ಜ.೨೯ರಿಂದ ನಾಮಧಾರಿ ಸಮಾಜದ ಶ್ರೀದೇವರ ಪುನರ್ ಪ್ರತಿಷ್ಟಾ ವರ್ಧಂತಿ ಉತ್ಸವ

Source: sonews | By Staff Correspondent | Published on 28th January 2020, 10:30 PM | Coastal News |

ಭಟ್ಕಳ: ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಪುನರ್ ಪ್ರತಿಷ್ಟಾ ವರ್ಧಂತಿ ಉತ್ಸವ, ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಶ್ರೀ ದೇವರ ಪಾಲಕಿ ಉತ್ಸವವು ಜ.29ರಿಂದ ಫೆ.2ರ ತನಕ ನಡೆಯಲಿದ್ದು ಭಕ್ತ ಜನರು ಅಧಿಕ ಸಂಖ್ಯೆಯಲ್ಲಿ ಬಂದು ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕು ಎಂದು ನಾಮಧಾರಿ ಸಮಾಜದ ಗುರುಮಠದ ಅಧ್ಯಕ್ಷ ಎಂ. ಆರ್. ನಾಯ್ಕ ಕೋರಿದ್ದಾರೆ. 

ಅವರು ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಸಭಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಕಾರ್ಯಕ್ರಮದ ಕುರಿತು ವಿವರವನ್ನು ನೀಡುತ್ತಿದ್ದರು. 

ಕಳೆದ ಮೂರು ವರ್ಷಗಳ ಹಿಂದೆ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನವನ್ನು ಸಂಪೂರ್ಣ ಶಿಲಾಮಯ ದೇವಸ್ಥಾನವನ್ನಾಗಿ ನಿರ್ಮಾಣ ಮಾಡಲಾಗಿದ್ದು ವರ್ಧಂತ್ಯುತ್ಸವದ ಅಂಗವಾಗಿ ಜ.29ರಂದು ಬುಧವಾರ ಬೆಳಿಗ್ಗೆ ಗಣಪತಿ ಪೂಜೆ, ವಿಶ್ವಕ್ಸೇನಾರಾಧನೆ, ದೇವನಾಂದಿ, ಪುಣ್ಯಾಹವಾಚನ, ಬ್ರಾಹ್ಮಣಾರ್ಚನೆ, ಋತ್ವಿಕ್‍ವರ್ಣನೆ, ಸ್ಥಳಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ಕಳಶಸ್ಥಾನನೆ. ಜ.30ರಂದು ಗುರುವಾರ ಬೆಳಿಗ್ಗೆ ವಿಶ್ವೇಕ್ಸೇನಾರಾಧನೆ, ಪುಣ್ಯಹ, ಕಳಶ ಪೂಜೆ, ಕಲಾವೃದ್ಧಿ ಹೋಮ, ಕಲಶಾಭಿಷೇಕ, ಮಹಾ ನೈವೇದ್ಯ, ಮಧ್ಯಾಹ್ನ ಮಹಾಪೂಜೆ, ವೇದಾಧಿ ವಾಸ್ತುಮೊರೈ ಹಾಗೂ ಮಹಾ ಅನ್ನ ಸಂತರ್ಪಣೆ ನಡೆಯಲಿದ್ದು ಸಂಜೆ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 8 ರಿಂದ ಓಂಕಾರ ಕಲಾವಿದರು ತೆಕ್ಕಟ್ಟೆ ಅವರಿಂದ ಡಬಲ್ ಗೇಮ್ ಹಾಸ್ಯಮಯ ನಾಟಕ ನಡೆಯಲಿದೆ. ಜ.31ರಂದು ಶುಕ್ರವಾರ ಬೆಳಿಗ್ಗೆ ತಂತ್ರಿಗಳಾದ ವೇದಮೂರ್ತಿ ಡಿ.ವಿ.ಕೃಷ್ಣ ಭಟ್ಟ ಬೆಂಗಳೂರು, ಪ್ರಧಾನ ಅರ್ಚಕ ವೇ.ಮೂ. ಮುರಳೀಧರ ಆರ್. ಅವರ ನೇತೃತ್ವದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ, ಮಧ್ಯಾಹ್ನ ಮಹಾಪೂಜೆ, ವೇದಾಧಿ ವಾಸ್ತುಮೊರೈ, ಮಹಾ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಹರಿಸೇವಾ ಕುಣಿತ, ರಾತ್ರಿ 8ಕ್ಕೆ ಶ್ರೀ ಪದ್ಮಾವತಿ ಅಮ್ಮನವರ ಪಾಲಕಿ ಆಗಮನ, 9 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಫೆ.1 ಶನಿವಾರ ಬೆಳಿಗ್ಗೆಯಿಂದ ಗಣಪತಿ ಪೂಜೆ, ವಿಶ್ವಕ್ಸೇನಾರಾಧನೆ, ಪುಣ್ಯಾಹವಾಚನ, ಮಹಾ ಸಂಕಲ್ಪ, ಕಳಶಾರಾಧನೆ, ಪುರುಷ ಸೂಕ್ತ ಹೋಮ, ಗಣ ಹೋಮ, ಶ್ರೀ ದೇವರಿಗೆ ತುಲಾಭಾರ ಸಮರ್ಪಣೆ ನಂತರ 10.30ರಿಂದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ಮಧ್ಯಾಹ್ನ ಮಹಾ ಮಂಗಳಾರತಿ, ಮಹಾ ಅನ್ನ ಸಂತರ್ಪಣೆ, ಸಂಜೆ 5 ಗಂಟೆಯಿಂದ ಶ್ರೀ ದೇವರ ಪಾಲಕಿ ಉತ್ಸವ ನಗರದಾದ್ಯಂತ ನಡೆಯಲಿದೆ. ರಾತ್ರಿ 12 ಗಂಟೆಗೆ ಮಹಾ ಮಂಗಳಾರತಿ, ವೇದಾದಿ ಶಾತ್ತುಮೊರೈ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದೂ ಎಂ.ಆರ್. ನಾಯ್ಕ ತಿಳಿಸಿದರು. 

