ಭೂಮಿ ಸಮಸ್ಯೆಯ ಒಗಟುಗಳು

Source: sonews | By Staff Correspondent | Published on 24th October 2018, 10:43 PM | State News | National News | Special Report | Don't Miss |

ದೇಶದ ಕೃಷಿಯಲ್ಲಿನ ಮೂಲಭೂತ ತೊಡಕುಗಳು ಕೃಷಿ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತಿವೆ ಎಂಬುದನ್ನು ೨೦೧೫-೧೬ನೇ ಸಾಲಿನ ಕೃಷಿ ಸೆನ್ಸಸ್ ಸಾಬೀತುಗೊಳಿಸಿದೆ.

ದೇಶದ ೨೦೧೫-೧೬ನೇ ಸಾಲಿನ ಕೃಷಿ ಸೆನ್ಸಸ್ಸಿನ ತಾತ್ಕಾಲಿಕ ಫಲಿತಾಂಶಗಳು ಬಹಿರಂಗವಾಗಿವೆ. ಅವು ಭೂ-ವಿಭಜೀಕರಣದ ಪ್ರಕ್ರಿಯೆಯು ನಿಲ್ಲದೆ ಮುಂದುವರೆಯುತ್ತಿರುವುದನ್ನು ಮತ್ತು ಭೂ ಹಿಡುವಳಿಗಳು ವರ್ಗ ಮತ್ತು ಪ್ರಮಾಣಾನುಸಾರವಾಗಿ ಧೃವೀಕರಣಗೊಳ್ಳುತ್ತಲೇ ಸಾಗಿರುವುದನ್ನು ಧೃಢಪಡಿಸಿವೆ. ಭೂ ಹಿಡುವಳಿಗಳ ಗಾತ್ರಗಳೇ ಕೃಷಿಯಿಂದ ಬರುವ ಆದಾಯದ ಸ್ಥಿರತೆಯನ್ನು ತೀರ್ಮಾನಿಸುವ ನಿರ್ಣಾಯಕ ಅಂಶವಾದ್ದರಿಂದ ಕೃಷಿ ಸೆನ್ಸಸ್ ನೀಡಿರುವ ತಾತ್ಕಾಲಿಕ ಫಲಿತಾಂಶಗಳು ಕೃಷಿಯು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಗ್ರಾಮೀಣ ಭಾರತದಾದ್ಯಂತ ಮಡುಗಟ್ಟುತ್ತಿರುವ ಅಸಮಾಧಾನಗಳಿಗೆ ಪುರಾವೆಯನ್ನು ಒದಗಿಸುತ್ತಿವೆ.

 

ಕೃಷಿ ಸೆನ್ಸಸ್ಸಿನ ಪ್ರಕಾರ ಭಾರತದಲ್ಲಿ ಕೃಷಿಗೆ ಬಳಕೆಯಾಗುತ್ತಿದ್ದ ಭೂಮಿಯ ಪ್ರಮಾಣ ೨೦೧೦-೧೧ರಲ್ಲಿ ೧೫೯.೫೯ ದಶಲಕ್ಷ ಹೆಕ್ಟೇರುಗಳಷ್ಟಿದ್ದದ್ದು ೨೦೧೫-೧೬ರಲ್ಲಿ ೧೫೭.೪೪ ದಶಲಕ್ಷ ಹೆಕ್ಟೇರುಗಳಿಗೆ ಇಳಿದಿದೆ. ಆದರೆ ಅದೇ ಸಮಯದಲ್ಲಿ ಉಳುಮೆ ಮಾಡುತ್ತಿರುವ ಹಿಡುವಳಿಗಳ ಸಂಖ್ಯೆ ಮಾತ್ರ ಶೇ..೩೩ರಷ್ಟು ಹೆಚ್ಚಾಗಿದೆ. ೨೦೧೦-೧೧ರಲ್ಲಿ ೧೩೮ ದಶಲಕ್ಷಗಳಿದ್ದ ಹಿಡುವಳಿಗಳ ಸಂಖ್ಯೆ ೨೦೧೫-೧೬ರಲ್ಲಿ ೧೪೬ ದಶಲಕ್ಷಗಳಿಗೇರಿದೆ. ಹೀಗಾಗಿ ಅವಧಿಯಲ್ಲಿ ಭಾರತದಲ್ಲಿ ಸರಾಸರಿ ಹಿಡುವಳಿಯ ಗಾತ್ರ .೧೫ ಹೆಕ್ಟೇರಿನಿಂದ .೦೮ ಹೆಕ್ಟೇರಿಗಿಳಿದಿದೆ. ಇದು ಕೃಷಿ ಭೂಮಿಯ ಮೇಲೆ ಕೃಷಿ ಆಧಾರಿತ ಜನಸಂಖ್ಯೆಯ ಹೆಚ್ಚುತ್ತಿರುವ ಒತ್ತಡವನ್ನಷ್ಟೇ ಸೂಚಿಸುತ್ತಿದೆ. ಕೃಷಿ ಉತ್ಪಾದನೆಯಲ್ಲಿ ಇದೊಂದು ಮುಖ್ಯವಾದ ಅಂಶವಾಗಿದ್ದು ಅದೂ ಕೂಡ ಸೀಮಿತವಾಗಿ ಸರಬರಾಜಾಗುತ್ತಿದೆ.

