ರಫೀಲ್ ಡೀಲ್ ಗೋಲ್ ಮಾಲ್, ಭಾರತೀಯ ಮಧ್ಯವರ್ತಿಗೆ 1.1 ಮಿ.ಯುರೋ ಪಾವತಿ, ಫ್ರೆಂಚ್ ಮಾಧ್ಯಮದ ಸ್ಫೋಟಕ ವರದಿ,

Source: VB | By S O News | Published on 6th April 2021, 12:05 PM | National News |

ಹೊಸದಿಲ್ಲಿ: ಭಾರತಕ್ಕೆ 36 ರಫೇಲ್ ಯುದ್ಧ ವಿಮಾನಗಳ ಪೂರೈಕೆಗಾಗಿ 2016ರಲ್ಲಿ ಒಪ್ಪಂದವನ್ನು ಮಾಡಿಕೊಂಡಿದ್ದ ಫ್ರಾನ್ಸ್‌ನ ಪ್ರಮುಖ ವೈಮಾನಿಕ ಕಂಪೆನಿ ಡಸಾಲ್ಟ್ ಅದಕ್ಕಾಗಿ ಭಾರತೀಯ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ(ಸುಮಾರು 9.50 ಕೋ.ರೂ.)ಗಳನ್ನು ಪಾವತಿಸಿತ್ತು ಎಂದು ಆ ದೇಶದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಏಜೆನ್ಸ್ ಫ್ರಾಂಕೈಸ್ ಆ್ಯಂಟಿಕರಷ್ಯನ್ (ಎಎಫ್‌ಎ)ನ ತನಿಖೆಯನ್ನು ಆಧರಿಸಿ ಫ್ರೆಂಚ್ ಆನ್‌ಲೈನ್ ಮಾಧ್ಯಮ 'ಮೀಡಿಯಾಪಾರ್ಟ್' ಆರೋಪಿಸಿದೆ.

ಮಧ್ಯವರ್ತಿ, ಡೆಪ್ಸಿಸ್ ಸೊಲ್ಯೂಶನ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಸುಶೇನ್ ಗುಪ್ತಾ ಇನ್ನೊಂದು ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಅಕ್ರಮ ಹಣ ವಹಿವಾಟು ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ಮೀಡಿಯಾಪಾರ್ಟ್ ತನ್ನ ವರದಿಯಲ್ಲಿ ಹೇಳಿದೆ.

ರಫೇಲ್ ಯುದ್ಧವಿಮಾನಗಳ 50 ಬೃಹತ್ ಪ್ರತಿಕೃತಿ ಮಾದರಿಗಳ ತಯಾರಿಕೆಗಾಗಿ ಈ

ಮೋದಿ ಉತ್ತರಕ್ಕೆ ಕಾಂಗ್ರೆಸ್ ಆಗ್ರಹ

ರಫೇಲ್ ಯುದ್ಧವಿಮಾನಗಳ ಒಪ್ಪಂದ ಕುರಿತು ಸಮಗ್ರ ತನಿಖೆ ನಡೆಯಬೇಕೆಂದು ಹೇಳಿರುವ ಕಾಂಗ್ರೆಸ್,ಡಸಾಲ್ಟ್ ಮಧ್ಯವರ್ತಿಗೆ 1.1 ಮಿ.ಯುರೋ ಪಾವತಿಸಿತ್ತು ಎಂಬ ಫ್ರೆಂಚ್ ಮಾಧ್ಯಮದ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸಬೇಕು ಎಂದು ಆಗ್ರಹಿಸಿದೆ. ರಫೇಲ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ರಾಹುಲ್ ಗಾಂಧಿಯವರ ಪುನರಪಿ ಆರೋಪಗಳು ನಿಜವಾಗಿದ್ದವು ಎನ್ನುವುದನ್ನು ಮೀಡಿಯಾಪಾರ್ಟ್ ವರದಿಯು ಸಾಬೀತುಗೊಳಿಸಿದೆ ಎಂದು ಕಾಂಗ್ರೆಸ್‌ನ ಮುಖ್ಯವಕ್ತಾರ ರಣದೀಪ್ ಸುರ್ಜೆವಾಲಾ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೊತ್ತವನ್ನು ಪಾವತಿಸಲಾಗಿದೆ ಎಂದು ಡಸಾಲ್ಟ್ ತಿಳಿಸಿದೆ, ಆದರೆ ಈ ಮಾದರಿಗಳು ತಯಾರಾಗಿದ್ದವು ಎನ್ನುವುದಕ್ಕೆ ಯಾವುದೇ ಪುರಾವೆಯನ್ನು ಅದು ಎಎಫ್‌ಎ ಪರೀಕ್ಷಕರಿಗೆ ನೀಡಿಲ್ಲ ಎಂದು ವರದಿಯು ತಿಳಿಸಿದೆ.