ಗುರುಮಠದ ಗೌರವಾಧ್ಯಕ್ಷ ಡಿ.ಬಿ. ನಾಯ್ಕ ಮಾತನಾಡಿ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನವು ಸುಮಾರು 800 ವರ್ಷಗಳ ಇಹಾಸವನ್ನು ಹೊಂದಿದ್ದು ಪುರಾತನ ದೇವಸ್ಥಾನವಾಗಿದೆ. ಜೀರ್ಣೋದ್ಧಾರದ ಬಳಿಕ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯೂ ಜಾಸ್ತಿಯಾಗಿದ್ದು ನಾಮಧಾರಿ ಸಮಾಜಕ್ಕೆ ಮಾತ್ರ ಸೀಮಿತವಾಗಿದ್ದ ದೇವಸ್ಥಾನಕ್ಕೆ ಇಂದು ಎಲ್ಲಾ ವರ್ಗದ ಭಕ್ತರು ಬಂದು ಪ್ರಾರ್ಥಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ವೈಕುಂಠ ಎಕಾದಶಿಯನ್ನು ಆಚರಿಸಲು ಆರಂಭಿಸಿದ ನಂತರ ಭಕ್ತರಲ್ಲಿ ಚೈತನ್ಯ ಮೂಡಿದ್ದು ದೂರವಾಗುತ್ತಿದ್ದ ಧಾರ್ಮಿಕ ಆಚರಣೆಗಳು ಮತ್ತೆ ಹೆಚ್ಚುತ್ತಿರುವುದು ಸಮಾಜದಲ್ಲಿ ಒಂದು ಉತ್ತಮ ಬೆಳವಣಿಗೆ ಎಂದರು. 

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ವಿವಿಧ ಕೂಟಗಳ ಅಧ್ಯಕ್ಷರು ಉಪಸ್ಥಿತರಿದ್ದರು. 

 


 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...