ಭಟ್ಕಳದಲ್ಲಿ ಜಲ ಸಂರಕ್ಷಣೆಗಾಗಿ ಬಾಂದಾರು ನಿರ್ಮಾಣಕ್ಕೆ ಆಗ್ರಹ

Source: S O News Service | By I.G. Bhatkali | Published on 20th January 2020, 11:41 AM | Coastal News | Don't Miss |

ಭಟ್ಕಳ: ತಾಲೂಕಿನ ಮಣ್ಕುಳಿ ಹಾಗೂ ಅದಕ್ಕೆ ಹೊಂದಿಕೊಂಡ ಗುಳ್ಮಿ, ಬೆಳಲಖಂಡ, ತಲಾಂದ, ವೀರವಿಠ್ಠಲ ರಸ್ತೆ, ಹೈಡಕಿ, ಮುಠ್ಠಳ್ಳಿ ಹಾಗೂ ಮೂಡಭಟ್ಕಳ ಭಾಗದಲ್ಲಿ ಅಂತರ್ಜಲ ಹೆಚ್ಚಿಸಲು ಮಣಕುಳಿ ಹಾಗೂ ಮಾರುತಿನಗರ ಅಭಿವೃದ್ಧಿ ಸಮಿತಿ ನಡೆಸಿರುವ ಪ್ರಯತ್ನ ಭಾಗಶಃ ಯಶಸ್ವಿಯಾಗಿದ್ದು, ಯೋಜನೆಯ ಪೂರ್ಣ ಸಾಕಾರಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

* ಭಟ್ಕಳ ತಾಲೂಕಿನ ಮಣ್ಕುಳಿ ಹಾಗೂ ಅದಕ್ಕೆ ಹೊಂದಿಕೊಂಡ ಗುಳ್ಮಿ, ಬೆಳಲಖಂಡ, ತಲಾಂದ, ವೀರವಿಠ್ಠಲ ರಸ್ತೆ, ಹೈಡಕಿ, ಮುಠ್ಠಳ್ಳಿ ಹಾಗೂ ಮೂಡಭಟ್ಕಳ ಭಾಗದಲ್ಲಿ ಅಂತರ್ಜಲ ಹೆಚ್ಚಿಸಲು ಮಣಕುಳಿ ಹಾಗೂ ಮಾರುತಿನಗರ ಅಭಿವೃದ್ಧಿ ಸಮಿತಿ ನಡೆಸಿರುವ ಪ್ರಯತ್ನ ಭಾಗಶಃ ಯಶಸ್ವಿಯಾಗಿದ್ದು, ಯೋಜನೆಯ ಪೂರ್ಣ ಸಾಕಾರಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಬೇಕು.
     *  ಮಣ್ಕುಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಸರ್ವೀಸ್ ರಸ್ತೆ ಅಗತ್ಯವಿದ್ದು, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಬೇಕು. ವ್ಯವಸ್ಥಿತ ಚರಂಡಿ ನಿರ್ಮಾಣ ಕಾರ್ಯ ಕೈಗೊಳ್ಳಬೇಕು 

ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ಇಲ್ಲಿನ ಮಣ್ಕುಳಿ ಶ್ರೀ ರಾಘವೇಂದ್ರ ಮಠದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಈ ಭಾಗದ ಹೊಳೆಗಳಿಗೆ ಒಡ್ಡು ನಿರ್ಮಿಸಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳ ತೆರೆದ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಆದರೆ ಇನ್ನೂ ಹಲವು ಕಾರ್ಯಗಳು ಆಗಬೇಕಾಗಿದೆ. ತಲಾಂದ ರಸ್ತೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಹೊಳೆಕಟ್ಟಿನ ಹೊಳೆಯ ಸೇತುವೆ ಹಾಗೂ ಅದರ ಅಂಚಿನಲ್ಲಿ ಬಾಂದಾರು ನಿರ್ಮಿಸಬೇಕು, ನಾಗಮಾಸ್ತಿ ಹೊಳೆಯಲ್ಲಿ ವಿಪರೀತವಾಗಿ ಹೂಳು ತುಂಬಿಕೊಂಡಿದ್ದು, ಹೂಳನ್ನು ಎತ್ತಲು ಅಗತ್ಯ ಯೋಜನೆ ರೂಪಿಸಬೇಕು, ರೇಲ್ವೇ ನಿಲ್ದಾಣ ಪಕ್ಕದಲ್ಲಿ ಇರುವ ಕಟ್ಟಿನ ಹೊಳೆಯ ಇನ್ನೊಂದು ಕವಲಿಗೂ ಬಾಂದಾರು ನಿರ್ಮಿಸಬೇಕು, ಮೂಡಭಟ್ಕಳ ವ್ಯಾಪ್ತಿಯಲ್ಲಿ ಅಸಮರ್ಪಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಪಕ್ಕದಲ್ಲಿ ಹರಿಯುತ್ತಿರುವ ಕಲ್ಲು ಸಂಕದ ಹೊಳೆಯ ನೀರು ಸರಾಗವಾಗಿ ಮುಂದಕ್ಕೆ ಹರಿಯುತ್ತಿಲ್ಲ, ಸೇತುವೆಯ ತಳಪಾಯ ಜಲ ಮಟ್ಟಕ್ಕಿಂತ ಮೇಲೆ ಇರುವುದೇ ಇದಕ್ಕೆ ಕಾರಣವಾಗಿದ್ದು, ಸಮಸ್ಯೆ ಪರಿಹಾರಕ್ಕೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಈ ಹೊಳೆಗೂ ಅಗತ್ಯ ಬಾಂದಾರು ನಿರ್ಮಿಸಬೇಕು.

ಮಣ್ಕುಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಸರ್ವೀಸ್ ರಸ್ತೆ ಅಗತ್ಯವಿದ್ದು, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಬೇಕು. ವ್ಯವಸ್ಥಿತ ಚರಂಡಿ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಣಕುಳಿ ಹಾಗೂ ಮಾರುತಿನಗರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶಕುಮಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಗೌರವಾಧ್ಯಕ್ಷ ಗಣಪತಿ ಪ್ರಭು, ಶೋಕ ಹೆಗ್ಡೆ, ಪರಮೇಶ್ವರ ನಾಯ್ಕ, ಶಂಕರ ಶೆಟ್ಟಿ, ರಾಮಣ್ಣ ಬಳೆಗಾರ, ಶಂಕರ ಪೈ, ಹರೀಶ ನಾಯ್ಕ, ರಾಘವೇಂದ್ರ ಗವಾಳಿ ಮೊದಲಾದವರು ಉಪಸ್ಥಿತರಿದ್ದರು.    

Read These Next

21 ಜೂನ್ ನಿಂದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದದಲ್ಲಿ ಎಲ್ಲ ಸೇವೆಗಳು ಸಾರ್ವಜನಿಕರಿಗೆ ಮುಕ್ತ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಸೋಮವಾರ ದಿನಾಂಕ 21ನೇ ಜೂನ್ 2021 ರಿಂದ  ...