ಎಎಫ್‌ಎ ಡಸಾಲ್ಟ್ನ 2017ನೇ ಸಾಲಿನ ಲೆಕ್ಕ ಪರಿಶೋಧನೆ ನಡೆಸಿದ ಸಂದರ್ಭದಲ್ಲಿ ಈ ವಿಷಯವು ಬೆಳಕಿಗೆ ಬಂದಿತ್ತು, ಆದರೆ ಎಲ್ಲ ಸ್ಪಷ್ಟ ತರ್ಕಗಳಿಗೆ ವಿರುದ್ದವಾಗಿ' ಎಎಫ್‌ಎ ಪ್ರಕರಣವನ್ನು ಪ್ರಾಸಿಕ್ಯೂಟರ್‌ಗಳಿಗೆ ವಹಿಸದಿರಲು ನಿರ್ಧರಿಸಿತ್ತು ಎಂದು ಮೀಡಿಯಾಪಾರ್ಟ್ ಹೇಳಿದೆ.

'ಗ್ರಾಹಕರಿಗೆ ಉಡುಗೊರೆಗಳು' ಶೀರ್ಷಿಕೆಯಡಿ ಇಷ್ಟೊಂದು ದೊಡ್ಡ ಮೊತ್ತವನ್ನು ನಮೂದಿಸಿದ್ದು ಪರೀಕ್ಷಕರ ಹುಬ್ಬೇರುವಂತೆ ಮಾಡಿತ್ತು. ಉಡುಗೊರೆಗಾಗಿ ಇದು ನಿಜಕ್ಕೂ ಬೃಹತ್ ಮೊತ್ತವಾಗಿತ್ತು. ಫ್ರೆಂಚ್ ಕಾನೂನುಗಳು ಉಡುಗೊರೆಗಳಿಗೆ ನಿಖರವಾದ ಮಿತಿಯನ್ನು ನಿಗದಿಗೊಳಿಸಿಲ್ಲವಾದರೂ ನೂರಾರು ಯುರೋ ಮೌಲ್ಯದ ವಾಚ್ ಅಥವಾ ಪಾರ್ಟಿಯನ್ನು ನೀಡುವುದು ಭ್ರಷ್ಟಾಚಾರಕ್ಕೆ ಆರೋಪ ಹೊರಿಸಲು ಸಾಕು
ಎಂದು ತನ್ನ ವರದಿಯಲ್ಲಿ ಎಎಫ್ಎ ಹೇಳಿದೆ.

ತನ್ನ ಈ ಉಡುಗೊರೆಯನ್ನು ಸಮರ್ಥಿಸಿಕೊಳ್ಳಲು ಡಸಾಲ್ಟ್ ಕಂಪನಿಯು ಡೆಪ್ಸಿಸ್ ಸೊಲ್ಯೂಶನ್ಸ್‌ನ 2017,ಮಾ.30ರ ಪ್ರೊಫಾರ್ಮಾ ಇನ್ವಾಯ್ಸ್ ಅಥವಾ ಮಾದರಿ ಬೆಲೆಪಟ್ಟಿಯನ್ನು ಒದಗಿಸಿತ್ತು ಎಂದಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ವಿವಿಐಪಿ ಹೆಲಿಕಾಪ್ಟರ್ ಗಳ ಖರೀದಿಗಾಗಿ ಒಪ್ಪಂದದಲ್ಲಿ ಭಾರತದಲ್ಲಿ ಲಂಚ ಪಾವತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಗುಪ್ತಾರ ತನಿಖೆ ನಡೆಸುತ್ತಿವೆ. ಡೆಪ್ಸಿಸ್ ಭಾರತದಲ್ಲಿ ಡಸಾಲ್ಟ್ ನ ಉಪಗುತ್ತಿಗೆದಾರ ಸಂಸ್ಥೆಗಳಲ್ಲೊಂದಾಗಿದೆ.
 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...