ಲಖಿಂಪುರ ಖೇರಿ ಹಿಂಸಾಚಾರ ಆರೋಪಿಗಳನ್ನು ಕೂಡಲೇ ಬಂಧಿಸಿ: ಟಿಕಾಯತ್ ಆಗ್ರಹ

Source: VB | By I.G. Bhatkali | Published on 8th October 2021, 7:08 PM | National News |

ಸೇರಿ (ಉತ್ತರಪ್ರದೇಶ): ಲಖಿಂಪುರ ಖೇರಿ ಹತ್ಯಾಕಾಂಡದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ವಕ್ತಾರ ರಾಕೇಶ್ ಟಿಕಾಯತ್ ಉತ್ತರಪ್ರದೇಶ ಸರಕಾರವನ್ನು ಗುರುವಾರ ಆಗ್ರಹಿಸಿದ್ದಾರೆ.

“ಲಖಿಂಪುರ ಖೇರಿ ಹತ್ಯಾಕಾಂಡದ ಆರೋಪಿಗಳನ್ನು ಸರಕಾರ ಕೂಡಲೇ ಬಂಧಿಸಬೇಕು'' ಎಂದು ಟೆಕಾಯತ್ ಟೀಟ್ ಮಾಡಿದ್ದಾರೆ. ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ 3ರಂದು ಸಂಭವಿಸಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು 8 ಮಂದಿ ಸಾವನ್ನಪ್ಪಿದ್ದರು.

ಲಖಿಂಪುರ ಬೇರಿಯ ಹೆಲಿಪ್ಯಾಡ್ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ರೈತರು ತಮ್ಮ ಪ್ರತಿಭಟನೆ ಮುಗಿಸಿ ಚದುರುತ್ತಿರುವ ಸಂದರ್ಭ ಕೇಂದ್ರ ಸಹಾಯಕ ಸಚಿವ ಅಜಯ್‌ ಮಿಾ ಪುತ್ರ ಆಶೀಷ್ ಮಿಶ್ರಾ ಹಲವು ರೈತರಿಗೆ ತನ್ನ ವಾಹನವನ್ನು ಡಿಕ್ಕಿ ಹೊಡೆಸಿದ್ದು, ಆನಂತರ ವಾಹನ ಹರಿಸಲು ಯತ್ನಿಸಿದ್ದ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ. ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬವನ್ನು ಭೇಟಿಯಾಗಲು ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು. ರೈತರನ್ನು ಹತ್ಯೆಗೈದ ಎಲ್ಲ ಆರೋಪಿಗಳನ್ನು ಸರಕಾರ ಒಂದು ವಾರದ ಒಳಗೆ ಬಂಧಿಸಬೇಕು ಎಂದು ಬುಧವಾರ ಟಿಕಾಯತ್ ಆಗ್ರಹಿಸಿದ್ದರು.

“ಜನರಿಗೆ ವಾಹನ ಢಿಕ್ಕಿ ಹೊಡೆಸಿದವರು ಮನುಷ್ಯರು ಅಥವಾ ನಾಯಕರಲ್ಲ. ಅವರು ರಕ್ತ ಪಿಪಾಸುಗಳು. ಅಪರಾಧಿಗಳನ್ನು ಬಂಧಿಸಲು ಸರಕಾರಕ್ಕೆ ಒಂದು ವಾರ ಕಾಲಾವಕಾಶ ಇದೆ. ಸರಕಾರ ನ್ಯಾಯ ನೀಡಲು ವಿಫಲವಾದರೆ, ಆನಂತರ ನಾವು ಮುಂದಿನ ಕಾರ್ಯತಂತ್ರವನ್ನು ಘೋಷಿಸಲಿದ್ದೇವೆ'' ಎಂದು ಅವರು ಹೇಳಿದ್ದಾರೆ.

Read These Next