ಶಬರಿಮಲೆಯಲ್ಲಿ ಮಹಿಳೆಯರಿಬ್ಬರಿಂದ ಐತಿಹಾಸಿಕ ಹೆಜ್ಜೆ!  

Source: S.O. News Service | By Manju Naik | Published on 19th October 2018, 11:44 AM | National News |

ತಿರುವನಂತಪುರಂ: ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಇಬ್ಬರು ಮಹಿಳೆಯರು ಇಂದು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದಾರೆ.
ಸುಮಾರು 200 ಪೊಲೀಸರ ಸರ್ಪಗಾವಲಿನಲ್ಲಿ ಕೊಚ್ಚಿ ಮೂಲದ ಇಬ್ಬರು ಮಹಿಳೆಯರು ದೇಗುಲದತ್ತ ಹೆಜ್ಜೆ ಹಾಕಿದ್ದಾರೆ. ಪೊಲೀಸರಂತೆ ಹೆಲ್ಮೆಟ್ ಹಾಗೂ ಸಮವಸ್ತ್ರ ಧರಿಸಿ ಭಾರೀ ಸೆಕ್ಯೂರಿಟಿಯ ಮೂಲಕ ದೇವಾಲಯದತ್ತ ತೆರಳಿದ್ದಾರೆ.
ಸದ್ಯ ಮಹಿಳೆಯರ ದೇಗುಲ ಪ್ರವೇಶ ಯತ್ನದ ಬೆನ್ನಲ್ಲೇ ಅಯ್ಯಪ್ಪ ಭಕ್ತರ ಆಕ್ರೋಶ ಭುಗಿಲೆದ್ದಿದೆ. 
ಸೆ.28ರಂದು 10ರಿಂದ-50 ವರ್ಷದವರೆಗಿನ ಎಲ್ಲರೂ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿ ಅಯ್ಯಪ್ಪನ ದರ್ಸನ ಪಡೆಯಬಹುದೆಂಬ ಮಹತ್ವದ ತೀರ್ಪು ನೀಡಿತ್ತು. ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆಯೇ ಎಲ್ಲಾ ಕಡೆಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ಪ್ರತಿಭಟನೆಗಳ ಕಾವು ಏರಿದ್ದೂ ಕೆಲವೆಡೆ ಹಿಂಸಾಚಾರಗಳು ನಡೆದಿತ್ತು.

Read These Next

ಅಸ್ಸಾಂನಲ್ಲಿ ಭಾರೀ ಮಳೆ: ಅಣೆಕಟ್ಟು ಒಡೆದು ಗ್ರಾಮಗಳು ಜಲಾವೃತ; ಬ್ರಹ್ಮಪುತ್ರ ನದಿ ನೀರಿನ ಮಟ್ಟದಲ್ಲಿ ಏರಿಕೆ

ಅಸ್ಸಾಂನಲ್ಲಿ ಭಾರೀ ಮಳೆ: ಅಣೆಕಟ್ಟು ಒಡೆದು ಗ್ರಾಮಗಳು ಜಲಾವೃತ; ಬ್ರಹ್ಮಪುತ್ರ ನದಿ ನೀರಿನ ಮಟ್ಟದಲ್ಲಿ ಏರಿಕೆ

ರೋಗಿ ಮನೆ ಬಳಿ ಚಿಕಿತ್ಸೆ ಕಲ್ಪಿಸುವ ‘ಧನ್ವಂತರಿ ರಥ್’ ಯೋಜನೆ ದೇಶಾದ್ಯಂತ ಜಾರಿಗೊಳಿಸಬೇಕು: ಪ್ರಧಾನಿ ಮೋದಿ

ರೋಗಿ ಮನೆ ಬಳಿ ಚಿಕಿತ್ಸೆ ಕಲ್ಪಿಸುವ ‘ಧನ್ವಂತರಿ ರಥ್’ ಯೋಜನೆ ದೇಶಾದ್ಯಂತ ಜಾರಿಗೊಳಿಸಬೇಕು: ಪ್ರಧಾನಿ ಮೋದಿ