ಕರ್ನಾಟಕ ದಲಿತ ರಕ್ಷಣಾವೇದಿಕೆಯಿಂದ ರಾಮಕೃಷ್ಣ ಹೆಗಡೆಯವರ 96 ನೇ ಜಯಂತಿ ಆಚರಣೆ

Source: sonews | By MV Bhatkal | Published on 29th August 2021, 5:43 PM | Coastal News |


ಮುಂಡಗೋಡ : ಕರ್ನಾಟಕ ದಲಿತ ರಕ್ಷಣಾವೇದಿಕೆಯಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 96ನೇ ಜಯಂತಿಯನ್ನು ಪಟ್ಟಣದ ನ್ಯಾಸರ್ಗಿ ರಸ್ತೆಯಲ್ಲಿರುವ ಗೋವಿಂದ ಶರೀಫ ಶಿವಯೋಗಿಗಳ ದೇವಸ್ಥಾನದಲ್ಲಿ ರವಿವಾರ ಬೆಳಗ್ಗೆ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಪಿಐ ಪ್ರಭುಗೌಡ ಡಿ.ಕೆ ಮಾತನಾಡಿ ನೀರಿನ ಅವಶ್ಯಕತೆ ಆಗತ್ಯತೆ ಕುರಿತು ರಾಮಕೃಷ್ಣ ಹೆಗಡೆಯವರ ವಿವೇಚನಾ ಶಕ್ತಿಯಿಂದ ತಾಲೂಕಿನಲ್ಲಿ ಕೆರೆಗಳು, ಜಲಾಶಯಗಳು ನಿರ್ಮಾಣವಾಗಿದ್ದು ಇದರಿಂದ  ತಾಲೂಕಿನ ರೈತರು ಸಾರ್ವಜನಿಕರಿಗೆ ಕಾಡು ಪ್ರಾಣಿಪಕ್ಷಿಗಳಿಗೆ ದನಕರುಗಳಿಗೆ ಬಹಳಷ್ಟು ಅನುಕೂಲವಾಗಿದೆ. ಇಲ್ಲಿ ಕೆರೆಗಳು ಇರುವುದು ನೋಡಿದರೆ ತಾಲೂಕಿನ ಹೊರಗಿನವರಿಗೆ ಅದರ ಮೌಲ್ಯ ಏನೆಂಬುವುದು  ಗೊತ್ತಾಗುತ್ತದೆ. ಕೆರೆ ಕಟ್ಟೆಗಳನ್ನು ನಿರ್ಮಿಸಿದ  ಮಹಾನುಭಾವರನ್ನು ನೆನೆಪಿಸಿಕೊಳ್ಳುವುದು ಶ್ರೇಯಸ್ಕರ ಎಂದರು
ಗ್ಯಾಸ ವಿತರಕ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಓಶಿಮಠ ಮಾತನಾಡಿ ರಾಮಕೃಷ್ಣ ಹೆಗಡೆಯವರ ರಾಜಕೀಯ ಜೀವನದಲ್ಲಿ ಅಧಿಕಾರ ಅನುಭವಿಸಿದ ಹಾಗೂ ತಮ್ಮ ಪಕ್ಷದ ನಿಷ್ಠಾವಂತರೆಂದು ನಂಬಿದವರಿಂದ ನೋವು ಅನುಭವಿಸಿದ ದಿನಗಳ ಕುರಿತು  ಎಳೆ ಎಳೆಯಾಗಿ ಬಿಚ್ಚಿಟ್ಟರು. ಪ್ರತಿ ವರ್ಷವು ರಾಮಕೃಷ್ಣ ಹೆಗಡೆಯವರ ಜಯಂತಿಯನ್ನು ಮರೆಯದೆ ಆಯೋಜಿಸುತ್ತಿರುವ ದಲಿತ ನಾಯಕ ಚಿದಾನಂದ ಹರಿಜನ ರಗೆ ಶ್ಲಾಘಿಸಿದರು
ಕಾರ್ಯಕ್ರಮದಲ್ಲಿ ಹನಮಂತ ಆರೇಗೊಪ್ಪ, ಎಂ.ಎಚ್. ಕಲಾಲ ಮಾತನಾಡಿದರು. ಕಾರ್ಯಕ್ರಮವನ್ನು ಚಿದಾನಂದ ಹರಿಜನ ನಿರ್ವಹಿಸಿದರು
ಮಂಜುನಾಥ ವರ್ಣೇಕರ, ಶ್ರೀಕಾಂತ ಸಾನು, ಹನಮಂತ ಭಜಂತ್ರಿ, ಎಸ್.ಎಸ್.ಪಾಟೀಲ, ರಬ್ಭಾನಿ ಪಟೇಲ, ಗಿಡ್ಡಪ್ಪ ಹಿರಳ್ಳಿ, ಶಿವಾನಂದ ಮೂಡಸಾಲಿ, ಮಹಾಂತಪ್ಪ ಜೋಳz,À ಹವಾಲ್ದಾರ ಸೋಮಶೇಖರ ಮೈತ್ರಿ ಸೇರಿದಂತೆ ಮುಂತಾದವರು ಇದ್ದರು

 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...