ಪಂಕ್ಚರ್ ಶಾಪ್ ಕಾರ್ಮಿಕನ ಮಗಳು ಪಿಯುಸಿಯಲ್ಲಿ ರಾಜ್ಯಕ್ಕೆ ಟಾಪರ್!

Source: so news | By Manju Naik | Published on 16th April 2019, 12:59 AM | State News | Don't Miss |

 

ಬಳ್ಳಾರಿ: ಕಾಲೇಜು ಮುಗಿದ ಬಳಿಕ ಬಾಳ ಬುತ್ತಿ ತುಂಬಿಸಿಕೊಳ್ಳಲು ಪಂಕ್ಚರ್ ಶಾಪ್​ನಲ್ಲಿ ಕೆಲಸ ಮಾಡುತ್ತ ಸಮಯ ಸಿಕ್ಕಾಗಲೆಲ್ಲ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.ಜಿಲ್ಲೆಯ ಕೊಟ್ಟೂರು ತಾಲೂಕಿನ‌ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಕುಸುಮಾ ಉಜೈನಿ 594 ಅಂಕ ಪಡೆಯುವ ಮುಲಕ ಇಡೀ ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಾಲೇಜು ಮುಗಿದ ತಕ್ಷಣವೇ ನಾನು‌ ನನ್ನ ತಂದೆಯೊಂದಿಗೆ ಪಂಕ್ಚರ್ ಶಾಪ್​ಗೆ ಹೋಗುತ್ತಿದ್ದೆ. ದ್ವಿಚಕ್ರ ವಾಹನಗಳ ಚಕ್ರದ ಟ್ಯೂಬ್​ನ್ನು ಪಾನರ್ ಹಿಡಿದು ಪಂಕ್ಚರ್ ಹಾಕುವ‌ ಮುಖೇನ ನನ್ನ ತಂದೆಗೆ ಸಹಾಯ ಮಾಡುತ್ತಿದ್ದೆ. ನಾನು ಓದಿರೋದೆ ಕಡಿಮೆ. ಸಮಯ ಸಿಕ್ಕಾಗಲೆಲ್ಲ ಅದನ್ನ ಸದ್ಬಳಕೆ ಮಾಡಿಕೊಂಡಿರುವೆ. ರಜೆ ದಿನಗಳಲ್ಲಂತೂ ಪಂಕ್ಚರ್ ಹಾಕಿಯೇ ಓದಲು ಶುರು ಮಾಡುತ್ತಿದೆ. ಯಾಕೆಂದ್ರೆ ನಮ್ದು ಬಡ ಕುಟುಂಬ‌. ಬಾಳ ಬುತ್ತಿ ತುಂಬಿಸಿಕೊಂಡ ಮೇಲೆಯೇ ಓದುತ್ತಾ ಕುಳಿತುಕೊಳ್ಳುತ್ತಿದ್ದೆ.‌ ನಾನು ರಾಜ್ಯಕ್ಕೆ ಟಾಪರ್​ ಆಗಿರುವುದು ಸಂತಸ ತಂದಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...