ಲಖಿಂಪುರ ಖೇರಿ ಹಿಂಸಾಚಾರ ಖಂಡಿಸಿ ರೈತರಿಂದ 'ರೈಲ್ ರೋಕೊ

Source: VB | By I.G. Bhatkali | Published on 19th October 2021, 5:15 PM | National News |

ಹೊಸದಿಲ್ಲಿ: ಲಂಪುರ ಖೇರಿ ಹಿಂಸಾಚಾರ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ನಡೆಸಿದ ಗಂಟೆಗಳ 'ರೈಲ್ ರೋಕೋ' ಚಳವಳಿಯಿಂದ ಉತ್ತರ ರೈಲ್ವೆ ವಲಯದ 150 ಸ್ಥಳಗಳಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು. 60 ರೈಲುಗಳ ಸಂಚಾರಕ್ಕೆ ಅಡೆತಡೆಯುಂಟಾಯಿತು. ಎಂದು ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಆರ್‌ಪಿಒ) ತಿಳಿಸಿದ್ದಾರೆ.

ಪ್ರತಿಭಟನೆಯಿಂದಾಗಿ ಉತ್ತರ ಪಶ್ಚಿಮ ರೈಲ್ವೆ (ಎನ್ ಡಆರ್) ವಲಯದ ರಾಜಸ್ಥಾನ ಹಾಗೂ ಹರ್ಯಾಣದ ಕೆಲವು ವಿಭಾಗಗಳಲ್ಲಿ 18 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. 10 ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಒಂದು ರೈಲಿನ ಸಂಚಾರ ಮಾರ್ಗ ಬದಲಾಯಿಸಲಾಗಿದೆ.

ಚಂಡಿಗಡ-ಫಿರೋಝ್ ಪುರ ಎಕ್ಸ್‌ಪ್ರೆಸ್ ಸೇರಿದಂತೆ ಉತ್ತರ ರೈಲ್ವೆ ವಲಯದ ರೈಲುಗಳ ಸಂಚಾರಕ್ಕೆ ಕೂಡ ಅಡ್ಡಿ ಉಂಟಾ

ಗಿದೆ. ಈ ರೈಲು ಬೆಳಗ್ಗೆ 7 ಗಂಟೆಗೆ ಲುಧಿಯಾನದಿಂದ ಸಂಚಾರ ಆರಂಭಿಸಬೇಕಿತ್ತು. ಆದರೆ, ಫಿರೋಝ್ಪುರ-ಲುಧಿಯಾನ ವಿಭಾಗದಲ್ಲಿ ಪ್ರತಿಭಟನಾಕಾರರು ತಡೆ ಒಡ್ಡಿರುವುದರಿಂದ ಅದು ಸಂಚಾರ ಆರಂಭಿಸಲೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಹೇವಾಲ್ ಹಾಗೂ ರಾಜಪುರದ ಸಮೀಪ ಪ್ರತಿಭಟನಾಕಾರರು ರೈಲು ಹಳಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಕಾರಣಕ್ಕೆ ದಿಲ್ಲಿ ಅಮೃತಸರ ಶತಾಬ್ಲಿ ಎಕ್ಸ್‌ಪ್ರೆಸ್ ಅನ್ನು ಶಂಬು ರೈಲು ನಿಲ್ದಾಣದಲ್ಲಿ ನಿಲುಗಡೆಗೊಳಿಸಲಾಯಿತು. ಉತ್ತರ ರೈಲ್ವೆ ವಲಯದ 130 ಸ್ಥಳಗಳಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು. ಅಲ್ಲದೆ 50 ರೈಲುಗಳ ಸಂಚಾರಕ್ಕೆ ಅಡೆತಡೆ ಉಂಟಾಯಿತು ಎಂದು ಸಿಪಿಆರ್‌ಒ ತಿಳಿಸಿದ್ದಾರೆ.

ರೈತರ ಪ್ರತಿಭಟನೆ ರಾಜಸ್ಥಾನದ ಬಿಕೇನರ್ ವಿಭಾಗದ ಹನುಮಾನ್‌ಗಡ ಹಾಗೂ ಶ್ರೀಗಂಗಾ ನಗರದಲ್ಲಿ ರೈಲು ಹನುಮಾಡ ಹಾಗೂ ಎರು ನವನವೆಲ್ಲ ಸಿರ್ಸಾರೆವಾರಿ, ಲೊಹಾರು-ಹಿಸಾರ್, ಸೂರತ್‌ಗಡ-ಬಥಿಂಡಾ, ಸಿರ್ಸಾ-ಬಥಿಂಡಾ, ಹನುಮಾನ್‌ಡ-ಬಥಿಂಡಾ, ರೋಹಕ್ ಭಿವಾನಿ, ರವಾರಿ-ಸಾದಲ್ಲುರ, ಹಿಸ್ಪಾರ್-ಬಥಿಂಡಾ, ಹನುಮಾನ್ ಗಢ-ಸಾದುಲ್ವುರ ಹಾಗೂ ಶ್ರೀಗಂಗಾ ನಗರ್-ರೆವಾರಿ ವಲಯದ ನಡುವೆ ರೈಲು ಸಂಚಾರಕ್ಕೆ ಅಡ್ಡಿ ಉಂಟಾಯಿತು ಎಂದು ಎನ್ ಡಬ್ಯುಆರ್‌ನ ವಕ್ತಾರ ತಿಳಿಸಿದ್ದಾರೆ.

ಬಥಿಂಡಾ-ರೆವಾರಿ ವಿಶೇಷ ರೈಲು ಹಾಗೂ ಸಿರ್ಸಾ-ಲುಧಿಯಾನ ವಿಶೇಷ ರೈಲು ಸಂಚಾರವನ್ನು ಸೋಮವಾರ ರದ್ದುಗೊಳಿಸಲಾಯಿತು. ಅಹ್ಮದಾಬಾದ್-ಶ್ರೀ ಮಾತಾ ವೈಷ್ಟೋ ದೇವಿ ಕಾತ್ರಾ ವಿಶೇಷ ರೈಲಿನ ಸಮಯ ಬದಲಾಯಿಸಲಾಯಿತು. ಅಡ್ಡದಾಬಾದ್‌ನಿಂದ ಶನಿವಾರ ಹೊರಟ ರೈಲು ಮಾರ್ಗ ಬದಲಾಯಿಸಿ ರೆವಾರಿ-ದಿಲ್ಲಿ-ಪಠಾಣ್ ಕೋಟ್ ಮೂಲಕ ಶ್ರೀ ಮಾತಾ ವೈಷ್ಟೋ ದೇವಿ ಕಾತ್ರಾಗೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ. ಲಖಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ನ್ಯಾಯ ಸಿಗುವ ವರೆಗೆ ಪ್ರತಿಭಟನೆ ತೀವ್ರ ಗೊಳಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

Read These Next