ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೂತನ ಕೊಳವೆಬಾವಿ ಲೋಕಾರ್ಪಣೆ ನೀರಿನ ಸದ್ಬಳಕೆಗೆ ಶಾಸಕ ಕೆ.ಶ್ರೀನಿವಾಸಗೌಡರ ಕರೆ 

Source: sonews | By Staff Correspondent | Published on 6th November 2018, 11:42 PM | State News |

ಕೋಲಾರ: ಕೋಲಾರ ನಗರದ 26ನೇ ವಾರ್ಡಿಗೆ ಸೇರಿದ ಸಂತೇ ಮೈದಾನ ಶಿವಗಿರಿ ನಗರದಲ್ಲಿ ಕೇಂದ್ರ ಪುರಸ್ಕøತ ಅಮೃತ್ ಯೋಜನೆಯಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನಗರೋತ್ಥಾನ 3ನೇ ಹಂತ ಯೋಜನೆಯಡಿಯಲ್ಲಿ ನೂತನವಾಗಿ ಕೊರೆದು ಪಂಪು ಮೋಟಾರು ಅಳವಡಿಸಿರುವ ಕೊಳವೆ ಬಾವಿಯನ್ನು ಮಾಜಿ ಸಚಿವರು ಹಾಗೂ ಶಾಸಕರಾದ ಕೆ.ಶ್ರೀನಿವಾಸಗೌಡರು ಲೋಕಾರ್ಪಣೆ ಮಾಡಿದರು.
    
ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಆಗಮಿಸಿದ ಶಾಸಕರು ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕೊಳವೆ ಬಾವಿಯನ್ನು ಟೇಪ್ ಕಟ್ ಮಾಡುವ ಮೂಲಕ ಮೂಲಕ ಚಾಲನೆ ನೀಡಿದರು.
    
ನಂತರ ಮಾತನಾಡಿದ ಶಾಸಕರು ಈ ಭಾಗದಲ್ಲಿ ನೀರಿಗೆ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದು, ಈ ದಿನ ಉದ್ಘಾಟನೆಯಾದ ನೀರಿನ ಮೂಲವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
    
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಮತಿ ಲಕ್ಷ್ಮಮ್ಮ, ಸ್ಥಳೀಯ ಪ್ರಮುಖರಾದ ಮೂರಾಂಡಹಳ್ಳಿ ಗೋಪಾಲ್, ಶ್ರೀಕೃಷ್ಣ, ಎಂ.ಚಂದ್ರಮೌಳಿ, ಪುಷ್ಪ ಡೆಕೋರೇಶನ್ ಶಂಕರ್, ದಯಾನಂದ್, ಸೊಣ್ಣೇಗೌಡ, ಆರ್. ರಾಮಚಂದ್ರಯ್ಯ, ಉಪಧ್ಯಾಯರಾದ ಉದಯ್, ಮರಿಯಪ್ಪ, ಕಿರಣ್, ಉಮಾಪತಿ, ಆಂಜಿನಪ್ಪ, ಯತಿರಾಜ್, ರೂಪ್‍ಸಿಂಗ್, ಲಕ್ಷ್ಮಿನಾರಾಯಣ, ನವಶಕ್ತಿ ಈಶ್ವರ, ಸಿ.ವೆಂಕಟೇಶ್, ನಾರಾಯಣಮ್ಮ, ತೇಜಸ್ವಿನಿ, ಗಂಗಮ್ಮ, ರವಿಶಂಕರ್, ಅಹಮದ್ ಫೀರ್(ಜಾವೂ) ಅಶೋಕ್, ಮೃತ್ಯುಂಜಯ, ಶ್ರೀನಾಥ್, ಕೃಷ್ಣಸಿಂಗ್, ಶಿವರಾಜ್, ರಾಜೇಶ್, ಐಸ್ ನಾಗರಾಜ್, ನಂಜಪ್ಪ, ಪಾಪಣ್ಣ, ಮುನಿಯಪ್ಪ, ಕೃಷ್ಣಮೂರ್ತಿ, ಗಿರೀಶ್, ಶಂಕರ್, ಮೋಹನ್, ಗುರು, ದೇವರಾಜು ಇನ್ನಿತರರು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...