ಉಕ್ರೇನ್ ಮೇಲೆ ರಶ್ಯ ಆಕ್ರಮಣ; ಖಾರ್ಕಿವ್‌ನಲ್ಲಿ ಭೀಕರ ರಾಕೆಟ್ ದಾಳಿ ಭಾರೀ ಸಾವು-ನೋವು

Source: Vb | By I.G. Bhatkali | Published on 1st March 2022, 12:03 PM | Global News |

ಕೀವ್: ರಶ್ಯನ್ ಪಡೆಗಳು ಸೋಮವಾರ ಬೆಳಗ್ಗೆ ದೇಶದ ಎರಡನೇ ಅತಿ ದೊಡ್ಡ ನಗರವಾಗಿರುವ ಖಾರ್ಕಿವ್ ಮೇಲೆ ನಡೆಸಿದ ರಾಕೆಟ್ ದಾಳಿಗಳಲ್ಲಿ ಡಝನ್‌ಗಟ್ಟಲೆ ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯದ ಸಲಹೆಗಾರ ಅಂಟೋನ್ ಹೆರಾಂಕೊ ಅವರು ಹೇಳಿದ್ದಾರೆ. ಬೆಲಾರುಸ್ ಗಡಿಯಲ್ಲಿ ಉಕ್ರೇನ್ ಮತ್ತು ರಷ್ಯ ನಡುವೆ ಮಾತುಕತೆಗಳು ಆರಂಭಗೊಂಡಿದ್ದಾಗಲೇ ಈ ದಾಳಿಗಳು ನಡೆದಿವೆ.

ತಕಣ ಕದನ ವಿರಾಮ ಮತ್ತು ರಷ್ಯದ ಪಡೆಗಳು ಉಕ್ರೇನ್‌ನಿಂದ ನಿರ್ಗಮಿಸಬೇಕು ಎನ್ನುವುದು ಮಾತುಕತೆಗಳಲ್ಲಿ ತನ್ನ ಮುಖ್ಯ ಬೇಡಿಕೆಗಳಾಗಿವೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯು ಇದಕ್ಕೂ ಮೊದಲು ತಿಳಿಸಿತ್ತು. ಈ ನಡುವೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿ ಮಿಷೆಲ್ ಬ್ಯಾಚೆಲೆಟ್ ಅವರು, ರದ ಆಕ್ರಮಣ ಆರಂಭಗೊಂಡಾಗಿನಿಂದ ಉಕ್ರೇನ್‌ನಲ್ಲಿ ಏಳು ಮಕ್ಕಳು ಸೇರಿದಂತೆ ಕನಿಷ್ಠ 102 ನಾಗರಿಕರು ಮೃತಪಟ್ಟಿದ್ದಾರೆ ಮತ್ತು 304 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. 8ನೇ ಪುಟಕ್ಕೆ
ಅಮೆರಿಕದ ಟ್ರೆಝರಿ ಇಲಾಖೆಯು ರಷ್ಯದ ಸೆಂಟ್ರಲ್ ಬ್ಯಾಂಕ್ ಆಸ್ತಿಗಳ ಸ್ತಂಭನವನ್ನು ಘೋಷಿಸಿದೆ.

ಬೆಲಾರುಸ್ ಗಡಿಯಲ್ಲಿ ರಶ್ಯದ ಜೊತೆಗೆ ಮಾತುಕತೆಗಳಿಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆಂ ಅವರು, ಮಾತುಕತೆಯು ದ್ವೇಷವನ್ನು ಅಂತಿಮಗೊಳಿಸುತ್ತದೆ ಎಂಬ ಆಶಯವನ್ನು ತಾನು ಹೊಂದಿಲ್ಲ ಎಂದು ಹೇಳಿದರು.

ಅಮೆರಿಕದಲ್ಲಿರುವ ರಶ್ಯನ್ ಸೆಂಟ್ರಲ್ ಬ್ಯಾಂಕ್‌ನ ಆಸ್ತಿಗಳನ್ನು ಸ್ತಂಭನಗೊಳಿಸುವುದಾಗಿ ಮತ್ತು ರಶ್ಯದ ನೇರ ಹೂಡಿಕೆ ನಿಧಿಯ ಮೇಲೆ ನಿರ್ಬಂಧ ಹೇರುವುದಾಗಿ ಟೈಝರಿ ಇಲಾಖೆ ಪ್ರಕಟಿಸಿದೆ. ಪಾಶ್ಚಾತ್ಯ ದೇಶಗಳ ನಿರ್ಬಂಧಗಳು ರಶ್ಯದ ಆರ್ಥಿಕತೆಯನ್ನು ತಲ್ಲಣಗೊಳಿಸಿರುವ ಪರಿಣಾಮ ಸೋಮವಾರ ಡಾಲರ್‌ನೆದುರು ರೂಬಲ್ ಮೌಲ್ಯ ಶೇ.25ಕ್ಕೂ ಅಧಿಕ ಕುಸಿದಿದೆ.

ಉಕ್ರೇನ್‌ನಲ್ಲಿರುವ ಹೆಚ್ಚಿನ ರಶ್ಯನ್ ಪದಾತಿ ಪಡೆಗಳು ರಾಜಧಾನಿ ಕೀವ್‌ನ ಉತ್ತರಕ್ಕೆ 18 ಕಿ.ಮೀ.ದೂರದಲ್ಲಿ ಜಮಾವಣೆಗೊಂಡಿವೆ, ಆದರೆ ಉಕ್ರೇನ್ ಸೈನಿಕರು ಮತ್ತು ನಾಗರಿಕ ಸ್ವಯಂಸೇವಕರ ತೀವ್ರ ಪ್ರತಿರೋಧದಿಂದಾಗಿ ಅವುಗಳ ಮುನ್ನಡೆ ನಿಧಾನಗೊಂಡಿದೆ ಎಂದು ಬ್ರಿಟಿಷ್ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

ಕದನ ವಿರಾಮಕ್ಕೆ ವಿಶ್ವಸಂಸ್ಥೆಯ ಮಹಾ ಸಭೆ ಕರೆ: 

ವಿಶ್ವಸಂಸ್ಥೆ: ಉಕ್ರೇನ್ ಹಾಗೂ ರಶ್ಯ ಕೂಡಲೇ ಕದನ ವಿರಾಮ ಘೋಷಿಸುವಂತೆ, ಗರಿಷ್ಠ ಸಂಯಮ ವಹಿಸುವಂತೆ ಹಾಗೂ ಮಾತುಕತೆ ಆರಂಭಿಸುವಂತೆ ವಿಶ್ವಸಂಸ್ಥೆಯ ಮಹಾಸಭೆ ತುರ್ತು ವಿಶೇಷ ಅಧಿವೇಶನದಲ್ಲಿ ಕರೆ ನೀಡಿದೆ.
ಹೆಚ್ಚುತ್ತಿರುವ ಹಿಂಸಾಚಾರವು ನಾಗರಿಕರ ಸಾವಿಗೆ ಕಾರಣವಾಗುತ್ತದೆ. ಸಾಕು. ಯೋಧರು ಬ್ಯಾರಕ್‌ಗೆ ಹಿಂದಿರುಗುವ ಅಗತ್ಯ ಇದೆ, ನಾಗರಿಕರನ್ನು ರಕ್ಷಿಸಬೇಕು ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದಶಿ ಆ್ಯಂಟೋನಿಯೊ ಗುಟೆರಸ್ ಹೇಳಿದ್ದಾರೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...