ಶಿರಸಿ ಕ್ರೀಡಾಂಗಣಕ್ಕೆ ಕಾಯಕಲ್ಪ ಒದಗಿಸುವಂತೆ ರವೀಂದ್ರ ನಾಯ್ಕ ಆಗ್ರಹ

Source: sonews | By Staff Correspondent | Published on 6th August 2020, 7:36 PM | Coastal News |

ಶಿರಸಿ: ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿ ಇರುವ ಯುವಕರ ಮತ್ತು ಕ್ರೀಡಾಪಟುಗಳ ದೈಹಿಕ ವ್ಯಕ್ತಿತ್ವಕ್ಕೆ ಪೂರಕವಾಗಿರುವ ವ್ಯಾಯಾಮಶಾಲೆ(ಜಿಮ್) ಯು ಇತ್ತೀಚಿನ ದಿನಗಳಲ್ಲಿ ಮೂಲಭೂತ ಸೌಕರ್ಯ, ಪೂರ್ಣಪ್ರಮಾಣದ ತರಬೇತುದಾರ, ವಿನೂತನ ಮತ್ತು ವೈಜ್ಞಾನಿಕ ಸಲಕರಣೆ ಕೊರತೆಯಿಂದ ಮುಕ್ತ ವ್ಯಾಯಾಮ ಶಾಲೆಯ ಚಟುವಟಿಕೆಗೆ ಸಮಸ್ಯೆಗಳ ಗ್ರಹಣದಿಂದ ಮುಕ್ತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಸುಸಜ್ಜಿತ ವ್ಯಾಯಾಮಶಾಲೆ ಶೀಘ್ರದಲ್ಲಿ ಪುನರ್‍ಚೇತನ ಗೋಳಿಸಬೇಕೆಂದು ಸ್ಫಂಧನಾ ಸ್ಪೋಟ್ರ್ಸ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಮುಖ್ಯಮಂತ್ರಿಗೆ ಅಗ್ರಹಿಸಿದ್ದಾರೆ.

ಕಳೆದ 2 ದಶಕದ ಹಿಂದೆ ಸ್ಥಳೀಯ ಉಪವಿಭಾಗಾಧಿಕಾರಿಯಾಗಿದ್ದ ನವೀನ್ ರಾಜ್ ಸಿಂಗ್ ಅವರ ಮುತೂವರ್ಜಿ ಹಾಗೂ ವಿಶೇಷ ಆಸಕ್ತಿ ಇಂದ ಯುವಜನ ಮತ್ತು ಕ್ರೀಡಾಇಲಾಖೆ ನಿರ್ವಹಣೆದೊಂದಿಗೆ ಜಿಲ್ಲಾ ಮಾರಿಕಾಂಬ ಕ್ರೀಡಾಂಗಣ ಆವರಣದಲ್ಲಿ ಕ್ರೀಡಾಪಟು ಹಾಗೂ ಯುವಕರಿಗೆ ಪೂರಕವಾಗಿ ಪ್ರಾರಂಬಿಸಲಾದ ವ್ಯಾಯಾಮ ಶಾಲೆ ಪ್ರಾರಂಭವಾಗಿ 2 ದಶಕಗಳಾದರೂ ಅದೇ ವ್ಯವಸ್ಥೆ, ಯಂತ್ರೋಪಕರಣ, ಸಲಕರಣೆ, ಸಂಕೀರ್ಣವಾದ ಕಟ್ಟಡದ ಸ್ಥಳಾವಕಾಶದಲ್ಲಿಯೇ ಮುಂದುವರೆದುಕೊಂಡು ಬಂದು ವಿಶೇಷವಾದ ಆಕರ್ಷಣೀಯ, ಹೊಸ ತಂತ್ರಜ್ಞಾನ ಸಲಕರಣೆಗಳಿಲ್ಲದೇ, ಮೂಲಭೂತ ಸೌಕರ್ಯ, ಮೂತ್ರಖಾನೆ, ನೀರಿನ ವ್ಯವಸ್ಥೆ ಇಲ್ಲದೇ ಪೂರ್ಣಪ್ರಮಾಣದ ತರಬೇತಿದಾರ ಕೊರತೆಗಳಿಂದ ದಿನದಿಂದ ದಿನಕ್ಕೆ ವ್ಯಾಯಾಮಶಾಲೆ ಸೋರಗುತ್ತ ಗ್ರಹಣ ಹಿಡಿದಂತಾಗಿದೆ ಎಂದು ಉಲ್ಲೇಖಿಸುತ್ತ ಇದರಿಂದ ಯುವಕರ ಮತ್ತು ಕ್ರೀಡಾಪಟುಗಳ ಭವಿಷ್ಯಕ್ಕೆ ಮಾರಕವಾಗಿರುವುದು ವಿಷಾದಕರ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದ್ರಿ ವ್ಯಾಯಾಮಶಾಲೆಗೆ ಕಳೆದ ವರ್ಷ ಡಿಸೇಂಬರ್ 2 ನೇ ವಾರ ರಾಜ್ಯ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ ಪುರುಷೋತ್ತಮ ಭೇಟಿ ನೀಡಿ ಅತೀ ಶೀಘ್ರದಲ್ಲಿ ಪುನರ್‍ಚೇತನ ನೀಲಿನಕ್ಷೆ ತಯಾರಿಸಿ ಕಾರ್ಯ ಪ್ರವತ್ತರಾಗಿ, ಸದ್ರಿ ವ್ಯಾಯಾಮ ಶಾಲೆಯಿಂದ 500 ಮೀ ಅತಂರದಲ್ಲಿಯೇ ಸುಮಾರು 5-6 ಸಾವಿರ ವಿದ್ಯಾರ್ಥೀಗಳು ಶೈಕ್ಷಣೀಕ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥೀಗಳಿಗೆ ಆಕರ್ಷಿಸುವ ಹಾಗೂ ಸ್ಫಂದಿಸುವ ದಿಶೆಯಲ್ಲಿ ವ್ಯಾಯಾಮಶಾಲೆಯ ಕಾರ್ಯ ನಿಯೋಜನೆಗೆ ಪ್ರವರ್ತರಾಗಿ ಎಂದು ಸೂಚಿಸಿದ್ದರು. ಆದರೆ ಇಂದಿನವರೆಗೂ ಯಾವುದೇ ಪ್ರಗತಿ ಕಾಣದಿರುವುದು ಖೇದಕರ ಎಂದು ರವೀಂದ್ರ ನಾಯ್ಕ ಆಕ್ಷೇಪಿಸಿದ್ದಾರೆ.