 

ಸೆನ್ಸಸ್ಸಿನ ಅಂಕಿಅಂಶಗಳು ಭೂ ವಿಭಜೀಕರಣದ ಗತಿಯನ್ನು ಮತ್ತು ವರ್ಗವಾರು ಹಿಡುವಳಿಯ ಗಾತ್ರವು ಧೃವೀಕರಣಗೊಳ್ಳುತ್ತಲೇ ಸಾಗಿರುವ ವಿದ್ಯಮಾನದ ಮೇಲೆ ಬೆಳಕು ಚೆಲ್ಲುತ್ತದೆ. ೨೦೧೧ರಲ್ಲಿ ನಡೆದ ಕೃಷಿ ಸೆನ್ಸಸ್ಸಿನ ತರುವಾಯ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಗಳ ಪ್ರಮಾಣ ಹೆಚ್ಚಾಗಿರುವುದನ್ನು ಅದು ದಾಖಲಿಸುತ್ತದೆ. ೨೦೧೫-೧೬ರ ಸೆನ್ಸಸ್ಸಿನ ಪ್ರಕಾರ ದೇಶದ ಶೇ.೮೬.೨೧ರಷ್ಟು ಹಿಡುವಳಿಗಳು ಸಣ್ಣ ಅಥವಾ ಅತಿ ಸಣ್ಣ ಹಿಡುವಳಿಗಳು(ಅಂದರೆ - ಹೆಕ್ಟೇರಿನಷ್ಟು ಗಾತ್ರದವು). ಆದರೆ ಒಟ್ಟಾರೆ ಉಳುಮೆ ಮಾಡುತ್ತಿರುವ ಭೂಮಿಯಲ್ಲಿ ಹಿಡುವಳಿದಾರರ ಪಾಲು ಮಾತ್ರ ಕೇವಲ ಶೇ.೪೭.೩೪ರಷ್ಟಾಗಿದೆ. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ ಸರಾಸರಿ ಹಿಡುವಳಿ ಕೇವಲ . ಹೆಕ್ಟೇರು ಮಾತ್ರ. ಇಂಥಾ ಹಿಡುವಳಿಗಳ ಸಂಖ್ಯೆ ಬಡರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಹೆಚ್ಚಿದೆ. ರಿಂದ ಹೆಕ್ಟೇರಿನಷ್ಟು ಗಾತ್ರದ ಅರೆ ಮಧ್ಯಮ ಹಿಡುವಳಿಗಳ ಸಂಖ್ಯೆ ಒಟ್ಟಾರೆ ಹಿಡುವಳಿಗಳ ಶೇ. .೪೫ ರಷ್ಟಿದ್ದು ಉಳುಮೆ ಮಾಡುತ್ತಿರುವ ಭೂಮಿಯಲ್ಲಿ ವರ್ಗದ ಪಾಲು ಶೇ.೨೩.೬೫ರಷ್ಟಿದೆ. -೧೦ ಹೆಕ್ಟೇರಿನಷ್ಟು ಹಿಡುವಳಿ ಹೊಂದಿರುವವರ ಸಂಖ್ಯೆ ಶೇ..