ರಶ್ಯ ದಾಳಿಯಲ್ಲಿ 3 ಮಕ್ಕಳ ಸಹಿತ 198 ಪ್ರಜೆಗಳ ಸಾವು: ಉಕ್ರೇನ್

Source: Vb | By I.G. Bhatkali | Published on 27th February 2022, 7:29 AM | Global News |

ಕೀವ್: ಇದುವರೆಗೆ ರಶ್ಯದ ದಾಳಿಯಲ್ಲಿ 3 ಮಕ್ಕಳ ಸಹಿತ 198 ಪ್ರಜೆಗಳು ಮೃತಪಟ್ಟಿರುವುದಾಗಿ ಉಕ್ರೇನ್‌ ಆರೋಗ್ಯ ಸಚಿವ ವಿಕ್ಟರ್ ಲ್ಯತೊಕೊ ಹೇಳಿದ್ದಾರೆ.

ಇದುವರೆಗಿನ ಲಭ್ಯ ಮಾಹಿತಿಯಂತೆ ದುರದೃಷ್ಟವಶಾತ್, ಆಕ್ರಮಣಕಾರರ ಕೈಯಲ್ಲಿ 3 ಮಕ್ಕಳ ಸಹಿತ 198 ಪ್ರಜೆಗಳನ್ನು ನಾವು

ಕಳೆದುಕೊಂಡಿದ್ದೇವೆ. 33 ಮಕ್ಕಳ ಸಹಿತ 1,115 ಮಂದಿ ಗಾಯಗೊಂಡಿದ್ದಾರೆ ಎಂದವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಮಧ್ಯೆ, ರಶ್ಯದ ಕ್ಷಿಪಣಿಯೊಂದು ರಾಜಧಾನಿ ಕೀವ್‌ನಲ್ಲಿನ ಬಹುಮಹಡಿ ಕಟ್ಟಡವೊಂದಕ್ಕೆ ಅಪ್ಪಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂತ್ರಸ್ತರ ಬಗ್ಗೆ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ದಾಳಿ ನಡೆದ ಕಟ್ಟಡದಲ್ಲಿದ್ದವರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ. ಕಟ್ಟ ಡದ ಒಂದು ಪಾರ್ಶ್ವ ಕ್ಷಿಪಣಿ ದಾಳಿಗೆ ಜಖಂಗೊಂಡು ಕುಸಿದು ಬಿದ್ದಿರುವ ಫೋಟೊವನ್ನು ಕೀವ್‌ನ ಮೇಯರ್ ವಿಟಾಲಿ ಕ್ಲಿಶೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೀವ್‌ನಲ್ಲಿ ರಶ್ಯದ ವಿಧ್ವಂಸಕ ಗುಂಪುಗಳಿಂದಾಗಿ ಸಮಸ್ಯೆಯಾಗುತ್ತಿದೆ. ರಾಜಧಾನಿಯಲ್ಲಿ ಇದುವರೆಗೆ ರಷ್ಯದ ಪಡೆಗಳಿಲ್ಲ, ಆದರೆ ಹಲವು ದಿಕ್ಕುಗಳಿಂದ ದಾಳಿ ನಡೆಸಿ ರಾಜಧಾನಿಯೊಳಗೆ ನುಗ್ಗುವ ಪ್ರಯತ್ನದಲ್ಲಿದ್ದಾರೆ ಎಂದವರು ಹೇಳಿದ್ದಾರೆ.

ನಮ್ಮ ಭವ್ಯ, ಶಾಂತಿಯುತ ನಗರ ಕೀವ್ ರಷ್ಯದ ಸೇನೆ, ಕ್ಷಿಪಣಿ ದಾಳಿಯನ್ನು ಮತ್ತೊಂದು ರಾತ್ರಿ ಎದುರಿಸಿ ಉಳಿದುಕೊಂಡಿದೆ. ಒಂದು ಕ್ಷಿಪಣಿಯು ಕೀವ್‌ನಲ್ಲಿನ ಜನವಸತಿ ಕಟ್ಟಡಕ್ಕೆ ಬಡಿದಿದೆ ಎಂದು ಉಕ್ರೇನ್‌ನ ವಿದೇಶ ಸಚಿವ ಡಿಮಿಟ್ರೊ ಕುಲೆಬಾ, ಕ್ಷಿಪಣಿ ದಾಳಿಯಿಂದ ಹಾನಿಗೊಂಡ ಕಟ್ಟಡದ ಫೋಟೊ ಸಹಿತ ಟ್ವಿಟ್ ಮಾಡಿದ್ದಾರೆ. ರಶ್ಯದ ಯುದ್ಧಾಪರಾಧಿಗಳನ್ನು ತಡೆಯಬೇಕು. ರಶ್ಯವನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ, ರಾಯಭಾರಿಗಳನ್ನು ಉಚ್ಚಾಟಿಸಿ, ತೈಲ ನಿರ್ಬಂಧ ಜಾರಿಗೊಳಿಸಿ ಅದರ ಆರ್ಥಿಕತೆಯನ್ನು ಹಾಳುಗೆಡವುವಂತೆ ಅವರು ಅಂತರ್ ರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...