ಮಳೆಗಾಲ ಆರಂಭ; ರಸ್ತೆ ಬದಿಗಳಲ್ಲಿ ರೇನ್‌ಕೋಟ್‌ಗಳ ಭರ್ಜರಿ ವ್ಯಾಪಾರ

Source: so news | By MV Bhatkal | Published on 15th June 2019, 12:32 AM | Coastal News | Don't Miss |

ಭಟ್ಕಳ : ತಾಲೂಕಿನಾದ್ಯಂತ ಮಳೆಗಾಲ ಆರಂಭವಾಗಿದ್ದು ಮುಂಗಾರು ಮಳೆ ಪ್ರವೇಶ ಸ್ವಲ್ಪ ತಡವಾದರೂ ಸಹ ವಾಯುಭಾರ ಕುಸಿತದಿಂದ ವಿವಿಧೆಡೆ ಮಳೆ ಸುರಿಯುತ್ತಿದ್ದು. ಹೀಗಾಗಿ ಬಣ್ಣ ಬಣ್ಣದ ಕೊಡೆ ತಾಡಪತ್ರೆ ಪ್ಲಾಸ್ಟಿಕ್ ಹೊದಿಕೆ ಹಾಗೂ ರೇನ್ ಕೋರ್ಟ್ ಗಳಿಗೆ ಇದೀಗ ಭಾರಿ ಬೇಡಿಕೆ ಬಂದಿದ್ದು. ಭಟ್ಕಳದ  ಮಾರುಕಟ್ಟೆಗೆ ಹಾಗೂ ರಸ್ತೆ ಪಕ್ಕದಲ್ಲಿ  ಲಗ್ಗೆ ಇಟ್ಟಿದ್ದು ಭರ್ಜರಿ ವ್ಯಾಪಾರವಾಗುತ್ತಿದ್ದು ಜನರು ಖರೀದಿಯಲ್ಲಿ ಮಗ್ನರಾಗಿದ್ದಾರೆ

ತಾಲ್ಲೂಕಿನಾದ್ಯಂತ ಕಳೆದ 4-5  ದಿನಗಳಿಂದ ಆಗಾಗ ಬಿಸಿಲು ಸಹಿತ ಮಳೆಯಾಗುತ್ತಿದ್ದು. ಜನರಿಗೆ ಬೇಸಿಗೆ ಮತ್ತು ಮಳೆಗಾಲದ ಎರಡು ಅನುಭವವಾಗುತ್ತಿದ್ದ ಹಿನ್ನೆಲೆ ಮನೆಯ ಮೂಲೆಯಲ್ಲಿದ್ದ ಕೊಡೆಗಳೆಲ್ಲ ಈಗ ಹೊರ ಬರುತ್ತಿದ್ದು .ಕೆಲವರು ಸಣ್ಣಪುಟ್ಟ ರಿಪೇರಿ ಇರುವ ಕೊಡೆಗಳನ್ನು ಸರಿಪಡಿಸಿ ಕೊಂಡರೆ ಇನ್ನೂ ಕೆಲವರು ಹೊಸ ಕೊಡೆಗಳನ್ನು ಕೊಳ್ಳಲು ಮಾರುಕಟ್ಟೆಯ ಕಡೆ ಮುಖ ಮಾಡುತ್ತಿದ್ದಾರೆ. ತಾಲ್ಲೂಕಿನ ಪಟ್ಟಣ ವ್ಯಾಪ್ತಿಯಲ್ಲಿನ ಮಣ್ಕುಳಿ, ರಂಗಿನಕಟ್ಟೆ, ತೆಂಗಿನಗುಂಡಿ ಕ್ರಾಸ್, ಹಾಗೂ ಸಂಶುದ್ದೀನ ಸರ್ಕಲನ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ, ಹಳ್ಳಿ ವ್ಯಾಪ್ತಿಗೆ ಬಂದರೆ ಚಿಕ್ಕ ಪುಟ್ಟ ಕಿರಾಣಿ ಅಂಗಡಿಗಳಲ್ಲಿಯೂ ಸಹ ಮಾರಾಟ ಜೋರಾಗಿದೇ, ಮಳೆಯನ್ನು ಲೆಕ್ಕಿಸದೆ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಬಣ್ಣ ಬಣ್ಣದ ಕೊಡೆಗಳು ಜನರು ಆಕರ್ಷಿಸುತ್ತಿವೆ.  ಕೇವಲ ಕಡೆಗಳಲ್ಲಿ ರೇನ್ ಕೋರ್ಟ್ ಜರ್ಕಿನ್ ಹಾಗೂ ತಾಡಪಾತ್ರೆಯ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ಬಣ್ಣದ ಗಾತ್ರದ ಕೊಡೆಗಳು ಮಾರಾಟವಾಗುತ್ತಿದೆ 

ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳು ಮಳೆಯಿಂದ ರಕ್ಷಣೆ ಪಡೆಯಲು ಕೊಡೆ ರೇನ್ ಕೋರ್ಟ್ ಗಳನ್ನು ಪಡೆಯುವುದು ಅನಿವಾರ್ಯವಾಗಿದೆ.ಹಂಚಿನ ಮನೆಗಳಿಗೆ ಹೊದಿಕೆಗೆ ಕಿಟಕಿ ಬಾಗಿಲುಗಳಿಂದ ನೀರು ಬರದಂತೆ ತಡೆಯಲು ಉಪಯೋಗಿಸುವ ತಾಡಪತ್ರಿಗಳ ಖರೀದಿಯಲ್ಲಿ ಗ್ರಾಹಕರ ತೊಡಗಿದ್ದಾರೆ .

ಈ ವರ್ಷ ಮಂಡ್ಯ ಮೇಲುಕೋಟೆಯ ವ್ಯಾಪಾರಸ್ಥರು ಹೆಚ್ಚಾಗಿ ಕಂಡು ಬರುತ್ತಿದ್ದು. ಕಳೆದ ಬಾರಿಗಿಂತ ಈ ಬಾರಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗದೆ ಕೊಡೆಗಳು ಸಾಮಾನ್ಯವಾಗಿ 150 ರಿಂದ 250 ರವರೆಗೆ ಚಿಕ್ಕ ಮಕ್ಕಳ ಬಣ್ಣದ ಛತ್ರಿಗಳು 100 ರಿಂದ200 ರವರೆಗೆ ಲಭ್ಯವಾಗುತ್ತಿದೆ ಅದರಲ್ಲೂ ಮಡಚಿ ಬ್ಯಾಗಿ ನಲ್ಲಿ ಇಡಬಹುದಾದ ಹಾಗೂ ವಿವಿಧ ವಿನ್ಯಾಸವುಳ್ಳ ಛತ್ರಿಗಳಿಗೆ ಬೇಡಿಕೆ ಹೆಚ್ಚಿದೆ 300 ರಿಂದ 600 ರವರಿಗೆ ಸಿಗುತ್ತಿದ್ದು ರೇನ್ ಕೋರ್ಟ್ ಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...