ಮಹಾ ಬಿಕ್ಕಟ್ಟು: ಮಾತುಕತೆಗೆ ಮುಂಬೈಗೆ ಮರಳಿ ಬನ್ನಿ; ಬಂಡುಕೋರ ಶಾಸಕರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರ

Source: Vb | By I.G. Bhatkali | Published on 30th June 2022, 1:02 AM | National News | Don't Miss |

ಮುಂಬೈ: ಮಹಾರಾಷ್ಟ್ರದ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆಯವರು ಮಂಗಳವಾರ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡುಕೋರ ಶಿವಸೇನೆ ಶಾಸಕರಿಗೆ ಪತ್ರವೊಂದನ್ನು ಬರೆದು, ಮುಂಬೈಗೆ ಮರಳುವಂತೆ ಮತ್ತು ತನ್ನೊಂದಿಗೆ ಮಾತುಕತೆ ನಡೆಸುವಂತೆ ಆಗ್ರಹಿಸಿದ್ದಾರೆ.

ನಿಮ್ಮಲ್ಲಿ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ. ನಿಮ್ಮ ಹೃದಯದಲ್ಲಿ ಶಿವಸೇನೆಯಿದೆ. ನಾವು ಮಾತುಕತೆ ನಡೆಸಿ ಮಾರ್ಗವೊಂದನ್ನು ಕಂಡುಕೊಳ್ಳೋಣ. ನಾನು ನಿಮ್ಮಲ್ಲಿ ಮನವಿ ಯನ್ನು ಮಾಡಿಕೊಳ್ಳಲು ಬಯಸಿದ್ದೇನೆ. ಸಮಯವಿನ್ನೂ ಮೀರಿಲ್ಲ. ದಯವಿಟ್ಟು ಬನ್ನಿ, ನನ್ನೊಂದಿಗೆ ಕುಳಿತುಕೊಳ್ಳಿ,ಶಿವಸೈನಿಕರು ಮತ್ತು ಸಾರ್ವಜನಿಕರಲ್ಲಿಯ ಎಲ್ಲ ಶಂಕೆಗಳನ್ನು ನಿವಾರಿಸಿ ಮತ್ತು ನಾವು ಪರಿಹಾರವೊಂದನ್ನು ಕಂಡುಕೊಳ್ಳಬಹುದು. ನಾವೆಲ್ಲ ಒಟ್ಟಿಗೆ ಕುಳಿತುಕೊಂಡು ಚರ್ಚಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳೋಣ' ಎಂದು ಠಾಕ್ರೆ ಪತ್ರದಲ್ಲಿ ಬರೆದಿದ್ದಾರೆ.

ಯಾರದೇ ಹೇಳಿಕೆಗಳಿಗೆ ಬಲಿಯಾಗದಂತೆ ಬಂಡುಕೋರ ಶಾಸಕರನ್ನು ಕೇಳಿಕೊಂಡಿರುವ ಠಾಕ್ರೆ, 'ಶಿವಸೇನೆಯು ನಿಮಗೆ ನೀಡಿರುವ ಗೌರವವನ್ನು ನೀವು ಬೇರೆಲ್ಲಿಯೂ ಪಡೆಯಲು ಸಾಧ್ಯವಿಲ್ಲ. ನಾವು ಮುಖಾಮುಖಿಯಾದರೆ ಖಂಡಿತವಾಗಿಯೂ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ. ಶಿವಸೇನೆಯ ಮುಖ್ಯಸ್ಥನಾಗಿ ಮತ್ತು ಕುಟುಂಬದ ಯಜಮಾನನಾಗಿ ಈಗಲೂ ನನಗೆ ನಿಮ್ಮ ಬಗ್ಗೆ ಚಿಂತೆಯಿದೆ' ಎಂದು ಹೇಳಿದ್ದಾರೆ.

ಗುವಾಹಟಿಯಲ್ಲಿ ತನ್ನೊಂದಿಗೆ ಶಿವಸೇನೆಯ 40 ಸೇರಿದಂತೆ 50 ಶಾಸಕರಿದ್ದಾರೆ ಎಂದು ಠಾಕ್ರೆ ವಿರುದ್ಧ ಬಂಡಾಯದ ನೇತೃತ್ವ ವಹಿಸಿರುವ ಏಕನಾಥ ಶಿಂಧೆ ಹೇಳಿದ್ದಾರೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...