ಜಿಲ್ಲೆಯಲ್ಲಿ ಕೊರೋನಾದಿಂದ ಸಾವುಗಳಾಗದಂತೆ ತಡೆಯಬೇಕಿದೆ-ಜಿಲ್ಲಾಧಿಕಾರಿ

Source: sonews | By Staff Correspondent | Published on 14th July 2020, 7:52 PM | Coastal News | Don't Miss |

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ, ನಮಗೆ ಸಂಖ್ಯೆ ಮುಖ್ಯವಲ್ಲ, ಕೊರೊನಾದಿಂದ ಸಾವುಗಳಾಗದಂತೆ ತಡೆಯುವುದು ಮುಖ್ಯ ಉದ್ದೇಶವಾಗಿದ್ದು ಅದಕ್ಕಾಗಿಯೇ ಪದೇ ಪದೇ ನಾಗರೀಕರಲ್ಲಿ ಕೊವಿಡ್ ಲಕ್ಷಣವಿದ್ದವರು ಸ್ವಯಂ ತಪಾಸಣೆಗೊಳಗಾಗುವಂತೆ ಕೊರುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಹೇಳಿದರು. 

ಅವರ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 

ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ತರಲು ಪ್ರತಿಯೊಬ್ಬರ ಸಹಕಾರವೂ ಅಗತ್ಯವಾಗಿದೆ. ಕೋವಿಡ್ ಲಕ್ಷಣ ಹೊಂದಿದವರು ಸ್ವಯಂ ಆಗಿ ಚಿಕಿತ್ಸೆ ಮಾಡಿಕೊಳ್ಳದೇ ಸರಕಾರಿ ಆಸ್ಪತ್ರೆಗೆ ಬಂದು ಗಂಟಲು ದ್ರವ ಪರೀಕ್ಷೆ ಮಾಡಿಕೊಳ್ಳಬೇಕು. ಕಾಯಿಲೆ ಉಲ್ಬಣವಾದ ನಂತರ ತೊಂದರೆ ಪಡುವ ಬದಲು ಆರಂಭದ ಹಂತದಲ್ಲೇ ಸರಿಯಾದ ಚಿಕಿತ್ಸೆ ಪಡೆದರೆ ಒಳ್ಳೆಯದು ಎಂದ ಅವರು ಸರಕಾರದ ನಿಯಮದ ಪ್ರಕಾರ ಗಂಟಲು ದ್ರವ ಪರೀಕ್ಷೆಗೆ ಕೊಟ್ಟವರು ವರದಿ ಬರುವ ವರೆಗೆ ಖಡ್ಡಾಯವಾಗಿ ಹೋಂ ಕ್ವಾರಂಟೈನ್‍ನಲ್ಲಿರಬೇಕಾಗಿದೆ. ಹೋಮ್ ಕ್ವಾರಂಟೈನ್‍ನಲ್ಲಿದ್ದವರು ತಿರುಗಾಡಿದರೆ ಅಂತವರಿಗೆ ಮನೆಗೇ ನೋಟೀಸು ಕಳುಹಿಸಲಾಗುತ್ತದೆ ಎಂದರು. 

ಭಟ್ಕಳದಲ್ಲಿ ಮನೆಮನೆಗೆ ತೆರಳಿ ಆರೋಗ್ಯ ಸರ್ವೆ ಕಾರ್ಯ ಮಾಡುವುದಕ್ಕೆ ಚಾಲನೆ ನೀಡಲಾಗಿದ್ದು, ಆರೋಗ್ಯ ಕಾರ್ಯಕರ್ತರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು ಸರಿಯಾದ ಮಾಹಿತಿ ಒದಗಿಸಬೇಕು. ಭಟ್ಕಳ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ ಹಾಗೂ ಸರಕಾರಿ ಆಸ್ಪತೆಯನ್ನು ಕೋವಿಡ್ ಹೆಲ್ತ್ ಕೇರ್ ಸೆಂಟರ್ ಮಾಡಲಾಗಿದೆ.  ಇಲ್ಲಿ ಪಾಸಿಟಿವ್ ಬಂದ ಕೋವಿಡ್ ಗುಣಲಕ್ಷಣ ಇಲ್ಲದವರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಕೋವಿಡ್ ಸೋಂಕಿನ ಸಮಸ್ಯೆ ಉಲ್ಬಣಿಸಿದವರನ್ನು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು  ಕಾರವಾರದ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಯವರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡಲು ಮುಂದೆ ಬಂದರೆ ಅಂತಹ ಆಸ್ಪತ್ರೆಗೆ ಪರವಾನಿಗೆ ನೀಡಲಾಗುವುದು ಎಂದ ಅವರು ಮನೆಮನೆ ಆರೋಗ್ಯ ಸರ್ವೆ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು. 