ಶ್ರೀ ಮಾರಿಕಾಂಬ ದೇವಿಯ ಹೆಸರಿನಲ್ಲಿರುವ ಇರುವ ವ್ಯಾಯಾಮಶಾಲೆಯ ಅಭಿವೃದ್ಧಿಗೆ, ಮಾರಿಕಾಂಬ ದೇವಿಯೇ ಸನ್‍ಬುದ್ಧಿ ಸ್ಥಳೀಯ ಜಪ್ರತಿನಿಧಿಗಳಿಗೆ ನೀಡಿದಾಗಲೇ ವ್ಯಾಯಾಮಶಾಲೆಯ ಅಭಿವೃದ್ಧಿ ಸಾಧ್ಯವಾಗುದೇನೋ ಎಂದು ಜನಪ್ರತಿನಿಧಿಗಳ ವ್ಯಾಯಾಮಶಾಲೆಯ ನಿರಾಶಕ್ತಿಗೆ ರವೀಂದ್ರ ನಾಯ್ಕ ವ್ಯಂಗ ಮಾಡಿದ್ದಾರೆ.

ಸಚಿವರ ಪತ್ರಕ್ಕೆ ಕಿಮ್ಮತ್ತಿಲ್ಲ: ಒಂದು ದಶಕಕ್ಕಿಂತ ಹಿಂದಿನಿಂದಲೂ ವ್ಯಾಯಾಮಶಾಲೆಗೆ ಅರೇಕಾಲಿಕ ತರಬೇತರಾಗಿ ಕಾರ್ಯ ನಿರ್ವಹಿಸುತ್ತಿರುವ ತರಬೇತುದಾರ ಭಾಸ್ಕರ ಭಟ್ಟ ಅವರಿಗೆ ವರ್ಷದಿಂದಲೂ ಅರೇಕಾಲ ಕಾರ್ಯಕ್ಕೆ ನೀಡುತ್ತಿರುವ ಗೌರವ ವೇತನ ನೀಡದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು ಹಾಗೂ ಸದ್ರಿ ಕ್ರೀಡಾಂಗಣದ ಸಮಿತಿಯ ಜಿಲ್ಲಾಧ್ಯಕ್ಷರು ಆಗಿರುವ ಶಿವರಾಮ ಹೇಬ್ಬಾರ ಇಲಾಖೆಗೆ ಅತೀ ಶೀಘ್ರದಲ್ಲಿ ಹಣ ಬಿಡುಗಡೆಗೆ ನಿರ್ದೇಶನ ನೀಡಿ ತಿಂಗಳಾದರೂ ಸಂಬಂಧಿಸಿದ ಅಧಿಕಾರಿಗಳು ಸಚಿವರ ಪತ್ರಕ್ಕೆ ಇಲಾಖೆÉ ಕ್ಯಾರೆ ಎನ್ನದಿರುವುದು ಆಶ್ಚರ್ಯಕರ. ಅಲ್ಪ ವೇತನದಲ್ಲಿ ಜೀವನ ನಡೆಸುತ್ತಿರುವ ತರಬೇತಿದಾರನ ಜೀವನ ನಿರ್ವಹಣೆ ಕಷ್ಟಕರ ಆಗಿರುವುದು ವಿಷಾದÀಕರ ಎಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next