ಪೋಟ್ರ್ಸ ಕ್ಲಬ್ ಅಧ್ಯಕ್ಷ ನಾಗೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 

ಕ್ರೀಡಾ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗಾಗಿ ಸಂಗೀತ ಕುರ್ಚಿ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಪುರಷರಿಗಾಗಿ ಹೊನಲು ಬೆಳಕಿನ ವಾಲಿಬಾಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...