ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ಕಾನೂನು ಹೋರಾಟಕ್ಕೆ ಸಿದ್ಧ -ರವೀಂದ್ರ ನಾಯ್ಕ

Source: SOnews | By Staff Correspondent | Published on 28th October 2024, 8:11 PM | Coastal News |

 

ಅರಣ್ಯವಾಸಿಗಳ ಒಕ್ಕಲೇಬ್ಬಿಸುವ ಪ್ರಕರಣ

ಭಟ್ಕಳ: ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳನ್ನು ಒಕ್ಕಲೇಬ್ಬಿಸಬೇಕೆಂದು ಪರಿಸರವಾದಿ ಸಂಘಟನೆಗಳು ದಾಖಲಿಸಿದ ಪ್ರಕರಣದಲ್ಲಿ, ಹೋರಾಟಗಾರರ ವೇದಿಕೆಯು ಕಾನೂನಾತ್ಮಕವಾಗಿ ಅರಣ್ಯವಾಸಿಗಳ ಪರ ವಾದ ಮಂಡಿಸಲಿದ್ದು, ಇದಕ್ಕಾಗಿ ಸುಪ್ರೀಂ ಕೋರ್ಟಿನಲ್ಲಿ ಕಾನೂನು ಹೋರಾಟ ನಡೆಯಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಅವರು ಅ.28ರಂದು ಭಟ್ಕಳದಲ್ಲಿ ನಡೆದ ಅರಣ್ಯವಾಸಿಗಳ ಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯವಾಸಿಗಳು ಆತಂಕಗೊಳ್ಳುವ ಅಗತ್ಯವಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಹಕ್ಕುಗಳನ್ನು ಕಾಯುವ ಕೊನೆಯ ಕಾನೂನಾಗಿದ್ದು, ಅವರ ಹಕ್ಕುಗಳನ್ನು ಕಾನೂನಾತ್ಮಕವಾಗಿ ರಕ್ಷಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಠ, ಪಾಂಡುರಂಗ ನಾಯ್ಕ ಬೆಳ್ಕೆ, ತಾಲೂಕಾ ಸಂಚಾಲಕ ಚಂದ್ರು ನಾಯ್ಕ, ಮೂದು ಮಳ್ಳ ನಾಯ್ಕ, ರತ್ನಾ ನಾಯ್ಕ, ಗಣಪತಿ ನಾರಾಯಣ ನಾಯ್ಕ ಹಾಡುವಳ್ಳಿ, ರಕ್ಷಿತ ಎಮ್ ಗೊಂಡ ಉಪಸ್ಥಿತರಿದ್ದರು.

69,733 ಅರ್ಜಿಗಳು ತಿರಸ್ಕಾರ: ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆಯ ಅನುಷ್ಠಾನದ ಪ್ರಥಮ ಹಂತದಲ್ಲಿ 69,733 ಅರ್ಜಿಗಳು ಕಾನೂನು ವ್ಯತಿರಿಕ್ತವಾಗಿ ತಿರಸ್ಕೃತವಾಗಿರುವುದು ವಿಷಾದಕರ ಬೆಳವಣಿಗೆ ಎಂದು ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

 

 

Read These Next

ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗಿದ್ದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಗ್ರಾಮದ ...