ಸಿಡ್ನಿ ಕನ್ನಡ ಸಂಘದಿಂದ ಅಂತರ್ಜಾಲ ಮೂಲಕ ರಾಜ್ಯೋತ್ಸವ ಸಮಾರಂಭ.

Source: SO News | By Laxmi Tanaya | Published on 12th October 2021, 10:24 PM | Global News |

ಸಿಡ್ನಿ :  ‌ಕೋವಿಡ್ ಮಹಾಮಾರಿಯಿಂದಾಗಿ  ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮವನ್ಮ ಆನ್ಲೈನ್ ಮೂಲಕ ಆಯೋಜಿಸುವುದಾಗಿ  ಸಿಡ್ನಿ ಕನ್ನಡ ಸಂಘ ತಿಳಿಸಿದೆ.

ಈಗಷ್ಟೆ ಸರಕಾರವು ವಿಧಿಸಿರುವ ನಿಭಂದನೆಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿದೆ. ಆದರೂ ಸಹ ಸಮುದಾಯದ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ  ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸುವದು ಕಷ್ಟಕರವಾಗಿದೆ.

 ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ೨೦೨೧: ಪ್ರತೀ ವರ್ಷವೂ ವಿಜೃಂಭಣೆಯಿಂದ ಆಚರಿಸುತ್ತಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಕಳೆದ ವರ್ಷದಂತೆ ಈ ಬಾರಿಯೂ ಕೂಡ ಸಭಾಂಗಣದಲ್ಲಿ ನಡೆಸುವದು ಸಾಧ್ಯವಾಗುತ್ತಿಲ್ಲ.

ಆದರೆ ಕನ್ನಡ ಸಂಘದ ಪ್ರಮುಖ ವಾರ್ಷಿಕ ಸಮಾರಂಭವನ್ನು ಈ ಬಾರಿ ಅಂತರ್ಜಾಲದ ಮೂಲಕ ನಡೆಸಲು ನಿರ್ಧರಿಸಲಾಗಿದೆ.

ದಿನಾಂಕ:  ಶನಿವಾರ, ೨೭ ನವ್ಹೆಂಬರ್ ೨೦೨೧(ಅಂತರ್ಜಾಲದ ಮೂಲಕ ಪ್ರದರ್ಶಿಸುವ ದಿನ)
ವೇಳೆ: ಸಂಜೆ ೫.೦೦ ಘಂಟೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಶ್ರೀಮತಿ: ಗೀತಾ ಗೋಪಿನಾಥ್ ಅವರನ್ನು ಕೂಡಲೆ ಸಂಪರ್ಕಿಸಬೇಕಾಗಿ ಈ ಮೂಲಕ ಕೋರಲಾಗಿದೆ.‌ ಆಂತರ್ಜಾಲದ ಮೂಲಕ ಪ್ರಸ್ತುತಪಡಿಸುತ್ತಿರುವ ಈ ಕಾರ್ಯಕ್ರಮವು ೨ಘಂಟೆಗೆ ಮೀರದಂತೆ ಆಯೋಜಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮಗಳು, ಕನ್ನಡ ಭಾಷೆ, ಕರ್ನಾಟಕದ ಇತಿಹಾಸ, ಕಲೆ, ಪರಂಪರೆಯನ್ನು ವೈಭವೀಕರಿಸುವಂತಿರಬೇಕು.

ಜಾನಪದ ಕಲೆ, ಶಾಸ್ತ್ರೀಯ ಕಲೆ, ಚಲನಚಿತ್ರ ಗೀತೆ, ಭಾವಗೀತೆ, ಭಕ್ತಿಗೀತೆ, ಏಕಾಂಕ/ಚಿಕ್ಕ ನಾಟಕ, ಐತಿಹಾಸಿಕ ವ್ಯಕ್ತಿಗಳ ವೇಷ ಭೂಷಣ ಪ್ರದರ್ಶನ ಇತ್ಯಾದಿ ಪ್ರಕಾರಗಳಿಗೆ ಅವಕಾಶ ಕಲ್ಪಿಸಲಾಗುವದು. 

ತಾವು ಪ್ರದರ್ಶಿಸಲಿಚ್ಛಿಸುವ ಕಾರ್ಯಕ್ರಮದ ಕಾಲಮಿತಿ ೪ ರಿಂದ ೫ ನಿಮಿಷಗಳಷ್ಟಿರಲಿ.

ನೃತ್ಯ, ಕಿರುನಾಟಕದಲ್ಲಿ ಭಾಗವಹಿಸುವವರ ಸಂಖ್ಯೆ ೬ ಜನರನ್ನು ಮೀರದಿರಲಿ.
ಚಿತ್ರಗೀತೆಗಳನ್ನು ಹಾಡಬಯಸುವವರು ಯುಗಳ ಗೀತೆಗಳನ್ನು (೨ ಜನ) ಮಾತ್ರ ಪ್ರದರ್ಶಿಸಬೇಕು.

ಒಬ್ಬರು ಕೇವಲ ಒಂದು ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಬಹುದಾಗಿದೆ.
ಮೊದಲು ನೋಂದಾಯಿಸುವ ಸೂಕ್ತ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವದು.

ಆಂತರ್ಜಾಲದ ಮೂಲಕ ಪ್ರಸ್ತುತಪಡಿಸುತ್ತಿರುವ ಈ ಕಾರ್ಯಕ್ರಮವು ೨ಘಂಟೆಗೆ ಮೀರದಂತೆ ಆಯೋಜಿಸಲು ನಿರ್ಧರಿಸಲಾಗಿದೆ. ಸಾಧ್ಯವಾದಷ್ಟು ವೈವಿದ್ಯತೆಯನ್ನು ಪ್ರದರ್ಶಿಸುವ ಇಚ್ಛೆಯಿಂದ ನಿಯಮಿತ ಕಾರ್ಯಕ್ರಮಗಳಿಗೆ ಅವಕಾಶವಿದೆ.

ಭಾಗವಹಿಸಲು ಇಚ್ಛಿಸುವವರು ಗಮನಿಸಬೇಕಾದ ಸಂಗತಿಗಳು:
ಹೆಸರು ನೋಂದಾಯಿಸಲು ಕೊನೆಯ ದಿನಾಂಕ: ೩೦/೧೦/೨೦೨೧
ಕಾರ್ಯಕ್ರಮಗಳನ್ನು ರಾಜ್ಯೋತ್ಸವ ಕಾರ್ಯಕ್ರಮದ ದಿನದಂದು (ZOOM & Face Book) ಮೂಲಕ ಪ್ರಸಾರ ಮಾಡಲಾಗುವುದು ಎಂದ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯೋತ್ಸವ ದಿನದಂದು ವಿದೇಶದಿಂದ ಅತಿಥಿಗಳು ಭಾಗವಹಿಸುವರು. ಸಂಘದ ಕಾರ್ಯಕಾರೀ ಮಂಡಳಿಯು ನಿಗದಿತ ಸ್ಥಳದಿಂದ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಲು ನಿರ್ಧರಿಸಿದೆ.

ಕೋವಿಡ್ ಕಾರಣದಿಂದಾಗಿ ಮತ್ತು ಎಲ್ಲರ ಆರೋಗ್ಯದ ದೃಷ್ಟಿಯಿಂದ ಮೇಲೆ ತಿಳಿಸಿರುವ ಅಂಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುವದು. ಈ ವಿಷಯದಲ್ಲಿ ಎಲ್ಲರ ಸಹಕಾರ ಮತ್ತು ಸಹಾಯವನ್ನು ಈ ಮೂಲಕ ಅಪೇಕ್ಷಿಸುತ್ತೇವೆ.

ಸರಕಾರದ ಆದೇಶಕ್ಕನುಗುಣವಾಗಿ ಕೇವಲ "ಕೋವಿಡ್ ನಿರೋಧಕ" ಲಸಿಕೆಗಳನ್ನು ಪಡೆದಿರುವವರಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.

ಭಾಗವಹಿಸುವ ಕಲಾವಿದರು ಮತ್ತು ಭಾಗವಹಿಸುವ ಚಿಕ್ಕ ಮಕ್ಕಳ ತಂದೆ/ತಾಯಿ, ಪಾಲಕರು ಎರಡೂ ಲಸಿಕೆಗಳನ್ನು ಪಡೆದಿರಬೇಕು.

ಲಸಿಕೆ ಪಡೆದಿರುವ ಬಗ್ಗೆ ಅಧೀಕೃತ ದಾಖಲೆಯನ್ನು ಹೊಂದಿರಬೇಕು.

ಚಿತ್ರೀಕರಣದ ದಿನ (ದಿ: ೧೩/೧೧/೨೦೨೧) - ಕೆಲವು ವಿವರಗಳು:
ನೀವು ನೀಡುವ ಕಾರ್ಯಕ್ರಮವನ್ನು ದಿ; ೧೩/೧೧/೨೦೨೧ ರಂದು ಚಿತ್ರೀಕರಿಸಲಾಗುವುದು.
ಚಿತ್ರೀಕರಣದ ದಿನದಂದು ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ನಿಗದಿತ ಜನರು ಮಾತ್ರ ಸಭಾಂಗಣದಲ್ಲಿರುವಂತೆ ನೋಡಿಕೊಳ್ಳಲಾಗುವುದು.

ಪ್ರತಿಯೊಬ್ಬರು ತಮಗೆ ನಿಗದಿ ಮಾಡಿದ ವೇಳೆಗೆ ಬಂದು ಚಿತ್ರೀಕರಣದಲ್ಲಿ ಭಾಗವಹಿಸಿಬೇಕಾಗುವುದು.

ವೀಡಿಯೋ ಚಿತ್ರೀಕರಣದ ದಿನದ ವಿವರಗಳನ್ನು ನಂತರ ತಿಳಿಸಲಾಗುವುದು.

ಈ ಕಾರ್ಯಕ್ರಮಗದಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಚ್ಚಿನ ವಿವರಗಳಿಗೆ ಮತ್ತು ತಮ್ಮ ಹೆಸರನ್ನು ನೋಂದಾಯಿಸಲು ಕೂಡಲೆ ಶ್ರೀಮತಿ: ಗೀತಾ ಗೋಪಿನಾಥ್ ಅವರನ್ನು ಸಂಪರ್ಕಿಸಿ:

ಶ್ರೀಮತಿ: ಗೀತಾ ಗೋಪಿನಾಥ್, 0403 150 052
ಹೆಸರು ನೋಂದಾಯಿಸಲು ಕೊನೆಯ ದಿನಾಂಕ: ೩೦/೧೦/೨೦೨೧.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...