ಕಂಟೇನ್ಮೆಂಟ್ ವಲಯಗಳ ಕುರಿತ ಪರಿಷ್ಕೃತ ಮಾರ್ಗಸೂಚಿ

Source: SO News | By Laxmi Tanaya | Published on 20th January 2022, 10:43 PM | State News | Don't Miss |

ಧಾರವಾಡ : ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ಓಮಿಕ್ರಾನ್‍ನಿಂದ ಉಂಟಾಗಿರುವ 3ನೇ ಅಲೆಯು ವೇಗವಾಗಿ ಹರಡುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಟೆನ್ಮೆಂಟ್ ವಲಯಗಳ ಅಧಿಸೂಚನೆ ಹಾಗೂ ಮುಕ್ತಗೊಳಿಸುವ ಬಗ್ಗೆ ಪರಿಷ್ಕøತ ಮಾರ್ಗಸೂಚಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಹೊರಡಿಸಿದ್ದು, ಸಾರ್ವಜನಿಕರು ಇವುಗಳನ್ನು ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.  

ಕ್ಲಸ್ಟರ್: 5 ಅಥವಾ ಅದಕ್ಕಿಂಥ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ಆ ಪ್ರದೇಶವನ್ನು ಕ್ಲಸ್ಟರ್ ಎಂದು ಪರಿಗಣಿಸಲಾಗುವುದು.   
*ಮೈಕ್ರೋ ಕಂಟೇನ್ಮೆಂಟ್ ವಲಯ*: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದರೆ, ಆ ಸಾಲಿನಲ್ಲಿರುವ ಎಲ್ಲ ಮನೆಗಳು ಅಥವಾ 50 ಮೀಟರ್ (ರೇಡಿಯಸ್) ವ್ಯಾಪ್ತಿಯಲ್ಲಿ ಬರುವ ಮನೆಗಳು. ವಸತಿ ಸಮುಚ್ಛಯಗಳಲ್ಲಿ ಪ್ರಕರಣಗಳು ವರದಿಯಾದರೆ ಆಯಾ ಮಹಡಿ (ಫ್ಲೋರ್) ಗಳು ಅಥವಾ ಕಾರ್ಯಾಚರಣೆ ಸಾಧ್ಯವಾಗುವಂತೆ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದಂತೆ ಅಂತಹ ಪ್ರದೇಶಗಳನ್ನು  ಮೈಕ್ರೋ ಕಂಟೇನ್ಮೆಂಟ್ ವಲಯವೆಂದು ಘೋಷಿಸಲಾಗುತ್ತದೆ. 

ಕಂಟೇನ್ಮೆಂಟ್ ವಲಯ: ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದರೆ ಆ ಸಾಲಿನಲ್ಲಿರುವ ಎಲ್ಲಾ ಮನೆಗಳು ಅಥವಾ 100 ಮೀಟರ್ (ರೇಡಿಯಸ್) ವ್ಯಾಪ್ತಿಯಲ್ಲಿರುವ ಮನೆಗಳು. ವಸತಿ ಸಮುಚ್ಛಯಗಳಲ್ಲಿ ಪ್ರಕರಣಗಳು ವರದಿಯಾದರೆ ಆಯಾ ಮಹಡಿಗಳು ಅಥವಾ ಕಾರ್ಯಾಚರಣೆಗೆ ಸಾಧ್ಯವಾಗುವಂತೆ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದ ಅನ್ವಯ ಅಂತಹ ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಲಾಗುತ್ತದೆ.

ಕಂಟೇನ್ಮೆಂಟ್ ವಲಯಗಳ ಮುಕ್ತಗೊಳಿಸುವಿಕೆ : ಮೈಕ್ರೊ ಕಂಟೇನ್ಮೆಂಟ್, ಕಂಟೆನ್ಮೆಂಟ್ ವಲಯಗಳಲ್ಲಿ ಖಚಿತ ಕೋವಿಡ್-19 ಪ್ರಕರಣವು ವರದಿಯಾದ 7 ದಿನಗಳ ನಂತರ ಯಾವುದೇ ಖಚಿತ ಪ್ರಕರಣಗಳು ವರದಿಯಾಗದಿದ್ದರೆ ಅವುಗಳನ್ನು ಮುಕ್ತಗೊಳಿಸಲಾಗುವುದು. 
 ಸಾರ್ವಜನಿಕ ಆರೋಗ್ಯದ  ಹಿತದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಹೊರಡಿಸಿರುವ ಈ ಸುತ್ತೋಲೆಯ ಮಾನದಂಡಗಳನ್ನು ಆಧರಿಸಿ ಜಿಲ್ಲಾಡಳಿತವು ತಕ್ಷಣ ಜಾರಿಗೆ ಬರುವಂತೆ ಕ್ರಮಗಳನ್ನು ಕೈಗೊಂಡಿದೆ.

Read These Next

ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುವವರು ಮೊದಲು ಹಿಂದೂರಾಷ್ಟ್ರದ ಪರಿಕಲ್ಪನೆ ಪ್ರಸ್ತುತಪಡಿಸಲಿ: ಡಾ.ಖಾಸೀಂ

ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಾಗಿ ಹೇಳಿಕೊಳ್ಳುತ್ತಿರುವವರು ಮೊದಲು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಜನರ ಮುಂದಿಡಲಿ. ...

ಅಕ್ರಮ ಹಣ ವರ್ಗಾವಣೆ ಪ್ರಕರಣ; ಡಿಕೆಶಿ ವಿರುದ್ಧ ಈ.ಡಿ. ಚಾರ್ಜ್‌ಶೀಟ್ ಸಲ್ಲಿಕೆ; ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ; ಡಿಕೆಶಿ ಆರೋಪ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ನಿಂದ ಜಾಮೀನು ಪಡೆದು ಹೊರಗಿರುವ ಕೆಪಿಸಿಸಿ ಅಧ್ಯಕ್ಷ ...

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರದ್ದುಗೊಳಿಸಿ ಸಾಹಿತಿ, ಚಿಂತಕರು, ಶಿಕ್ಷಣ ತಜ್ಞರ ಸಭೆ: ಒಕ್ಕೊರಲಿನ ಕೂಗು

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರದ್ದುಗೊಳಿಸಿ, ಈ ...

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್ ಭೇಟಿ:ಪರಿಶೀಲನೆ

ಬಳ್ಳಾರಿ : ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿರುವ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ...

ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ : ಉಸ್ತುವಾರಿ ಸಚಿವ ಎಸ್.ಅಂಗಾರ

ಉಡುಪಿ : ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ ರಸ್ತೆ, ಜಿಲ್ಲಾ ಪಂಚಾಯತ್ ರಸ್ತೆ, ...