ಪುಲಿಟ್ಝರ್ ಪ್ರಶಸ್ತಿ ವಿಜೇತ ಫೋಟೊ ಜರ್ನಲಿಸ್ಟ್ ದಾನಿಶ್ ಸಿದ್ದೀಕಿ ಗುಂಡಿಗೆ ಬಲಿ ಅಫ್ಘಾನ್ ಪಡೆ-ತಾಲಿಬಾನ್ ಯುದ್ಧ ವರದಿಯ ಸಂದರ್ಭದಲ್ಲಿ ನಡೆದ ಕೃತ್ಯ

Source: VB | By S O News | Published on 17th July 2021, 6:23 PM | National News |

ಸ್ಪಿನ್ ಬೋಲ್ದಾಕ್: ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತದ ಸ್ಪಿನ್ ಬೋಲ್ದಾಕ್‌ನಲ್ಲಿ ಶುಕ್ರವಾರ ಅಫ್ಘಾನ್ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವಿನ ಘರ್ಷಣೆಯಲ್ಲಿ ರಾಯಿಟರ್ಸ್ ಫೋಟೊ ಪತ್ರಕರ್ತ, ಭಾರತದ ದಾನಿಶ್ ಸಿದ್ದೀಕಿ ಅವರು ಹತ್ಯೆಗೀಡಾಗಿದ್ದಾರೆ.

ಸ್ಪಿನ್ ಬೋಲ್ಟಾಕ್‌ನ ಮುಖ್ಯ ಮಾರುಕಟ್ಟೆ ಪ್ರದೇಶವನ್ನು ಮರಳಿ ಪಡೆದುಕೊಳ್ಳಲು ಅಫ್ಘಾನ್ ವಿಶೇಷ ಪಡೆಗಳು ಹೋರಾಟ ನಡೆಸುತ್ತಿದ್ದಾಗ ಗುಂಡಿಗೆ ಸಿದ್ದೀಕಿ ಮತ್ತು ಹಿರಿಯ ಅಫ್ಘಾನಿ ಅಧಿಕಾರಿಯೋರ್ವರು ಬಲಿಯಾಗಿದ್ದಾರೆ ಎಂದು ಅಫ್ಘಾನಿಸ್ತಾನದ ಕಮಾಂಡರ್ ಓರ್ವರು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸಿದ್ದೀಕಿ ಈ ವಾರದ ಆರಂಭದಲ್ಲಿ ಕಂದಹಾರ್‌ನಲ್ಲಿ ನೆಲೆಯನ್ನು ಹೊಂದಿರುವ ಅಫ್ಘಾನ್ ವಿಶೇಷ ಪಡೆಗಳೊಂದಿಗೆ ಸೇರಿಕೊಂಡು ಅಫ್ಘಾನ್ ಕಮಾಂಡೋಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವಿನ ಯುದ್ಧವನ್ನು ವರದಿ ಮಾಡುತ್ತಿದ್ದರು.

ನಾವು ತುರ್ತಾಗಿ ಹೆಚ್ಚಿನ ಮಾಹಿತಿಗಳನ್ನು ಕೋರಿದ್ದೇವೆ ಮತ್ತು ಪ್ರದೇಶದಲ್ಲಿಯ ಅಧಿಕಾರಿಗಳ ಸಂಪರ್ಕದಲ್ಲಿದ್ದೇವೆ ಎಂದು ರಾಯಿಟರ್ಸ್ ಅಧ್ಯಕ್ಷ ಮೈಕೆಲ್ ಫ್ರಿಡೆನ್‌ಬರ್ಗ್ ಮತ್ತು ಮುಖ್ಯ ಸಂಪಾದಕಿ ಅಲೆಸಾಂಡ್ರಾ ಗಲೋನಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ದಾನಿಶ್ ಅಪ್ರತಿಮ ಪತ್ರಕರ್ತ, ಪ್ರೀತಿಯ ಪತಿ ಮತ್ತು

ತಂದೆಯಾಗಿದ್ದರು ಹಾಗೂ ಹೆಚ್ಚಾಗಿ ಪ್ರೀತಿಸಲ್ಪಡುತ್ತಿದ್ದ ಸಹೋದ್ಯೋಗಿಯಾಗಿದ್ದರು. ಈ ಸಂಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದೊಂದಿಗಿದ್ದೇವೆ' ಎಂದು ಹೇಳಿಕೆಯು ತಿಳಿಸಿದೆ.

ಸಿದ್ದೀಕಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ವರದಿಗಾರಿಕೆಗಾಗಿ 2018ರ ಪುಲಿಟ್ಝರ್ ಪ್ರಶಸ್ತಿಯನ್ನು ಗೆದ್ದಿದ್ದ ರಾಯಿಟರ್ಸ್ ಫೋಟೊಗ್ರಫಿ ತಂಡದ ಸದಸ್ಯರಾಗಿದ್ದರು.

2010ರಿಂದಲೂ ರಾಯಿಟರ್ಸ್ ಫೋಟೊ ಜರ್ನಲಿಸ್ಟ್ ಆಗಿದ್ದ ಸಿದ್ದೀಕಿ ಅಫ್ಘಾನಿಸ್ತಾನ ಮತ್ತು ಇರಾಕ್‌ಗಳಲ್ಲಿಯ ಯುದ್ಧಗಳು, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಕಾಂಗ್ ಪ್ರತಿಭಟನೆಗಳು ಮತ್ತು ನೇಪಾಳ ಭೂಕಂಪಗಳ ವರದಿಗಾರಿಕೆಯನ್ನು ಮಾಡಿದ್ದರು. ತಾಲಿಬಾನ್ ಹೋರಾಟಗಾರರು ಬುಧವಾರ ಗಡಿ ಪ್ರದೇಶವನ್ನು ವಶಪಡಿಸಿಕೊಂಡಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...