ಹೊರರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಮೀನುಗಾರ ಕಾರ್ಮಿಕರಿಗೆ ದೋಣಿಗಳಲ್ಲಿ ಕ್ವಾರಂಟೈನ್ : ಕೋಟಾ ಶ್ರೀನಿವಾಸ ಪೂಜಾರಿ

Source: The New Indian Express | Published on 12th August 2020, 12:51 AM | Coastal News | Don't Miss |

ಮಂಗಳೂರು: ಸುಮಾರು ಐದು ತಿಂಗಳ ನಂತರ  ಸೆಪ್ಟೆಂಬರ್ 1 ರಂದು ಕರ್ನಾಟಕ ಕರಾವಳಿಯಲ್ಲಿ ಆಳವಾದ ಸಮುದ್ರ ಮೀನುಗಾರಿಕೆ ಪ್ರಾರಂಭವಾಗುವ ಸಾಧ್ಯತೆಯಿದೆ.
ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ ರಾಜ್ಯದ ಹೊರಗಿನಿಂದ ಬರುವ ಮೀನುಗಾರಿಕೆ ಕಾರ್ಮಿಕರಿಗೆ ಉಚಿತವಾಗು ಕೋವಿಡ್ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ  ಪೂಜಾರಿ ಹೇಳಿದರು.
ಅಲ್ಲದೆ ಯಾರೇ ಆದರೂ ಅನ್ಯರಾಜ್ಯದಿಂದ ಬಂದ ಮೀನುಗಾರಿಕೆ ಕಾರ್ಮಿಕರು ಸಮುದ್ರಕ್ಕೆ ಇಳಿಯುವ ಮುನ್ನ  ಮೀನುಗಾರಿಕಾ ದೋಣಿಗಳ ಒಳಗೆ 14 ದಿನಗಳ ಕ್ವಾರಂಟೈನ್ ಮಾಡಬೇಕಿದೆ ಎಂದು ಸಚಿವರು ಹೇಳಿದ್ದಾರೆ.
ಕೋವಿಡ್ -19 ಏಕಾಏಕಿ ನಂತರ ಮಾರ್ಚ್ ತಿಂಗಳಲ್ಲಿ ರಾಜ್ಯದಲ್ಲಿ ಆಳ ಸಮುದ್ರದ ಮೀನುಗಾರಿಕೆ ಚಟುವಟಿಕೆ ಸ್ಥಗಿತವಾಗಿತ್ತು, ಇದೀಗ ಆಗಸ್ಟ್ 1 ರಂದು ಪುನರಾರಂಭಿಸಲು ನಿರ್ಧರಿಸಲಾಗಿತ್ತಾದರೂ ಅಧಿಕಾರಿಗಳು ಮತ್ತು ದೋಣಿ ಮಾಲೀಕರು ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದಾಗಿ ಅದನ್ನು ಮುಂದೂಡಲು ನಿರ್ಧರಿಸಿದರು ಮತ್ತು ರಾಜ್ಯಕ್ಕೆ ಹೊರರಾಜ್ಯದಿಂದ ಕಾರ್ಮಿಕರು ಆಗಮಿಸಿಲ್ಲವಾದ ಕಾರಣ ಮೀನುಗಾರಿಕೆಯನ್ನು ಮುಂದೂಡಲಾಗಿತ್ತು, 
ಮೀನುಗಾರಿಕೆಯಲ್ಲಿ ಭಾಗಿಯಾಗಿರುವ ಶೇ .80 ಕ್ಕಿಂತ ಹೆಚ್ಚು ಕಾರ್ಮಿಕರು ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳವರು.
ಸಭೆಯಲ್ಲಿ ಹಾಜರಿದ್ದ ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ನಿತಿನ್ ಕುಮಾರ್ ಮಾತನಾಡಿ  ರೈಲು ಕಾರ್ಯಾಚರಣೆಗಳು ಇನ್ನೂ ಪೂರ್ಣವಾಗಿ ಪುನರಾರಂಭಗೊಳ್ಳದ ಕಾರಣ ದೋಣಿ ಮಾಲೀಕರು ರಾಜ್ಯದ ಹೊರಗಿನ ಮೀನುಗಾರರನ್ನು ಬಸ್ ಮತ್ತು ಟೆಂಪೊಗಳಲ್ಲಿ ಕರೆತರಲು ವ್ಯವಸ್ಥೆ ಮಾಡುತ್ತಾರೆ. ಮಂಗಳೂರಿನಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿಗೆ ಇಂತಹ ವ್ಯವಸ್ಥೆ ಮಾಡಲು ಬೇರೆ ಸೌಲಭ್ಯವಿಲ್ಲದ ಕಾರಣ ದೋಣಿಗಳಲ್ಲಿ ಕಾರ್ಮಿಕರನ್ನುಕ್ವಾರಂಟೈನ್ ನಲ್ಲಿರಿಸಲು ತೀರ್ಮಾನಿಸಲಾಗಿದೆ,  “ಅವರು ರಾಜ್ಯಕ್ಕೆ ಹಂತಹಂತವಾಗಿ ಆಗಮಿಸುತ್ತಾರೆ ಮತ್ತು ಒಮ್ಮೆಗೇ  ಇದು ಸಾಧ್ಯವಿಲ್ಲ.  ಹೇಗಾದರೂ ನಾವು ದೋಣಿ ಯಲ್ಲೇ ಕ್ವಾರಂಟೈನ್ ನಿರ್ವಹಿಸಬಹುದು, ”ಎಂದರು.
ಮೀನುಗಾರಿಕೆ ಬಂದರನ್ನು ಪ್ರತಿದಿನವೂ ಸ್ವಚ್ಚಗೊಳಿಸುವುದು ಬಂದರಿನಲ್ಲಿ ಮೀನುಗಾರರು ಮತ್ತು ಇತರ ಜನರ ಥರ್ಮಲ್ ಟೆಸ್ಟ್ ಗೆ ಸಿದ್ದತೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ

Read These Next

ಲಾಕ್ ಡೌನ್ ಆಗಿ ನಷ್ಟ ಅನುಭವಿಸಿದ್ದೇವೆ. ಮಾನವೀಯ ನೆಲೆಯಲ್ಲಿ ಅವಕಾಶ ಮಾಡಿಕೊಡಲು ಭಟ್ಕಳ ವ್ಯಾಪಾರಸ್ಥರ ಮನವಿ.

ಭಟ್ಕಳ : ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಅಂಗಡಿಕಾರರು‌ ಲಾಕ್ ಡೌನ್ ಅವಧಿಯಲ್ಲಿ ನಷ್ಟ ಅನುಭವಿಸಿದ್ದು, ...

ಶಿರಸಿ: ‘ರಾಜ್ಯ ಮಟ್ಟದ ಜನ ಸಂಘಟನೆಗಳ ಪರ್ಯಾಯ ಜನತಾ ಅಧಿವೇಶನ’ದಲ್ಲಿ ಶಿರಸಿ ರವೀಂದ್ರ ನಾಯ್ಕ ರಿಂದ ವಿಷಯ ಮಂಡನೆ

ಶಿರಸಿ: ರಾಜ್ಯದ ಹಲವಾರು ಜನಪರ ಸಂಘಟನೆಗಳ ಒಕ್ಕೂಟ ಆಶ್ರಯದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕ ಆವರಣದಲ್ಲಿ ಜರಗುತ್ತಿರುವ 2 ನೇ ದಿನದ ...