ಉಗ್ರನೊಂದಿಗೆ ರಾಹುಲ್ ಫೋಟೊ; ವಿಕೃತ ಮನಸ್ಸಿನ ಕಿಡಿಗೇಡಿಗಳ ಕೃತ್ಯ;ಯೋಧರ ಬಲಿದಾನದಲ್ಲೋ ರಾಜಕೀಯ

Source: sonews | By Staff Correspondent | Published on 15th February 2019, 6:16 PM | National News |

ಹೊಸದಿಲ್ಲಿ: ನಿನ್ನೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಸೈನಿಕರು ಹುತಾತ್ಮರಾಗಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿರುವ ನಡುವೆಯೇ ಕೆಲವು ಕಿಡಿಗೇಡಿಗಳು ಈ ಘಟನೆಯನ್ನು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ.

“ಪುಲ್ವಾಮಾ ಉಗ್ರ ದಾಳಿ ನಡೆಸಿದ ಆದಿಲ್ ಅಹ್ಮದ್ ದಾರ್ ಜೊತೆ ರಾಹುಲ್ ಗಾಂಧಿ’ ಎನ್ನುವ ಫೋಟೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ಈ ಫೋಟೊವನ್ನು ಹಲವರು ಶೇರ್ ಮಾಡಿದ್ದಾರೆ.

ಸೈನಿಕರಿದ್ದ ಬಸ್ ಮೇಲೆ ದಾಳಿ ನಡೆಸಿದ್ದ ದಾರ್ ವರ್ಷದ ಹಿಂದೆಯಷ್ಟೇ ಉಗ್ರ ಸಂಘಟನೆಗೆ ಸೇರಿದ್ದ. ಸುಮಾರು 350 ಕೆ.ಜಿ. ಸ್ಫೋಟಕಗಳಿದ್ದ ಕಾರನ್ನು ಬಸ್ ಢಿಕ್ಕಿ ಹೊಡೆಸಿ ದಾರ್ ಈ ದಾಳಿ ನಡೆಸಿದ್ದ. ಇದೀಗ ಇದೇ ಉಗ್ರನೊಂದಿಗೆ ರಾಹುಲ್ ಗಾಂಧಿಯ ಫೋಟೊ ಎನ್ನುವ ಹಸಿ ಸುಳ್ಳಿನೊಂದಿಗೆ ಫೋಟೊವನ್ನು ವೈರಲ್ ಮಾಡಲಾಗುತ್ತಿದೆ.

ಫೋಟೊಶಾಪ್ ನಲ್ಲಿ ತಿರುಚಿದ ಫೋಟೊ

ಅಸಲಿ ಫೋಟೊ:

ಆದರೆ ಈ ಫೋಟೊ ಫೋಟೊಶಾಪ್ ನಲ್ಲಿ ತಿರುಚಿದ್ದಾಗಿದೆ. ಯೋಧರ ಬಲಿದಾನದಲ್ಲೂ ರಾಜಕೀಯ ಮಾಡುವ ಕಿಡಿಗೇಡಿಗಳು ಇನ್ನೂ ನಮ್ಮ ನಡುವೆ ಇದ್ದಾರೆ. ಹಾಗಾಗಿ ಯಾವುದೇ ಆರೋಪಗಳನ್ನು ನಂಬುವ, ಶೇರ್ ಮಾಡುವ ಮುನ್ನ ಆಲೋಚಿಸುವುದು ಒಳಿತು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...