೭೬ರಷ್ಟಿದ್ದು ಒಟ್ಟಾರೆ ಉಳುಮೆ ಮಾಡುತ್ತಿರುವ ಭೂಮಿಯಲ್ಲಿ ಶೇ.೧೯.೯೬ ಭೂಮಿ ವರ್ಗಕ್ಕೆ ಸೇರಿದೆ. ೧೦ ಹೆಕ್ಟೇರಿಗಿಂತ ಹೆಚ್ಚಿನ ಗಾತ್ರದ ಹಿಡುವಳಿ ಹೊಂದಿರುವವರ ಒಟ್ಟಾರೆ ಹಿಡುವಳಿಗಳಲ್ಲಿ ಕೇವಲ ಶೇ..೫೭ರಷ್ಟಿದ್ದರೂ ವರ್ಗ ಶೇ..೦೪ರಷ್ಟು ಪ್ರಮಾಣದ ಉಳುಮೆಯೋಗ್ಯ ಭೂಮಿಯನ್ನು ಹೊಂದಿವೆ. ಸೆನ್ಸಸ್ಸಿನ ಪ್ರಕಾರ ಪರಿಶಿಷ್ಟ ಜಾತಿಗಳು ಲಭ್ಯವಿರುವ ಉಳುವ ಭೂಮಿಯ ಶೇ. ೯ರಷ್ಟು ಭೂಮಿಯನ್ನು ಮಾತ್ರ ಹೊಂದಿದ್ದು ಅವರ ಸರಾಸರಿ ಹಿಡುವಳಿಯ ಗಾತ್ರ  ಕೇವಲ .೭೮ ಹೆಕ್ಟೇರು ಮಾತ್ರ. ಹಾಗೆಯೇ ಪರಿಶಿಷ್ಟ ಜಾತಿಗಳಲ್ಲಿ ಹಿಡುವಳಿಗಳಲ್ಲಿ ಶೇ.೯೨ರಷ್ಟು ಹಿಡುವಳಿಗಳು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಗಳಾಗಿವೆ. ಅಂಕಿಅಂಶಗಳು ಚಾಲ್ತಿಯಲ್ಲಿರುವ ಉಳುಮೆ ಹಿಡುವಳಿಗಳ ವಿಷಯಕ್ಕೆ ಬರುವುದಾದರೆ ಒಂದು ಸಾಮಾಜಿಕ ಗುಂಪಾಗಿ ಪರಿಶಿಷ್ಟ ಜಾತಿಗಳು ಯಾವ ಪ್ರಮಾಣದಲ್ಲಿ ವಂಚನೆಗೆ ಗುರಿಯಾಗಿದ್ದಾರೆನ್ನುವುದನ್ನು ತೋರಿಸಿಕೊಡುತ್ತವೆ. ಚಾಲ್ತಿ ಹಿಡುವಳಿಗಳ ವಿಷಯದಲ್ಲಿ ವಿವಿಧ ಜಾತಿಗಳ ನಡುವೆ ಇರುವ ವ್ಯತ್ಯಾಸಗಳು ತೋರಿಸಿಕೊಡುವ ಮೂಲಭೂತ ತೊಡಕುಗಳನ್ನು ಬಹುಪಾಲು ರಾಜ್ಯಗಳು ಉಪೇಕ್ಷಿಸುವುದರಿಂದ ಅವುಗಳಲ್ಲಿ ಯಾವುದೇ ಮಹತ್ವದ ಬದಲಾವಣೆಗಳು ಬರದಿರುವುದನ್ನು ಸಾಬೀತು ಮಾಡುತ್ತವೆ.

