ಭಟ್ಕಳದಲ್ಲಿ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆ

Source: S O News | By MV Bhatkal | Published on 2nd October 2024, 6:22 PM | Coastal News | Don't Miss |

ಭಟ್ಕಳ: ತಾಲೂಕಿನ ಬಂದರ ರಸ್ತೆಯ ಡೊಂಗರ್ ಪಳ್ಳಿ ಸಮೀಪ ಅಪರಿಚಿತ ಪುರುಷನ ಅಸ್ಥಿಪಂಜರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ, ನಾಗರಿಕರ ಆತಂಕ ಹೆಚ್ಚಿಸಿದೆ.

ಮಖ್ದೂಮ್‌ ಕಾಲೋನಿ ಕುರಿಗಾಹಿಯೊಬ್ಬನು ಮೇಕೆ ಮೇಯಿಸುತ್ತಿದ್ದಾಗ,  ಈ ದೃಶ್ಯ ಕಂಡುಬಂದಿದೆ. ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದಾಗ, ಭಟ್ಕಳ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸುಮಾರು ಒಂದೆರಡು ತಿಂಗಳ ಹಿಂದೆ ವ್ಯಕ್ತಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ನೆಲದಿಂದ ಸುಮಾರು 10 ಅಡಿ ಎತ್ತರದಲ್ಲಿ ನೈಲಾನ್ ಹಗ್ಗದಿಂದ ಶವವು ಮರಕ್ಕೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ, ದೇಹದಿಂದ ತಲೆ ಬೇರ್ಪಟ್ಟು ನೆಲಕ್ಕೆ ಬಿದ್ದಿದೆ. ಶವದ ಪಕ್ಕದಲ್ಲಿ ಚಪ್ಪಲಿ ಪತ್ತೆಯಾದ ಕಾರಣ, ಇದು ಪುರುಷನ ಶವವೆಂದು ಗುರುತಿಸಲಾಗಿದೆ.

ಮುಖ್ಯ ರಸ್ತೆಯ ಬಳಿಯಲ್ಲಿ ಘಟನೆ ನಡೆದರೂ, ಇಷ್ಟು ದಿನ ಬೆಳಕಿಗೆ ಬರದಿರುವುದು ಅಚ್ಚರಿಯ ಸಂಗತಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ನೂರಾರು ಜನರು ಧಾವಿಸಿ ದೃಶ್ಯ ವೀಕ್ಷಿಸುತ್ತಿದ್ದರು.

ಪೊಲೀಸರು ಅಸ್ಥಿಪಂಜರನ್ನು ಬಟ್ಟೆಯಲ್ಲಿ ಹೊತ್ತೊಯ್ದು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಭಟ್ಕಳ ನಗರ ಠಾಣೆಯ ಪಿ.ಎಸೈ.ಐ. ನವೀನ್ ನಾಯ್ಕ, ಪಿ.ಎಸ್.ಐ. ಸೋಮನಾಥ ರಾಥೋಡ, ಎ.ಎಸ್.ಐ. ರವಿ ನಾಯ್ಕ ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ.

Read These Next

ಉದ್ಯಮಿ ಬಿ.ಎಂ. ಮುಮ್ತಾಝ್ ಅಲಿ ನಾಪತ್ತೆ: ಕೂಳೂರು ಸೇತುವೆ ಮೇಲೆ ಕಾರು ಪತ್ತೆ, ನದಿಯಲ್ಲಿ ಶೋಧ ಕಾರ್ಯ

ಪಣಂಬೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ, ಉದ್ಯಮಿ ಹಾಗೂ ಸಾಮಾಜಿಕ ಧಾರ್ಮಿಕ ನಾಯಕ ಬಿ.ಎಂ. ಮುಮ್ತಾಝ್ ಅಲಿ ರವಿವಾರ ಬೆಳಗ್ಗಿನ ...

ಕಾರವಾರ: ಗ್ರಾಮ ಪಂಚಾಯತಿಗಳಲ್ಲಿ "ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ" ಅಭಿಯಾನ : ಈಶ್ವರ ಕಾಂದೂ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉತ್ತರ ಕನ್ನಡ ಜಿಲ್ಲೆಯ 12 ತಾಲ್ಲೂಕುಗಳ ಎಲ್ಲ ಗ್ರಾಮ ...

ಭಟ್ಕಳ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ 36 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಶಿರ್ಸಿ ತಾಲೂಕಿನ ಮಾರಿಕಾಂಬಾ  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ...