ಭಟ್ಕಳದಲ್ಲಿ ಗಣರಾಜ್ಯೋತ್ಸವ; ಗಮನ ಸೆಳೆದ ಸಿ.ಎ.ಎ ಎನ್.ಆರ್.ಸಿ ಕೇಕ್

Source: sonews | By Staff Correspondent | Published on 26th January 2020, 11:54 PM | Coastal News | Don't Miss |

ಭಟ್ಕಳ: ಇಲ್ಲಿನ ಮಹಿಳೆಯರು ವಿ ದಿ ಪೀಪಲ್ ಆಫ್ ಇಂಡಿಯಾ ಆಂದೋಲನದ ಮೂಲಕ ಗಮನ ಸೆಳೆಯುತ್ತಿದ್ದು ದಿನಕ್ಕೊಂದು ವಿನೂತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. 

71ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಕೇಕ್ ಮಾಡುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಸಂವಿಧಾನದ ಮಹತ್ವ, ಎನ್.ಆರ್.ಸಿ, ಸಿಎಎ ಮತ್ತು ಎನ್.ಪಿಆರ್ ಕುರಿತಂತೆ ಜಾಗೃತಿ ಮೂಡಿಸುವ ವಿವಿಧ ಆಕಾರದ ಆಕರ್ಷಕ  ಕೇಕ್ ಗಳು ಜನರ ಗಮನ ಸೆಳೆದವು. 

ಭಾತದ ಸಂವಿಧಾನ, ಭಾರತದ ನಕಾಶೆ ಸೇರಿದಂತೆ ವಿವಿಧ ಕೇಕ್‍ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇಲ್ಲಿನ ಮಹಿಳೆಯರು ತುಂಬಾ ಆಸಕ್ತಿ ವಹಿಸಿ ಕೇಕ್ ಗಳನ್ನು ಸಿದ್ಧಗೊಳಿಸಿದ್ದು ನಿಜಕ್ಕೂ ಸಮಾಜಮುಖಿ ಚಿಂತನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಶಂಸನೀಯವಾಗಿದೆ ಎಂದು ವಿ ದ ಪೀಪಲ್ ಆಫ್ ಇಂಡಿಯಾ ಭಟ್ಕಳದ ಮಹಿಳಾ ಸಂಚಾಲಕಿ ನಬೀರಾ ಮೊಹತೆಶಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಮುಂದಿನ ದಿನಗಳಲ್ಲಿ ಎನ್.ಆರ್.ಸಿ, ಸಿಎಎ ವಿರುದ್ಧ ಪ್ರಭಲ ಹೋರಾಟಗಳನ್ನು ಮಹಿಳೆಯರು ಮತ್ತು ಪುರುಷರು ಸೇರಿ ನಡೆಸಲಿದ್ದಾರೆ. ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಲು ಇಂದು ಕೇಕ್ ಸ್ಪರ್ಧೆ ಹಾಗೂ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆÀಯರು ಭಾಗವಹಿಸಿದ್ದಾರೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೋರಾಟಗಳನ್ನು ತೀವ್ರಗೊಳಿಸುವ ಅವಶ್ಯಕತೆಯಿದೆ. ಇಂದು ದೇಶದ ಎಲ್ಲ ಸಮುದಾಯಗಳಲ್ಲಿ ಮಹಿಳೆ ಜಾಗೃತಗೊಂಡಿದ್ದಾಳೆ, ಸಂವಿಧಾನದ ರಕ್ಷಣೆಗಾಗಿ ಇಂದು ದೇಶದಾದ್ಯಂತ ಪುರಷರಿಗಿಂತ ಮಹಿಳೆಯರೆ ಮುಂಚೂಣಿಯಲ್ಲಿದ್ದಾರೆ ಇದು ಉತ್ತಮ ಬೆಳೆವಣೆಯಾಗಿದೆ ಎಂದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...