ಕೋವಿಡ್ ಲಕ್ಷಣ ಇರುವವರು ಕಾಯಿಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಿಡದೇ ಸ್ವಯಂ ಆಗಿ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಬೇಕು. ಸಾಮಾಜಿಕ ಜಾಲತಾಣದಲ್ಲಿನ ಸುಳ್ಳು ಸುದ್ದಿ, ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಮಾಧ್ಯಮದವರೂ ಸಹ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಕೆಲಸ ಮಾಡಬೇಕು. ಸೋಂಕು ಹೆಚ್ಚುತ್ತಿರುವುದರಿಂದ ಎಲ್ಲರೂ ಹೆಚ್ಚು ಮನೆಯಲ್ಲೇ ಇರುವಂತಾಗಬೇಕು. ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಪಾಸಿಟಿವ್ ಬಂದಿದ್ದರಿಂದ ವರದಿ ಬರುವುದರಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಶೇ.30 ರಷ್ಟು ಸೋಂಕು ಹೊರಗಿನಿಂದ ಬಂದವರಿಂದಲೇ ಹರಡಿದೆ ಎಂದರು. 

ಯಾವುದೇ ವ್ಯಕ್ತಿಗಳು ಹೊರಗಿನಿಂದ ಬಂದರೂ ಅವರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸ ಆಗಬೇಕು. ಸೋಂಕಿತರು ಪ್ರಾಥಮಿಕ ಸಂಪರ್ಕದ ಬಗ್ಗೆಯೂ ಸರಿಯಾದ ಮಾಹಿತಿ ನೀಡಬೇಕು. ಕಾರವಾರದ ಕೋವಿಡ್-19 ಪರೀಕ್ಷಾ ಕೇಂದ್ರದಲ್ಲಿ ದಿನವೊಂದಕ್ಕೆ 800 ಸಾಂಪಲ್‍ಗಳನ್ನು ಪರೀಕ್ಷೆ ಮಾಡುವ ಸಾಮಥ್ರ್ಯವಿದೆ. ನಾವು 900ರ ತನಕವೂ ಪರೀಕ್ಷೆ ಮಾಡಿದ್ದೇವೆ. ಅಗತ್ಯವಿದ್ದರೆ ಮತ್ತೊಂದು ಯಂತ್ರ ಅಲ್ಲಿಯೇ ಹಾಕಬಹುದು ಎಂದ ಅವರು ಜಿಲ್ಲೆಯಲ್ಲಿ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಲು 1000 ರ್ಯಾಪಿಡ್ ಟೆಸ್ಟ್ ಕಿಟ್ ತರಿಸಲಾಗಿದ್ದು, ಇದರಲ್ಲಿ 500 ಕಿಟ್‍ಗಳನ್ನು ಭಟ್ಕಳಕ್ಕೆ ನೀಡಿ ಟೆಸ್ಟ್ ಮಾಡಿಸುವ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದೆ. ಇನ್ನು ಮುಂದೆ ದಿನಂಪ್ರತಿ ಪಾಸಿಟಿವ್ ಪ್ರಕರಣದ ಜತೆಗೆ ನೆಗೆಟಿವ್ ಪ್ರಕರಣದ ಬಗ್ಗೆಯೂ ತಿಳಿಸಲಾಗುವುದು ಎಂದರು.  ಸಹಾಯಕ ಆಯುಕ್ತ ಭರತ್ ಎಸ್, ಎಎಸ್ಪಿ ನಿಖಿಲ ಬಿ., ತಹಸೀಲ್ದಾರ ರವಿಚಂದ್ರ ಮುಂತಾದವರಿದ್ದರು. 


 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...