ಕಲಬುರಗಿ: ಉತ್ತಮ ಅರೋಗ್ಯಕ್ಕೆ ಓಟ ಅವಶ್ಯಕ -ಅಲೋಕ ಕುಮಾರ

Source: Agency | By S O News | Published on 16th February 2021, 5:56 PM | Sports News | State News |

ಕಲಬುರಗಿ: ಇಂದಿನ ಯಾಂತ್ರಿಕ ಜೀವನದಲ್ಲಿ ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಓಟ ಅವಶ್ಯಕವಾಗಿದೆ ಎಂದು ಕೆ.ಎಸ್.ಆರ್.ಪಿ.ಯ ಎ.ಡಿ.ಜಿ.ಪಿ. ಅಲೋಕ ಕುಮಾರ ಹೇಳಿದರು.

ಮಂಗಳವಾರ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಕಲಬುರಗಿಯ ಕೆ.ಎಸ್.ಆರ್.ಪಿ. 6ನೇ ಘಟಕದಿಂದ ಆಯೋಜಿಸಿದ ಅರೋಗ್ಯಕ್ಕಾಗಿ ಓಟ (ರನ್ ಫಾರ್ ಫಿಟನೆಸ್)ಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಕನಸನ್ನು ನನಸು ಮಾಡುವುದಕ್ಕಾಗಿ ಅರೋಗ್ಯಕ್ಕಾಗಿ ಓಟ (ರನ್ ಫಾರ್ ಫಿಟ್ನೆಸ್)ದಂತಹ ಯೋಜನೆಗಳನ್ನು ಏರ್ಪಡಿಸಲಾಗಿದೆ. ಅದೇ ರೀತಿ ಫಿಟ್ ಕಲಬುರಗಿ, ಫಿಟ್ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆ.ಎಸ್.ಆರ್.ಪಿ.ಯ 40 ವರ್ಷದೊಳಗಿನ ಸಿಬ್ಬಂದಿಗಳು ಕಡ್ಡಾಯವಾಗಿ ಪ್ರತಿನಿತ್ಯ ಕನಿಷ್ಠ 5ಕಿ.ಮೀ ವರೆಗೂ ಓಡಲೇಬೇಕು. ಇದರಿಂದ ದೈಹಿಕ ಅರೋಗ್ಯ ಕಾಪಾಡಿಕೊಳ್ಳುವುದಲ್ಲದೆ ನಾಡು ಮತ್ತು ದೇಶ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದರು.

ಕೋವಿಡ್ ಕಾಯಿಲೆಯ ಮಾನಸಿಕದಿಂದ ಬಹುತೇಕ ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದರಿಂದ ಹೊರಬರಬೇಕೆಂದರೆ ಅರೋಗ್ಯವಂತ ಸಮಾಜದ ನಿರ್ಮಾಣ ಅನಿವಾರ್ಯ. ಪೆÇಲೀಸರು ಅಲ್ಲದೆ ಸಾರ್ವಜನಿಕರು ಸಹ ಪ್ರತಿನಿತ್ಯ ಓಟ ಮಾಡಲೇಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ರನ್ ಫಾರ್ ಫಿಟ್‍ನೆಸ್ ಕಾರ್ಯಕ್ರಮ ಪ್ರತಿ ಜಿಲ್ಲೆಯಲ್ಲೂ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಈ ಓಟದಲ್ಲಿ ಕೆ.ಎಸ್.ಆರ್.ಪಿಯ 6ನೇ ಪಡೆ, ಕಲಬುರಗಿ ನಗರ ಪೆÇಲೀಸ್, ಕಲಬುರಗಿ ಜಿಲ್ಲಾ ಪೆÇಲೀಸ್, ಎನ್.ಎಸ್.ಎಸ್ ಘಟಕ, ಅಗ್ನಿ ಶಾಮಕಾದಳ, ಕ್ರೀಡಾ ಆಟಗಾರರು, ಎಸ್.ಬಿ.ಐ ಬ್ಯಾಂಕಿನ ಸಿಬ್ಬಂದಿಗಳು, ದಾನಮ್ಮ ಪೆಟ್ರೋಲ್ ಬಂಕ್, ಬಿ. ಎನ್.ಆರ್.ಬ್ರಿಕ್ಸ್ ಸಿಬ್ಬಂದಿಗಳು ಸೇರಿ ಸುಮಾರು 800 ಜನ ಭಾಗವಹಿಸಿದರು.

ಈ ಸಂದರ್ಭದಲ್ಲಿ  ಡಿ.ಸಿ.ಪಿ. ಕಿಶೋರ್ ಬಾಬು, ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪ್ರಸನ್ನ ದೇಸಾಯಿ, ಕಲಬುರಗಿಯ ಕೆ.ಎಸ್.ಆರ್.ಪಿ. 6ನೇ ಘಟಕದ ಕಮಾಂಡೆಂಟ್ ಬಸವರಾಜ ಜಿಳ್ಳೆ, ಎನ್.ಎಸ್.ಎಸ್ ಘಟಕದ ಮುಖ್ಯಸ್ಥ ಎಸ್.ಕೆ ತಿವಾರಿ ಹಾಗೂ ವಿವಿಧ ಜಿಲ್ಲೆಯ ಕೆ.ಎಸ್.ಆರ್.ಪಿ ಕಮಾಂಡೆಂಟ್‍ಗಳಾದ ರಮೇಶ ಬೋರಗಾವಿ, ಎಸ್.ಡಿ. ಪಾಟೀಲ್, ರಾಮಕೃಷ್ಣ ಮುದ್ದೇಪಲ್ಲಿ, ಪ್ರವೀಣ ಆಳ್ವ, ಮಹಾದೇವ ಪ್ರಸಾದ್, ಹಮ್ಜಾ ಹುಸೇನ್, ಸಹಾಯಕ ಕಮಾಂಡಂಟ್ ನಿಸಾರ್ ಅಹ್ಮದ್, ವೈಜನಾಥ ಚನ್ನಬಸವ, ಎಸ್.ಬಿ.ಐ. ಬ್ಯಾಂಕಿನ ಎಂ.ಡಿ. ಸೌರಭ್ ಸುಕುಮಾರ್, ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜೋಬಿ ಜೋಸ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಸಿಂಪಿ ಸೇರಿದಂತೆ ವಿವಿಧ ವಿಭಾಗದ ಪೆÇಲೀಸ್ ಅಧಿಕಾರಿಗಳು-ಸಿಬ್ಬಂದಿಗಳು ಭಾಗಿಯಾಗಿದರು.

Read These Next

ಮೂಡುಬಿದಿರೆ:  ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್: ಭಾರತೀಯ ರೈಲ್ವೇ ಹಾಗೂ ಕೆನರಾ ಬ್ಯಾಂಕ್ ಮುನ್ನಡೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್‍ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ನಡೆಯುತ್ತಿರುವ 67ನೇ ...

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...

ನಾಳೆ ಗೋಡ್ಸೆಯನ್ನು ಪಠ್ಯದಲ್ಲಿ ಸೇರಿಸಬೇಕು ಅಂದರೆ ಏನು ಮಾಡಬೇಕು?: ಸಿದ್ದರಾಮಯ್ಯ

ಪಠ್ಯ ಪುಸ್ತಕವು ಧರ್ಮ ನಿರಪೇಕ್ಷತೆ, ವೈಚಾರಿಕತೆ, ವೈಜ್ಞಾನಿಕತೆಯನ್ನು ವಿದ್ಯಾರ್ಥಿ ಗಳಲ್ಲಿ ಮೂಡುವಂತೆ ಮಾಡಬೇಕು. ವಿದ್ಯಾರ್ಥಿಗಳ ...

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್ ಭೇಟಿ:ಪರಿಶೀಲನೆ

ಬಳ್ಳಾರಿ : ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿರುವ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ...

ಪರಿಷ್ಕೃತ ಪಠ್ಯಪುಸ್ತಕಕ್ಕೆ ತೀವ್ರ ವಿರೋಧ; #RejectRSSTextBooks #RejectBrahmin TextBooks ಅಭಿಯಾನ; ಸಚಿವ ಬಿ.ಸಿ.ನಾಗೇಶ್ ರಾಜೀನಾಮೆಗೂ ಒತ್ತಾಯ

;ರಾಜ್ಯ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕಗಳಲ್ಲಿ ಬ್ರಾಹ್ಮಣೀಕರಣ, ಆರೆಸ್ಸೆಸ್ ಅಜೆಂಡಾ, ನಾಡಿನ ಸಮಾಜ ಸುಧಾರಕರ, ಚಿಂತಕರ ವಿಷಯಗಳನ್ನು ...