 

ಆದರೆ ಹೆಚ್ಚುತ್ತಿರುವ ಭೂ ವಿಭಜೀಕರಣವು ಕೃಷಿ ಉತ್ಪಾದನೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನೇನಾದರೂ ಬೀರಬಲ್ಲದೇ? ಭೂ ಹಿಡುವಳಿಯ ಗಾತ್ರ ಮತ್ತು ಕೃಷಿ ಉತ್ಪಾದಕತೆಯ ನಡುವೆ ಗುರಿತಿಸಲಾದ ವಿಲೋಮ ಸಂಬಂಧಗಳ ಬಗ್ಗೆ ೧೯೬೦-೭೦ ದಶಕದಲ್ಲಿ ತೀವ್ರವಾದ ಚರ್ಚೆಗಳು ನಡೆದಿದ್ದವು. ೨೦೧೧ರಲ್ಲಿ ಪ್ರಕಟವಾದ ನ್ಯಾಷನಲ್ ಸ್ಯಾಂಪಲ್ ಸರ್ವೆಯ ಅಂಕಿಅಂಶಗಳನ್ನು ಬಳಸಿಕೊಂಡು ನಡೆದಿರುವ ಇತ್ತೀಚಿನ ಸಂಶೋಧನೆಗಳು ಭಾರತದಲ್ಲಿ ಈಗಲೂ ಸಣ್ಣ ಹಿಡುವಳಿಗಳೇ ದೊಡ್ಡ ಹಿಡುವಳಿಗಳಿಗಿಂತ ಹೆಚ್ಚಿನ ಉತ್ಪಾದಕತೆಯನ್ನು ಹೊಂದಿವೆ ಎಂಬುದನ್ನು ಮತ್ತೊಮ್ಮೆ ಧೃಢಪಡಿಸಿವೆ. ಆದರೆ ಅದೇ ಸಮಯದಲ್ಲಿ ಸಣ್ಣಹಿಡುವಳಿಗಳ ತಲಾವಾರು ಉತ್ಪಾದಕತೆ ಮಾತ್ರ ಕಡಿಮೆಯಾಗಿರುವುದನ್ನೂ ಮತ್ತು ಬಡತನವು ಹೆಚ್ಚಾಗಿರುವುದನ್ನೂ ಸಹ ತೋರಿಸುತ್ತದೆ. ಅಷ್ಟೇ ಅಲ್ಲದೆ ಸಣ್ಣ ಹಿಡುವಳಿದಾರರ ಅತ್ಯಂತ ಸಣ್ಣ ಪ್ರಮಾಣದ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಮಾತ್ರ ಸಾಂಸ್ಥಿಕ ಸಾಲಗಳು ದೊರೆಯುತ್ತಿದ್ದು ಅದಕ್ಕೂ ಕೂಡಾ ಅವರು ಮಧ್ಯವರ್ತಿಗಳನ್ನೇ ಅವಲಂಬಿಸಬೇಕಿದೆ.

 

ಮೇಲಾಗಿ ಒಂದು ಹೆಕ್ಟೇರ್ಗಿಂತ ಜಾಸ್ತಿ ಹಿಡುವಳಿ ಹೊಂದಿರುವ ರೈತರ ಲೆಕ್ಕದಲ್ಲಿ ಮಾತ್ರ ಒಟ್ಟಾರೆ ಎಲ್ಲಾ ಮೂಲದ ಆದಾಯದಿಂದ ದಿನಬಳಕೆ ವೆಚ್ಚವನ್ನು ತೆಗೆದರೆ ಮಾಹೆಯಾನ ಸ್ವಲ್ಪ ಮಟ್ಟದ ಆದಾಯ ಕಂಡುಬರುತ್ತದೆಂದು ೨೦೧೩ರಲ್ಲಿ ನಡೆಸಿದ ಸ್ಥಿತಿಗತಿ ಅಂದಾಜು ಸರ್ವೆಯು ಸ್ಪಷ್ಟಪಡಿಸುತ್ತದೆ. ಹೀಗಾಗಿ ಒಂದು ಹೆಕ್ಟೇರ್ಗಿಂತ ಕಡಿಮೆ ಇರುವ ಹಿಡುವಳಿಗಳು ರೈತ ಜೀವನಕ್ಕೆ ಬೇಕಾದಷ್ಟು ಆದಾಯ ತರದಷ್ಟು ಸಣ್ಣವಾಗಿವೆ. ಆದ್ದರಿಂದಲೇ ಒಂದು ಹೆಕ್ಟೇರ್ ಗಿಂತ ಸಣ್ಣದಾದ ಅತಿ ಸಣ್ಣ ಹಿಡುವಳಿಗಳು ರೈತಾಪಿಗೆ ಬೇಕಾದ ಆದಾಯವನ್ನು ತಂದುಕೊಡಲಾರವುಕೃಷಿಮೂಲದಿಂದ ಆದಾಯವು ಕಡಿಮೆಯಾಗುತ್ತಿರುವುದೇ ಕೃಷಿ ಬಿಕ್ಕಟ್ಟಿಗೆ ಕಾರಣವಾಗಿದೆ. ಮತ್ತು ಭೂಮಿಯ ನಿರಂತರ ವಿಭಜೀಕರಣ ವಿದ್ಯಮಾನಕ್ಕೆ ಒಂದು ಪ್ರಮುಖ ಕಾರಣವಾಗಿದೆ. ೨೦೧೫-೧೬ರ ಕೃಷಿ ಸೆನ್ಸಸ್ಸಿನ ಪ್ರಕಾರ ದೇಶದ ಒಟ್ಟಾರೆ ಹಿಡುವಳಿದಾರರಲ್ಲಿ ಶೇ.೬೮.೫೨%ನಷ್ಟು ಹಿಡುವಳಿದಾರರು ಅತಿ ಸಣ್ಣ ಹಿಡುವಳಿದಾರ ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ ಪರಿಶಿಷ್ಟ ಜಾತಿಗಳಲ್ಲಿ ಪ್ರಮಾಣ ಶೇ.೭೮.೦೬ರಷ್ಟಿದೆ. ವರ್ಗವೇ ಇಂದು ಭಾರತದ ಕೃಷಿ ಸಮುದಾಯದಲ್ಲಿ ಅತ್ಯಂತ ದಿವಾಳಿಯೆದ್ದಿದೆ. ಇದರ ಜೊತೆಗೆ ಹಲವಾರು ಅಧ್ಯಯನಗಳು ಈಗಾಗಲೇ ತೋರಿಸಿಕೊಟ್ಟಿರುವಂತೆ ಜಾತಿ ಆಧಾರಿತ ತಾರತಮ್ಯವೂ ಸಹ ಅವರನ್ನು ಅನಾನುಕೂಲಕರ ಪರಿಸ್ಥಿತಿಗೆ ದೂಡುತ್ತಿದೆ. ಏಕೆಂದರೆ ಅದೇ ಕಾರಣಕ್ಕಾಗಿಯೇ ಅವರಿಗೆ ಸಂಪನ್ಮೂಲಗಳ ಲಭ್ಯತೆ ಇರುವುದಿಲ್ಲ. ಹೀಗಾಗಿ ಉತ್ಪಾದಕತೆಯು ಕಡಿಮೆಯಾಗುತ್ತದೆ. ಮತ್ತು ಅದರಿಂದಾಗಿ ಆದಾಯವು ಕಡಿಮೆಯಾಗುತ್ತದೆ.  

 

ಕೃಷಿಯಾಚೆಗಿನ ಮತ್ತು ಕೃಷಿಯೇತರ ಉದ್ಯೋಗಾವಕಾಶಗಳ ಕೊರತೆ ಇರುವ ಸನ್ನಿವೇಶದಲ್ಲಿ ಭೂಮಿಯ ವಿಭಜೀಕರಣವು ಕೃಷಿ ಬಿಕ್ಕಟ್ಟು ತೀವ್ರವಾಗುತ್ತಿರುವುದರ ಮತ್ತು ಕೃಷಿಯನ್ನು ಹೊರತಾದ ಬೇರೆ ಯಾವ ದಾರಿಯೂ ಇಲ್ಲದೆ ಅದಕ್ಕೆ ಕಚ್ಚಿಕೊಂಡ ರೈತಾಪಿ ದಿವಾಳೆಯೇಳುತ್ತಿರುವುದರ ಚಿಹ್ನೆಗಳಷ್ಟೇ ಆಗಿವೆ. ಅವರ ಬದುಕಿನ ಸುಧಾರಣೆಯಾಗಬೇಕೆಂದರೆ ಸಣ್ಣ ಸಣ್ಣ ಕೃಷಿ ಭೂಮಿಗನ್ನು ಒಟ್ಟಾಗಿಸಬೇಕು. ಹಾಗೂ ಮೂಲಕ ಲಾಭದಾಯಕ ಕೃಷಿಗೆ ಎಷ್ಟು ಭೂಮಿ ಬೇಕೋ ಅಂಥಾ ಆರ್ಥಿಕತೆ ಕೃಷಿಯಲ್ಲೂ ಜಾರಿಯಾಗಬೇಕು. ಗೇಣಿ ಪದ್ಧತಿಗೆ ಮರು ಮಾನ್ಯತೆ ನೀಡುವ, ಗೇಣಿ ಮಾರುಕಟ್ಟೆಯನು ಉದಾರೀಕರಿಸುವ, ಭೂ-ಬ್ಯಾಂಕನ್ನು ಸ್ಥಾಪಿಸುವಂಥ ಹಲವಾರು ಪ್ರಸ್ತಾಪಗಳನ್ನು ಈಗಾಗಲೇ ವಿಷದವಾಗಿ ಚರ್ಚಿಸಲಾಗುತ್ತಿದ್ದರೂ ಸಣ್ಣ ಮತ್ತು ಅತಿ ಸಣ್ಣ ರೈತಾಪಿಗಳ ಹಿಡುವಳಿಗಳನ್ನು ಒಟ್ಟುಗೂಡಿಸುವುದು ಅಷ್ಟು ಸುಲಭದ ಪ್ರಕ್ರಿಯೆಯಲ್ಲ. ಏಕೆಂದರೆ ಅದನ್ನು ಅನುವು ಮಾಡಲು ಬೇಕಾದ ನಿಖರವಾದ ಭೂ ದಾಖಲೆಗಳೇ ಇಲ್ಲ. ಹಿಡುವಳಿಗಳ ಒಟ್ಟೂಗೂಡಿಸುವ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನ ಭೂ ದಾಖಲೆಗಳ ಮತ್ತು ಒಡೆತನಗಳ ತಪಶೀಲನ್ನು ಸರಿಪಡಿಸಬೇಕಾಗಿರುವುದು ಅತ್ಯಗತ್ಯಸಹಕಾರಿ ಕೃಷಿ ಮತ್ತು ಸಣ್ಣ ಹಾಗೂ ಅತಿ ಸಣ್ಣ ಕೃಷಿಕರನ್ನು ಉತ್ಪಾದಕ ಕಂಪನಿಗಳಾಗಿ ಸಂಘಟಿಸುವುದು ಸಹ ಹಿಡುವಳಿಯ ವಿಭಜೀಕರಣದ ಸಮಸ್ಯೆಯನ್ನು ನೀಗಿಸಲು ಒಂದು ಒಳ್ಳೆಯ ಉಪಾಯ. ಆದರೆ ಇದರಲ್ಲಿ ಪ್ರಭುತ್ವವು ಸಾಮಾಜಿಕವಾಗಿ ಅಲಕ್ಷ್ಯಕ್ಕೊಳಗಾದ ಸಮುದಾಯಗಳಿಗೆ ಹೆಚ್ಚೆಚ್ಚು ಭೂಮಿಯನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುವ ಮೂಲP ಸಕ್ರಿಯ ಪಾತ್ರ ವಹಿಸಬೇಕಾಗುತ್ತದೆ. ಆದರೆ ಬಹುಪಾಲು ರಾಜ್ಯ ಸರ್ಕಾರಗಳು ಅಗತ್ಯವಿದ್ದ ಭೂ ಹಾಗೂ ಕೃಷಿ ಸುಧಾರಣೆಯನ್ನು ಜಾರಿಗೆ ತರುವಲ್ಲಿ ವಿಫಲವಾಗಿವೆ

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...