ಭಟ್ಕಳದಲ್ಲಿ ಮನೆ ದರೋಡೆ; ಚಿನ್ನಾಭರಣದೊಂದಿಗೆ ಲಾಕರ್ ಎತ್ತಿ ನಡೆದ ದರೋಡೆಕೋರರು

Source: sonews | By Staff Correspondent | Published on 28th January 2018, 12:21 AM | Coastal News | NewsVoir |

ಭಟ್ಕಳ: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯ ರಹೆಮತಾಬಾದ್ ಎಂಬ ಪ್ರದೇಶದ ಮನೆಯೊಂದರಲ್ಲಿ ಶನಿವಾರ ರಾತ್ರಿ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು ದರೋಡೆಕೋರರು ಮನೆಯಲ್ಲಿದ್ದ ಲಾಕರ್ ಸಮೇತ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. 

ಮೊಹಸಿನ್ ಬರ್ಮಾವರ್ ಎಂಬುವರರಿಗೆ ಸೇರಿದ ಮನೆಯಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ರಾತ್ರಿ 9ಗಂಟೆ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ದರೋಡೆಕೋರರು ಮನೆಯು ಮುಂಬಾಗಿಲನ್ನು ಸಲಾಕೆಯಿಂದ ಮೀಟಿ ಬಾಗಿಲನ್ನು ಮುರಿದು ಒಳಹೊಕ್ಕಿದ್ದು ಅಲಮೇರಾ ಹಾಗೂ ಇತರ ವಸ್ತುಗಳನ್ನು ತಡಕಾಡಿದ್ದಾರೆ. ಅಲ್ಲಿ ಅವರಿಗೆ ಕೇವಲ ಬಟ್ಟೆಗಳನ್ನು ಹೊರತು ಪಡಿಸಿ ಬೇರೆ ಬೆಲೆಬಾಳು ವಸ್ತುಗಳು ಸಿಗದೇ ಇದ್ದಾಗ ಮನೆಯಲ್ಲಿದ್ದ ಲಾಕರ್ ನ್ನು ಎತ್ತಿ ಪರಾರಿಯಾಗಿದ್ದಾರೆ. ಲಾಕರ್ ನಲ್ಲಿ 100ಗ್ರಾಂ. ಚಿನ್ನದ ಒಡವೆ, ಹಾಗೂ ಒಂದು ಪಾಸ್ ಪೋರ್ಟ್ ಪ್ರತಿಯಿತ್ತು ಎಂದು ಮನೆಯ ಸದಸ್ಯರು ತಿಳಿಸಿದ್ದಾರೆ. 

ಕುಟುಂಬದ ಸದಸ್ಯರೊಬ್ಬರ ಚಿಕಿತ್ಸೆಗಾಗಿ ಶುಕ್ರವಾರದಂದು ಮನೆಗೆ ಬಾಗಿಲು ಹಾಕಿ ಮಂಗಳೂರಿಗೆ ಹೋಗಿದ್ದ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ದರೋಡೆಕೋರರು ಶುಕ್ರವಾರ ರಾತ್ರಿ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. 

ಕಳೆದ ಒಂದು ವರ್ಷದಲ್ಲಿ ಈ ಪ್ರದೇಶದಲ್ಲಿ ಇದು 25ನೇ ಕಳುವು ಪ್ರಕರಣ ಎಂದು ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಭಟ್ಕಳ ನಗರ ಪ್ರದೇಶದಲ್ಲಿ ಅತಿಹೆಚ್ಚು ಕಳುವು ಪ್ರಕರಣಗಳು ನಡೆಯುತ್ತಿದ್ದು ಮನೆಗೆ ಬೀಗ ಹಾಕಿದ ಸಂದರ್ಭವನ್ನು ಉಪಯೋಗಿಸಿಕೊಂಡು ಈ ಕೃತ್ಯವನ್ನು ಮಾಡಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೆ ಬಂದರ್ ರಸ್ತೆಯಲ್ಲಿ ಹಾಡುಹಗಲೇ ಮನೆಯಲ್ಲಿದ್ದ 25ಸಾ. ರೂ ನಗದನ್ನು ದೋಚಿ ಕಳ್ಳರು ಪರಾರಿಯಾಗಿದ್ದರು. ಹಲವು ಕಳುವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗದೆ ಇರುವುದು, ಕೆಲವೊಂದು ದಾಖಲಾದರೂ ಕಳ್ಳರ ಪತ್ತೆಯಾಗದಿರುವುದು ಸಾರ್ವಜನಿಕರು ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ. 

Read These Next

ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯವ ನೀರು ಪೂರೈಸಲು ಅಗತ್ಯ ಕ್ರಮ : ಸಚಿವ ಮಧು ಎಸ್ ಬಂಗಾರಪ್ಪ

ಶಿವಮೊಗ್ಗ : ಪ್ರಸಕ್ತ ಸಾಲಿನ ಮುಂಗಾರು ವಿಫಲವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ...